ಬೆಂಗಳೂರು ಮಹಾನಗರ ಪಾಲಿಕೆ ಬಜೆಟ್‌ನಲ್ಲಿ ಏನಿದೆ?

ಬೆಂಗಳೂರು : ಬೃಹತ್‌ಬೆಂಗಳೂರು ಮಹಾನಗರ ಪಾಲಿಕೆ(ಬಿಬಿಎಂಪಿ) 2007-08ನೇ ಸಾಲಿನ ಆಯವ್ಯಯ ಪತ್ರವನ್ನು ಶುಕ್ರವಾರ ಮಂಡಿಸಿದೆ.

ಮೂಲಭೂತ ಸೌಕರ್ಯ ಹಾಗೂ ತೆರಿಗೆ ಸಂಗ್ರಹಕ್ಕೆ ಈ ಬಜೆಟ್‌ನಲ್ಲಿ ಆದ್ಯತೆ ನೀಡಲಾಗಿದೆ. ಬಿಬಿಎಂಪಿಯ ಪ್ರಥಮ ಬಜೆಟ್‌ ಅನ್ನು ವಿಶೇಷ ಆಯುಕ್ತ ಗೌರವ್‌ ಗುಪ್ತ ಮಂಡಿಸಿದರು. ಚುನಾಯಿತ ಪ್ರತಿನಿಧಿಗಳಲ್ಲದೆ ಅಧಿಕಾರಿಯಾಬ್ಬರು ಬಜೆಟ್‌ ಮಂಡಿಸಿದ್ದು ವಿಶೇಷವಾಗಿತ್ತು.

ಬಿಬಿಎಂಪಿ ಬಜೆಟ್‌ನ ಮುಖ್ಯಾಂಶಗಳು ಇಂತಿವೆ :

  • ಎಂ.ಜಿ. ರಸ್ತೆ ಸೇರಿದಂತೆ 30ರಸ್ತೆಗಳಿಗೆ ಮೀಟರ್‌ ಆಧಾರಿತ ಪಾರ್ಕಿಂಗ್‌ ವ್ಯವಸ್ಥೆ ಜಾರಿ.
  • ಉಪಯೋಗಿಸಲ್ಪಟ್ಟ ನೀರಿನ ಪುನರ್ಬಳಕೆ. ಆ ನೀರನ್ನು ಉದ್ಯಾನಗಳಿಗೆ ಸದ್ಬಳಕೆ.
  • ಆಸ್ತಿ ತೆರಿಗೆಯಿಂದ 610 ಕೋಟಿ ರೂ. ಆದಾಯ ನಿರೀಕ್ಷೆ.
  • ಗಗನಚುಂಬಿ ಕಟ್ಟಡಗಳ ತೆರಿಗೆ ಹೆಚ್ಚಳ.
  • 14 ಕೆರೆಗಳ ಅಭಿವೃದ್ಧಿ ಹಾಗೂ ಸಂರಕ್ಷಣೆ.
  • ಬಜೆಟ್‌ನ ಒಟ್ಟು ಮೊತ್ತ ಕಳೆದ ಬಾರಿಗಿಂತ ಹೆಚ್ಚಾಗಿದೆ. ಕಳೆದ ಬಾರಿ 1,870 ಕೋಟಿ ರೂ. ಇದ್ದದು,್ದ ಈ ಬಾರಿ 3,312 ಕೋಟಿ ರೂ. ಆಗಿದೆ.
  • ದಕ್ಷಿಣ ಭಾರತದಲ್ಲೆ ಪ್ರಥಮ ಬಾರಿಗೆ ಸ್ವಯಂ ಚಾಲಿತ ವಾಹನ ನಿಲುಗಡೆ ಯೋಜನೆ.
  • ರಸ್ತೆ ಅಭಿವೃದ್ಧಿ ಕಾಮಗಾರಿಗೆ 669 ಕೋಟಿ ರೂ. ಮೀಸಲು.
  • ಆಟೋ ರಿಕ್ಷಾ ಚಾಲಕರಿಗೆ ಸಾಮೂಹಿಕ ವಿಮೆ ಸೌಲಭ್ಯ.
  • 500ಕೋಟಿ. ರೂ ವೆಚ್ಚದಲ್ಲಿ ಮುನ್ಸಿಪಲ್‌ ಬಾಂಡ್‌ ಯೋಜನೆ ಜಾರಿ.
  • 357 ಕೋಟಿ ರೂ. ವೆಚ್ಚದಲ್ಲಿ ಒಳ ಚರಂಡಿ ನಿರ್ಮಾಣ.
(ಏಜನ್ಸೀಸ್‌)
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+