ಬಿಎಂಟಿಸಿ : ಪಾಸ್ ಪ್ರಯಾಣಿಕರ ಸಂಖ್ಯೆ ಎಷ್ಟಿದೆ ಗೊತ್ತೆ?
ಬೆಂಗಳೂರು : ಬಿಎಂಟಿಸಿ ದೈನಂದಿನ ಪಾಸ್‌ಗಳ ಬಗ್ಗೆ ವಿಧಾನಸಭೆಯಲ್ಲಿ ಚರ್ಚೆ ನಡೆಯಿತು. ಪಾಸ್‌ಗಳಿಗಿರುವ ಮಹತ್ವ ಮತ್ತು ಅವುಗಳ ದುರ್ಬಳಕೆ ಬಗ್ಗೆ ಸದಸ್ಯರು ಪ್ರಸ್ತಾಪಿಸಿದರು.
ವಿಧಾನಸಭೆಯಲ್ಲಿ ದೊರೆತ ಮಾಹಿತಿಯನ್ವಯ ಪ್ರತಿ ದಿನ 1.91ಸಾವಿರ ಮಂದಿ ದೈನಂದಿನ ಪಾಸ್(ರೂ.25)ಗಳನ್ನು ಖರೀದಿಸುತ್ತಿದ್ದಾರೆ. ಇದರಿಂದ ಬಿಎಂಟಿಸಿಗೆ 47.75ಲಕ್ಷ ರೂ. ಸಂಗ್ರಹವಾಗುತ್ತಿದೆ.
ಪಾಸ್‌ದಾರರಿಂದಾಗಿ ಸಂಸ್ಥೆ ಲಾಭದಲ್ಲಿದೆ. ಆದರೆ ಇತ್ತೀಚಿನ ದಿನಗಳಲ್ಲಿ ಪಾಸ್‌ನ ದುರ್ಬಳಕೆ ಹೆಚ್ಚುತ್ತಿದೆ. ನಿಗದಿತ ಸ್ಥಳಕ್ಕೆ ತೆರಳಿದ ಪಾಸ್‌ದಾರರು, ನಂತರ ಆ ಪಾಸನ್ನು ಇನ್ನೊಬ್ಬರಿಗೆ ನೀಡುತ್ತಿರುವುದೇ, ದುರ್ಬಳಕೆಗೆ ಕಾರಣ. ಈ ನಿಟ್ಟಿನಲ್ಲಿ ಬಿಎಂಟಿಸಿ ಜಾಗೃತವಾಗಬೇಕಿದೆ.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications