‘ಆನೆ’ಕಾಲಡಿ‘ಸೈಕಲ್’ಪುಡಿಪುಡಿ! : ಮಾಯಾ ಮತ್ತೆ ಸಿಎಂ!
ಲಖನೌ : ಉತ್ತರ ಪ್ರದೇಶದ ವಿಧಾನಸಭಾ ಚುನಾವಣೆ ಫಲಿತಾಂಶಗಳು ಶುಕ್ರವಾರ ಹೊರಬಿದ್ದಿದ್ದು, ಬಹುಜನ ಸಮಾಜ ಪಕ್ಷ ಬಹುಮತ ಪಡೆದಿದೆ.
ರಾಷ್ಟ್ರ ರಾಜಕಾರಣದ ಮೇಲೆ ಪರಿಣಾಮ ಬೀರಲಿದೆ ಎನ್ನಲಾದ ಈ ಚುನಾವಣೆಯಲ್ಲಿ, ಕಾಂಗ್ರೆಸ್ ಮತ್ತು ಬಿಜೆಪಿ ಮೋಡಿ ಅಲ್ಲಿ ಕೆಲಸ ಮಾಡಿಲ್ಲ. ಮಾಯಾವತಿ ನಾಲ್ಕನೇ ಸಲ ಮುಖ್ಯಮಂತ್ರಿಯಾಗಲು ಸಜ್ಜಾಗುತ್ತಿದ್ದಾರೆ. ಮುಲಾಯಂಸಿಂಗ್ ಯಾದವ್‌ರ ಸಮಾಜವಾದಿ ಪಕ್ಷದ ಲೆಕ್ಕಾಚಾರಗಳು ಉಲ್ಟಾಪಲ್ಟಾ ಆಗಿವೆ.
ರಾಜ್ಯದ 403ಸ್ಥಾನಗಳಲ್ಲಿ 402 ಕ್ಷೇತ್ರಗಳ ಫಲಿತಾಂಶ ಲಭ್ಯವಿದ್ದು, ಬಿಎಸ್‌ಪಿ 200ಕ್ಕೂ ಹೆಚ್ಚು ಸ್ಥಾನ ಪಡೆದಿದೆ. ಮಯಾವತಿ ಅಲೆ ಮುಂದೆ, ಸೋನಿಯಾ, ರಾಹುಲ್‌ರ ಪ್ರಭಾವ ಕಂಡು ಬಂದಿಲ್ಲ. ವ್ಯತಿರಿಕ್ತ ಫಲಿತಾಂಶಗಳು ಹೊರಬಿದ್ದ ತಕ್ಷಣ, ಉಸ್ತುವಾರಿ ಮುಖ್ಯಮಂತ್ರಿ ಸ್ಥಾನಕ್ಕೆ ಮುಲಾಯಾಂಸಿಂಗ್ ರಾಜೀನಾಮೆ ಸಲ್ಲಿಸಿದ್ದಾರೆ.
ರಾಜ್ಯಪಾಲ ಟಿ.ವಿ.ರಾಜೇಶ್ವರ್, ಮಯಾವತಿ ಅವರನ್ನು ಸರ್ಕಾರ ರಚಿಸುವಂತೆ ಆಹ್ವಾನಿಸಿದ್ದಾರೆ.
ಯಾವ ಪಕ್ಷಕ್ಕೆ ಎಷ್ಟು ಸ್ಥಾನ?
- ಒಟ್ಟು ಸ್ಥಾನಗಳು -403(ಲಭ್ಯವಿರುವ ಫಲಿತಾಂಶ-389ಸ್ಥಾನಗಳು)
- ಬಿಎಸ್‌ಪಿ- 200
- ಎಸ್‌ಪಿ - 94
- ಬಿಜೆಪಿ -49
- ಕಾಂಗ್ರೆಸ್ -21
- ಇತರೆ -25












Click it and Unblock the Notifications