ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಷ್ಟ್ರಪತಿ ಅಬ್ದುಲ್‌ ಕಲಾಂ ಅಂದ್ರೆ ಸುಮ್ನೆ ಅಲ್ಲ.. ಗೊತ್ತಾ?

By Staff
|
Google Oneindia Kannada News

ನವದೆಹಲಿ : ನಾಲ್ಕು ದಿನಗಳ ಫ್ರಾನ್ಸ್‌ ಮತ್ತು ಗ್ರೀಸ್‌ ಪ್ರವಾಸಕ್ಕಾಗಿ ರಾಷ್ಟ್ರಪತಿ ಅಬ್ದುಲ್‌ ಕಲಾಂ ಮಂಗಳವಾರ ಪ್ರಯಾಣ ಬೆಳೆಸಿದ್ದಾರೆ.

ಕಲಾಂ ಇಲ್ಲಿಂದ ನೇರವಾಗಿ ಸ್ಟ್ರಾಸ್‌ಬರ್ಗ್‌ಗೆ ತೆರಳಲಿದ್ದಾರೆ. ಅವರು ಏಪ್ರಿಲ್‌ 25ರಂದು ಯೂರೋಪಿಯನ್‌ ಸಂಸತ್ತು ಉದ್ದೇಶಿಸಿ ಮಾತನಾಡಲಿದ್ದಾರೆ. ಆ ಮೂಲಕ ಈ ಗೌರವ ಪಡೆದ ಮೊಟ್ಟಮೊದಲ ಭಾರತೀಯ ಅಧ್ಯಕ್ಷ ಎಂಬ ಕೀರ್ತಿಗೂ ಪಾತ್ರರಾಗಲಿದ್ದಾರೆ. ‘ಡೈನಮಿಕ್ಸ್‌ ಆಫ್‌ ಯೂನಿಟಿ ಆಫ್‌ ನೇಷನ್ಸ್‌’ ಎಂಬ ವಿಚಾರವಾಗಿ ಅವರು ಭಾಷಣ ಮಾಡಲಿದ್ದಾರೆ.

ಏಪ್ರಿಲ್‌ 26ರಂದು ಗ್ರೀಸ್‌ನ ರಾಜಧಾನಿ ಅಥೆನ್ಸ್‌ಗೆ ಅವರು ಪ್ರಯಾಣಿಸಲಿದ್ದಾರೆ. ಈ ಸಂದರ್ಭದಲ್ಲಿ ದ್ವಿಪಕ್ಷೀಯ ಹೂಡಿಕೆ, ವಿಜ್ಞಾನ-ತಂತ್ರಜ್ಞಾನ ಸೇರಿದಂತೆ ಭಾರತ ಮತ್ತು ಗ್ರೀಸ್‌ ನಡುವೆ ಮೂರು ಮಹತ್ವದ ಒಪ್ಪಂದಗಳು ಏರ್ಪಡುವ ನಿರೀಕ್ಷೆಯಿದೆ. ಏಪ್ರಿಲ್‌ 28ರಂದು ಅವರು ಭಾರತಕ್ಕೆ ವಾಪಸಾಗಲಿದ್ದಾರೆ.

(ಯುಎನ್‌ಐ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X