1993ರ ಮುಂಬೈ ಸ್ಫೋಟ : ಐವರಿಗೆ 3 ವರ್ಷ ಕಠಿಣ ಸಜೆ
ಮುಂಬಯಿ : ಇಲ್ಲಿನ ವಿಶೇಷ ಟಾಡಾ ನ್ಯಾಯಾಲಯ, 1993ರ ಸರಣಿ ಬಾಂಬ್ ಸ್ಫೋಟ ಪ್ರಕರಣದ 5 ಜನ ಆರೋಪಿಗಳಿಗೆ 3 ವರ್ಷದ ಕಠಿಣ ಸಜೆಯನ್ನು ಶುಕ್ರವಾರ ವಿಧಿಸಿದೆ.
5 ಜನ ಅಪರಾಧಿಗಳಲ್ಲಿ ಮೂವರು ಮೀನುಗಾರರಾಗಿದ್ದಾರೆ. ಉಳಿದಿಬ್ಬರು ಅವರಿಗೆ ಸಹಾಯಕರಾಗಿದ್ದರು ಎನ್ನಲಾಗಿದೆ. ಈ ಐವರಿಗೆ ತಲಾ 25,000 ರೂ ದಂಡವನ್ನು ನ್ಯಾಯಾಲಯ ವಿಧಿಸಿದೆ.
ಸಂಜಯ್ ದತ್ ಗೈರು ಹಾಜರಿ:
ಬಾಂಬ್ ಸ್ಫೋಟದ ಆರೋಪಿಯಾಗಿರುವ ನಟ ಸಂಜಯ್ ದತ್ ಅವರು ಜ್ವರದಿಂದ ಬಳಲುತ್ತಿದ್ದು, ಅನಾರೋಗ್ಯದ ಕಾರಣ ನ್ಯಾಯಾಲಯಕ್ಕೆ ಹಾಜರಾಗಿಲ್ಲ ಎಂದು ಸಂಜಯ್‌ದತ್‌ರ ವಕೀಲ ಫರ್ಹಾನ ಷಾ, ನ್ಯಾಯಾಲಯಕ್ಕೆ ತಿಳಿಸಿದ್ದಾರೆ.
ಸಂಜಯ್ ಸೇರಿದಂತೆ ಸುಮಾರು 100 ಜನ ಆರೋಪಿಗಳಿಗೆ ಶುಕ್ರವಾರ ನ್ಯಾಯಾಲಯಕ್ಕೆ ಹಾಜರಿರುವಂತೆ ಸಮನ್ಸ್ ಕಳಿಸಲಾಗಿತ್ತು.
(ಏಜನ್ಸೀಸ್)












Click it and Unblock the Notifications