6ತಿಂಗಳೊಳಗೆ ಎನ್‌ಜಿಇಎಫ್‌ಗೆ ಜೀವ ನೀಡಿ -ಹೈಕೋರ್ಟ್
ಬೆಂಗಳೂರು : ಎನ್‌ಜಿಇಎಫ್ ಕಾರ್ಖಾನೆ ಪುನಶ್ಚೇತನಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ 6ತಿಂಗಳ ಗಡುವು ನೀಡಿದೆ.
ನ್ಯಾಯಮೂರ್ತಿ ರಾಮಮೋಹನರೆಡ್ಡಿ ಬುಧವಾರ(ಮಾಚ್ 28) ಈ ಕುರಿತು ವಿಚಾರಣೆ ನಡೆಸಿ, ರಾಜ್ಯ ಸರ್ಕಾರ ಕೇಂದ್ರ ಸರ್ಕಾರದೊಂದಿಗೆ ಚರ್ಚಿಸಿ, 6ತಿಂಗಳೊಳಗೆ ಪುನಶ್ಚೇತನ ಪ್ಯಾಕೇಜ್‌ಗೆ ಅನುಮೋದನೆ ಪಡೆಯಬೇಕು ಎಂದು ನಿರ್ದೇಶನ ನೀಡಿದ್ದಾರೆ.
ಹಿನ್ನೆಲೆ : ಎನ್‌ಜಿಇಎಫ್ ನಷ್ಟದಲ್ಲಿರುವ ಘಟಕ ಎಂದು ಘೋಷಿತವಾದ ನಂತರ, ಕಂಪನಿಯನ್ನು ಸ್ಥಗಿತಗೊಳಿಸಬೇಕೆಂದು ನಿರ್ಧರಿಸಲಾಗಿತ್ತು. ಈ ನಿಟ್ಟಿನಲ್ಲಿ ಹರಾಜು ಕೂಡ ಹಾಕಲಾಗಿತ್ತು. ಆದರೆ ಕಾರ್ಮಿಕರ ಹಿತದೃಷ್ಟಿಯಿಂದ ಕಂಪನಿಯನ್ನು ಪುನಶ್ಚೇತನಗೊಳಿಸಲು ಸರ್ಕಾರ ಹೊಸ ನಿರ್ಧಾರಕ್ಕೆ ಬಂದಿತ್ತು.
ಈ ಸಂಬಂಧ ಪುನಶ್ಚೇತನ ಪ್ಯಾಕೇಜ್ ಕೂಡ ಸಿದ್ಧಪಡಿಸಲಾಗಿತ್ತು. ಆದರೆ ಕಾನೂನು ಪ್ರಕಾರ ಇದು ಕೇಂದ್ರ ಸರ್ಕಾರದ ಅನುಮೋದನೆಗೊಳಪಡಬೇಕು. ಕೇಂದ್ರದಿಂದ ಅನುಮೋದನೆ ಪಡೆಯಲು ಕಾಲಾವಕಾಶ ನೀಡಬೇಕೆಂದು ರಾಜ್ಯ ಸರ್ಕಾರ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿತ್ತು.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications