ಅಂತಾರಾಷ್ಟ್ರೀಯ ಏಕ ದಿನ ಕ್ರಿಕೆಟ್ ಪಂದ್ಯಕ್ಕೆ ಕುಂಬ್ಳೆ ಬೈಬೈ
ಬೆಂಗಳೂರು : ಭಾರತ ಕ್ರಿಕೆಟ್ ತಂಡದ ಖ್ಯಾತ ಲೆಗ್ ಸ್ಪಿನ್ನರ್, ಕನ್ನಡ ಕುವರ ಅನಿಲ್ ಕುಂಬ್ಳೆ, ಅಂತಾರಾಷ್ಟ್ರೀಯ ಏಕದಿನ ಕ್ರಿಕೆಟ್ ಪಂದ್ಯಗಳಿಂದ ನಿವೃತ್ತರಾಗಿದ್ದಾರೆ.
ರಾಜ್ಯ ಕ್ರಿಕೆಟ್ ಸಂಸ್ಥೆಯಲ್ಲಿ ಶುಕ್ರವಾರ ಸಂಜೆ, ತಮ್ಮ ನಿರ್ಧಾರವನ್ನು ಅಧಿಕೃತವಾಗಿ ಅವರು ಪ್ರಕಟಿಸಿದರು. ನನ್ನ ವೃತ್ತಿ ಬದುಕಲ್ಲಿ ಸಹಕರಿಸಿದ ಕ್ರಿಕೆಟ್ ಗೆಳೆಯರು ಮತ್ತು ಕೋಚ್‌ಗಳನ್ನು ನಾನೆಂದೂ ಮರೆಯಲಾರೆ ಎಂದು 36ವರ್ಷದ ಕುಂಬ್ಳೆ ಭಾವುಕರಾಗಿ ಹೇಳಿದರು.
371ಪಂದ್ಯಗಳಲ್ಲಿ 337ವಿಕೆಟ್ ಉರುಳಿಸಿರುವ ಕುಂಬ್ಳೆ , ವಿಶ್ವಕಪ್ ಕ್ರಿಕೆಟ್ ಪಂದ್ಯಾವಳಿಗೂ ಮುನ್ನವೇ, ನಿವೃತ್ತಿ ಪಡೆಯುವ ಸುಳಿವು ನೀಡಿದ್ದರು. ಟೆಸ್ಟ್ ಕ್ರಿಕೆಟ್‌ನಲ್ಲಿ ಇನ್ನಿಂಗ್ಸ್ ಒಂದರ ಹತ್ತೂ ವಿಕೆಟ್(ಪಾಕಿ)ಗಳನ್ನು ತಮ್ಮದಾಗಿಸಿಕೊಂಡ ದಾಖಲೆ, ಅವರ ಬೆನ್ನಲ್ಲಿದೆ.
ಕುಂಬ್ಳೆ ಬಗ್ಗೆ ನಾಲ್ಕು ಮಾತು :
- ಜನನ -17.10.1970
- ಮೈಸೂರು ರಸ್ತೆಯ ಆರ್.ವಿ.ಇಂಜಿನಿಯರಿಂಗ್ ಕಾಲೇಜಿನಲ್ಲಿ ವಿದ್ಯಾಭ್ಯಾಸ.
- ಮೊದಲ ಏಕದಿನ ಅಂ.ರಾ.ಪಂದ್ಯ - 1990 ಏ.25 (ಶ್ರೀಲಂಕಾ ವಿರುದ್ಧ)
- ಕಡೆಯ ಪಂದ್ಯ - 2007 ಮಾ. 19(ಬರ್ಮುಡಾ ವಿರುದ್ಧ)
ಇಯಾನ್ ಚಾಪೆಲ್, ಭಾರತ ತಂಡದ ‘ಫ್ಲಾಪ್’ ಕೋಚ್ ಗ್ರೆಗ್ ಚಾಪೆಲ್‌ರ ಸಹೋದರ. ಆದರೆ, ಗ್ರೆಗ್ ನಿವೃತ್ತಿ ಹೊಂದಬೇಕೆ ಬೇಡವೆ ಎಂಬುದನ್ನು ಅವರು ತಿಳಿಸಿಲ್ಲ.
(ದಟ್ಸ್ ಕನ್ನಡ ವಾರ್ತೆ)











Click it and Unblock the Notifications