ಬಿಜಾಪುರ : ಪರೀಕ್ಷಾ ಕೇಂದ್ರದಲ್ಲಿ ಪ್ರಾಚಾರ್ಯರ ಸಾವು
ಬಿಜಾಪುರ : ಪಿಯುಸಿ ಪರೀಕ್ಷಾ ಕೇಂದ್ರವೊಂದರಲ್ಲಿ ಮುಖ್ಯ ಪರೀಕ್ಷಾಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದ, ಪದವಿಪೂರ್ವ ಕಾಲೇಜು ಪ್ರಾಚಾರ್ಯರೊಬ್ಬರು ತೀವ್ರ ಹೃದಯಾಘಾತಕ್ಕೀಡಾಗಿ ಮೃತಪಟ್ಟಿದ್ದಾರೆ.
ವಿ.ಬಿ.ದರ್ಬಾರ್ ಪದವಿಪೂರ್ವ ಕಾಲೇಜು ಪ್ರಾಚಾರ್ಯ ಗೋಪಾಲಕೃಷ್ಣಾಚಾರ್ ಶ್ರೀನಿವಾಸಾಚಾರ್ಯ ಜಾಲಿಹಾಳ(53) ಮೃತ ವ್ಯಕ್ತಿ. ಪರೀಕ್ಷಾ ಕೇಂದ್ರವೊಂದಲ್ಲಿ ಕುಸಿದುಬಿದ್ದಾಗ ಅವರನ್ನು ತಕ್ಷಣವೇ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆಸ್ಪತ್ರೆ ತಲುಪಿದ ನಂತರ ವೈದ್ಯರು ಅವರು ಮೃತಪಟ್ಟಿದ್ದಾಗಿ ಘೋಷಿಸಿದರು.
ಧಾರವಾಡ ಮೂಲದ ಗೋಪಾಲಕೃಷ್ಣಾಚಾರ್ ಶ್ರೀನಿವಾಸಾಚಾರ್ ಜಾಲಿಹಾಳ 1976ರಲ್ಲಿ ಉಪನ್ಯಾಸಕರಾಗಿ ಕಾಲೇಜು ಸೇರಿದ್ದರು. ಕಳೆದ ವರ್ಷವಷ್ಟೇ ಅವರು ಪ್ರಾಚಾರ್ಯರಾಗಿ ಬಡ್ತಿ ಪಡೆದಿದ್ದರು.
(ಯುಎನ್‌ಐ)












Click it and Unblock the Notifications