ಉಪಗ್ರಹ ತಯಾರಿಕೆಯತ್ತ ಹೆಚ್‌ಎಎಲ್, ಬಿಎಚ್‌ಇಎಲ್
ಬೆಂಗಳೂರು : ಸರ್ಕಾರಿ ಸ್ವಾಮ್ಯದ ಹೆಚ್‌ಎಎಲ್ ಸಂಸ್ಥೆ, ಬಿಹೆಚ್‌ಇಎಲ್ ಜೊತೆ ಸೇರಿ ಇಸ್ರೋ ಉಪಗ್ರಹ ಕೇಂದ್ರಕ್ಕೆ ಉಪಗ್ರಹ ನಿರ್ಮಿಸಿ ಕೊಡಲು ಮುಂದಾಗಿದೆ.
ಸುಮಾರು 1000 ಕೆ.ಜಿಗೂ ಕಡಿಮೆ ತೂಕದ ಐಆರ್‌ಎಸ್ ಶ್ರೇಣಿಯ ಉಪಗ್ರಹಗಳ ಬಿಡಿ ಭಾಗಗಳನ್ನು ನಿರ್ಮಿಸಿ, ಇಸ್ರೋ ಕೇಂದ್ರದ ಅಗತ್ಯಕ್ಕೆ ತಕ್ಕಂತೆ ಸಂಯೋಜಿಸಲು ಯೋಜನೆ ರೂಪಿಸಿವೆ.
ಸಣ್ಣಗಾತ್ರದ ಉಪಗ್ರಹಗಳ ಬೇಡಿಕೆ ಹೆಚ್ಚಾದ್ದರಿಂದ ಹಾಗೂ ಬಾಹ್ಯಾಕಾಶ ಸಂಶೋಧನೆಗೆ ಹೆಚ್ಚಿನ ಪ್ರಾಮುಖ್ಯತೆ ನೀಡುವ ಉದ್ದೇಶದಿಂದ, ಉಪಗ್ರಹ ತಯಾರಿಕೆ ಕಾರ್ಯವನ್ನು ಹೊರಗುತ್ತಿಗೆಯಾಗಿ ನೀಡಲು ಇಸ್ರೋ ಕೇಂದ್ರ ಮುಂದಾಗಿದೆ.
ಹೆಚ್‌ಎಎಲ್ ಹಾಗೂ ಬಿಹೆಚ್‌ಇಎಲ್ ಅಲ್ಲದೆ ಉಪಗ್ರಹ ತಯಾರಿಕಾ ಮಾರುಕಟ್ಟೆಯಲ್ಲಿ, ಇನ್ನೂ 10 ಪ್ರಮುಖ ಉತ್ಪಾದನಾ ಸಂಸ್ಥೆಗಳಿವೆ. ಆದರೆ ಉಪಗ್ರಹ ತಯಾರಿಕೆಯ ಗುತ್ತಿಗೆ ಸಿಗುವ ಬಗ್ಗೆ ಹೆಚ್‌ಎಎಲ್ ಆಶಾವಾದವನ್ನು ಹೊಂದಿದೆ.
(ಏಜನ್ಸೀಸ್)












Click it and Unblock the Notifications