ಮಿಡ್ ನೈಟ್ ಹಾಟ್ ಕುಖ್ಯಾತಿಯ ಫ್ಯಾಷನ್ ಟೀವಿ ಬಂದ್!
ನವದೆಹಲಿ : ಅಶ್ಲೀಲ ಕಾರ್ಯಕ್ರಮ ಪ್ರಸಾರ ಮಾಡುತ್ತಿದೆ ಎನ್ನುವ ದೂರಿನನ್ವಯ, ಎರಡು ತಿಂಗಳ ಕಾಲ ಫ್ಯಾಷನ್ ಟಿ.ವಿ(ಎಫ್.ಟಿ.ವಿ) ಪ್ರಸಾರವನ್ನು ಕೇಂದ್ರ ವಾರ್ತಾ ಮತ್ತು ಪ್ರಸಾರ ಸಚಿವಾಲಯ ನಿಷೇಧಿಸಿದೆ.
ಏ.1ರಿಂದ ನಿಷೇಧ ಜಾರಿಗೆ ಬರಲಿದ್ದು, ಎಫ್.ಟಿ.ವಿಯ ‘ಮಿಡ್‌ನೈಟ್ ಹಾಟ್’ ಸೇರಿದಂತೆ ಇನ್ನಿತರ ಕಾರ್ಯಕ್ರಮಗಳು, ಅಶ್ಲೀಲತೆಯಿಂದ ಕೂಡಿವೆ. ಫ್ಯಾಷನ್ ಹೆಸರಲ್ಲಿ ಹೆಣ್ಣನ್ನು ಕೀಳಾಗಿ ತೋರಿಸುತ್ತಿರುವುದರಿಂದ, ಭಾರತೀಯ ಸಮಾಜದ ಮೇಲೆ ಅಡ್ಡಪರಿಣಾಮಗಳುಂಟಾಗುವ ಸಾಧ್ಯತೆಗಳಿವೆ ಎಂದು ಸಚಿವಾಲಯ ಅಭಿಪ್ರಾಯಪಟ್ಟಿದೆ.
ಭಾರತೀಯ ಕೇಬಲ್ ಟಿ.ವಿ. ನಿಯಂತ್ರಣ ಕಾಯ್ದೆಯನ್ವಯ ನಿಷೇಧ ಹೇರಲಾಗಿದೆ. ಈ ಹಿಂದಿನ ಎನ್‌ಡಿಎ ಸರ್ಕಾರ, ಎಫ್.ಟಿ.ವಿಗೆ ನಿಷೇಧ ಹೇರಿತ್ತು. ಇತ್ತೀಚೆಗೆ ಸೋನಿ ನೆಟ್‌ವರ್ಕ್ಸ್‌ನ ಎಎಕ್ಸ್‌ಎನ್ ಚಾನೆಲ್ ಕೂಡ ಇದೇರೀತಿ ನಿಷೇಧಕ್ಕೆ ಒಳಗಾಗಿ, ನಂತರ ಕ್ಷಮಾಯಾಚನೆ ಮೂಲಕ ಪ್ರಸಾರ ಮುಂದುವರಿಸಿತ್ತು.
(ಏಜನ್ಸೀಸ್)











Click it and Unblock the Notifications