ಹೈದರಾಬಾದ್‌ನ ಮೆಕ್ಕಾಮಸೀದಿಯಲ್ಲಿ ಬಾಂಬ್!! 6 ಬಲಿ
ಹೈದರಾಬಾದ್ : ಹೈದರಾಬಾದ್‌ನ ಚಾರ್‌ಮಿನರ್ ಬಳಿಯ ಮೆಕ್ಕಾ ಮಸೀದಿಯಲ್ಲಿ ಪ್ರಬಲ ಬಾಂಬ್ ಸ್ಫೋಟಗೊಂಡಿದ್ದು, 6ಮಂದಿ ಮೃತಪಟ್ಟಿದ್ದಾರೆ.
ಶುಕ್ರವಾರ ಮಧ್ಯಾಹ್ನ 1:30 ರ ವೇಳೆಯಲ್ಲಿ ಪ್ರಾರ್ಥನೆ ಸಲ್ಲಿಸುತ್ತಿದ್ದಾಗ ಈ ದುರಂತ ಸಂಭವಿಸಿದೆ. ಬಾಂಬ್ ಸ್ಫೋಟದಿಂದ ಸುಮಾರು 20 ಜನ ಗಾಯಗೊಂಡಿದ್ದು, ಅವರನ್ನು ಒಸ್ಮಾನಿಯಾ ಆಸ್ಪತ್ರೆಗೆ ಸಾಗಿಸಲಾಗಿದೆ. ಗಾಯಗೊಂಡವರಲ್ಲಿ ಇಬ್ಬರು ಮಕ್ಕಳು ಸೇರಿದ್ದು, ಒಟ್ಟು 4 ಜನರ ಸ್ಠಿತಿ ಚಿಂತಾಜನಕವಾಗಿದೆ ಎಂದು ಒಸ್ಮಾನಿಯಾ ಆಸ್ಪತ್ರೆಯ ಡಾಕ್ಟರ್ ಶ್ರೀನಿವಾಸ್ ಹೇಳಿದ್ದಾರೆ.
ಮಸೀದಿಯ ಬಳಿ ಇನ್ನು ಎರಡು ಸಕ್ರಿಯವಾದ ಬಾಂಬ್‌ಗಳು ಪತ್ತೆಯಾಗಿದ್ದು, ಅವುಗಳನ್ನು ನಿಷ್ಕಿೃಯಗೊಳಿಸಲಾಗಿದೆ. ಮೃತಪಟ್ಟವರ ಕುಟುಂಬಗಳಿಗೆ 5 ಲಕ್ಷ ರೂ ಪರಿಹಾರ ಧನ ಹಾಗೂ ಗಾಯಗೊಂಡವರಿಗೆ 25,000 ರೂ ನೀಡುವುದಾಗಿ ಮುಖ್ಯಮಂತ್ರಿ ವೈ. ಎಸ್. ರಾಜಶೇಖರ್ ರೆಡ್ಡಿ ಹೇಳಿದ್ದಾರೆ.
ಏಷ್ಯಾದ ಅತಿದೊಡ್ಡ ಮಸೀದಿ ಎನಿಸಿರುವ ಚಾರ್‌ಮೀನಾರಿನ ಮೆಕ್ಕಾ ಮಸೀದಿಯಲ್ಲಿ ಒಮ್ಮೆಗೆ 10, 000ಕ್ಕೂ ಅಧಿಕ ಮಂದಿ ನಮಾಜು ಮಾಡುವ ವ್ಯವಸ್ಥೆಯಿದೆ.
(ಏಜನ್ಸೀಸ್)












Click it and Unblock the Notifications