ಉಳ್ಳಾಲ ಚುನಾವಣೆ ಪ್ರಚಾರಕ್ಕೆ ಸಿಧು, ಸುಶ್ಮಾ, ಮೋದಿ...

ಬೆಂಗಳೂರು : ಉಳ್ಳಾಲ ವಿಧಾನ ಸಭಾ ಕ್ಷೇತ್ರದ ಚುನಾವಣೆ ರಂಗೇರುತ್ತಿದೆ.

ಮಾಜಿ ಕ್ರಿಕೆಟಿಗ ಮತ್ತು ಸಂಸದ ನವಜೋತ್‌ ಸಿಂಗ್‌ ಸಿಧು, ಗುಜರಾತ್‌ ಮುಖ್ಯಮಂತ್ರಿ ನರೇಂದ್ರ ಮೋದಿ, ಮಾಜಿ ಸಚಿವೆ ಸುಶ್ಮಾ ಸ್ವರಾಜ್‌ ಮತ್ತಿತರರನ್ನು ಪ್ರಚಾರಕ್ಕೆ ಕರೆತರಲು ಬಿಜೆಪಿ ರಾಜ್ಯ ಘಟಕ ಉತ್ಸುಕವಾಗಿದೆ.

ಸುದ್ದಿಗಾರರ ಜೊತೆ ಈ ಬಗ್ಗೆ ಮಾತನಾಡುತ್ತಿದ್ದ ಬಿಜೆಪಿ ವಕ್ತಾರ ಸುರೇಶ್‌ ಕುಮಾರ್‌, ರಾಜ್ಯ ಬಿಜೆಪಿ ಘಟಕದ ನಾಯಕರು ಮತ್ತು ಕಾರ್ಯಕರ್ತರು, ಹೈಕಮಾಂಡ್‌ ಮೇಲೆ ಒತ್ತಡ ಹೇರಿ, ರಾಷ್ಟ್ರೀಯ ನಾಯಕರನ್ನು ಪ್ರಚಾರಕ್ಕಾಗಿ ಕರೆತರಲಿದೆ ಎಂದರು.

ಪಕ್ಷದ ಸ್ಥಳೀಯ ನಾಯಕರು ಮನೆಮನೆಗೆ ತೆರಳಿ ಮತಯಾಚನೆ ನಡೆಸಲಿದ್ದಾರೆ. ಈ ಚುನಾವಣೆಯ ಸೋಲು-ಗೆಲುವಿನಿಂದ ದೋಸ್ತಿ ಸರ್ಕಾರಕ್ಕೆ ಯಾವುದೇ ತೊಡಕಾಗುವುದಿಲ್ಲ ಎಂದು ಸುರೇಶ್‌ ಕುಮಾರ್‌ ಅಭಿಪ್ರಾಯಪಟ್ಟರು.

(ದಟ್ಸ್‌ ಕನ್ನಡ ವಾರ್ತೆ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+