ಮಹಿಳಾ ಪತ್ರಕರ್ತೆಯರ ರಾತ್ರಿ ಪಾಳಿಗೆ ನೋ ಅಬ್ಜೆಕ್ಷನ್!
ಬೆಂಗಳೂರು : ರಾತ್ರಿ ಪಾಳಿ ಕೆಲಸಕ್ಕೆ ತಡೆಯಾಡ್ಡುವ ಆದೇಶದಿಂದ, ಗೊಂದಲಕ್ಕೆ ಸಿಲುಕಿದ್ದ ಮಹಿಳಾ ಪತ್ರಕರ್ತೆಯರು ನಿಟ್ಟುಸಿರು ಬಿಟ್ಟಿದ್ದಾರೆ.
ರಾತ್ರಿ 8ರ ನಂತರ ಮಹಿಳೆಯರನ್ನು ಉದ್ಯಮಗಳಲ್ಲಿ ದುಡಿಸಿಕೊಳ್ಳುವುದನ್ನು ಸರ್ಕಾರ ನಿರ್ಬಂಧಿಸಿದೆ. ನಿರ್ಬಂಧಕ್ಕೆ ಒಳಪಟ್ಟಿರುವ ಉದ್ಯಮಗಳ ಪಟ್ಟಿಯಲ್ಲಿ ಮುದ್ರಣ ಮಾಧ್ಯಮವನ್ನು ಸಹಾ ಈ ಹಿಂದೆ ಸೇರಿಸಲಾಗಿತ್ತು. ಪ್ರಸ್ತುತ ಮುದ್ರಣ ಮಾಧ್ಯಮಕ್ಕೆ ವಿನಾಯಿತಿ ನೀಡುವುದಾಗಿ ಸರ್ಕಾರದ ಮೂಲಗಳು ಹೇಳಿವೆ.
ರಾತ್ರಿ ಪಾಳಿಯಿಂದ ಐಟಿ ಉದ್ಯಮ, ಆಸ್ಪತ್ರೆ ಸೇರಿದಂತೆ ಬೆರಳೆಣಿಕೆಯ ಕ್ಷೇತ್ರಗಳಿಗೆ ವಿನಾಯಿತಿ ನೀಡಲಾಗಿದೆ. ರಾತ್ರಿ ಪಾಳಿ ಮೇಲೆ ನಿಷೇಧ ಹಾಕುವ ಸರ್ಕಾರದ ತೀರ್ಮಾನವನ್ನು ಮಹಿಳಾ ಪರ ಸಂಘಟನೆಗಳು ಖಂಡಿಸಿವೆ. ಮಹಿಳೆಯರ ಕಲ್ಯಾಣದ ನೆಪದಲ್ಲಿ, ಅವರ ಹಕ್ಕುಗಳನ್ನು ಕಸಿಯಲಾಗುತ್ತಿದೆ ಎಂದು ಆರೋಪಿಸಿವೆ.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications