ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೆಲ್ಲ ನೀಡಲು ಕಸರತ್ತು : ಬಜೆಟ್‌ನಲ್ಲಿ ಏನಿದೆ? ಏನಿಲ್ಲ?

By Staff
|
Google Oneindia Kannada News
  • ದಟ್ಸ್‌ ಕನ್ನಡ ನ್ಯೂಸ್‌ ಡೆಸ್ಕ್‌
ಬೆಂಗಳೂರು : ಹಣಕಾಸು ಸಚಿವ ಹಾಗೂ ಉಪಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಬಜೆಟ್‌ ಭಾಷಣವನ್ನು ರಾಷ್ಟ್ರಕವಿ ಕುವೆಂಪು ಅವರ ಪದ್ಯದಿಂದ ಆರಂಭಿಸಿದರು. ಮಧ್ಯೆಮಧ್ಯೆ ಕುವೆಂಪು ಅವರ ಪದ್ಯಗಳನ್ನು ಉಲ್ಲೇಖಿಸುತ್ತ ಭಾಷಣ ಮುಂದುವರಿಸಿದರು.

ಅವರ ಕಾವ್ಯಪ್ರೇಮ ಇಲ್ಲಿಗೇ ನಿಲ್ಲಲಿಲ್ಲ. ಹಾಗೇ ಮುಂದುವರಿದು ಇನ್ನೊಬ್ಬ ರಾಷ್ಟ್ರಕವಿ ಜಿ.ಎಸ್‌.ಶಿವರುದ್ರಪ್ಪ ಅವರ ಪದ್ಯಗಳನ್ನೂ ಉಲ್ಲೇಖಿಸಿದರು. ಸಮಾಜ ಕಲ್ಯಾಣ ಇಲಾಖೆಗೆ ಮೀಸಲಿರಿಸಲಾಗಿರುವ ಯೋಜನೆಗಳನ್ನು ಪ್ರಕಟಿಸುವುದಕ್ಕೂ ಮುನ್ನ ‘ವಸಂತ ಮೂಡುವುದೆಂದಿಗೆ...’ ಎಂಬ ಜಿ.ಎಸ್‌.ಎಸ್‌ ಅವರ ಪದ್ಯ ಮೊಳಗಿತು.

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಕಾರ್ಯಕ್ರಮಗಳನ್ನು ಪ್ರಕಟಿಸುವುದಕ್ಕೂ ಮೊದಲು ಜಿ.ಎಸ್‌.ಎಸ್‌ ಅವರದೇ ಇನ್ನೊಂದು ಪದ್ಯ‘ಆಕಾಶದ ನೀಲಿಯಲ್ಲಿ ಚಂದ್ರತಾರೆ ತೊಟ್ಟಿಲಲ್ಲಿ...’ ಕೇಳಿಬಂತು.

ರೈತರಿಗೆ...

  • ರೈತರು ಎತ್ತುಗಳನ್ನು ಕೊಳ್ಳಲು 50ಕೋಟಿ ರೂಪಾಯಿಗಳು
  • ಶೇಕಡಾ 75ರ ಸಬ್ಸಿಡಿಯಲ್ಲಿ ರೈತರಿಗೆ ಬಿತ್ತನೆ ಬೀಜ ವಿತರಣೆ
  • ಹನಿ ನೀರಾವರಿ ಉತ್ತೇಜನಕ್ಕೆ 20ಕೋಟಿ ರೂಪಾಯಿ
ಕೃಷಿ, ತೋಟಗಾರಿಕೆ, ಹೈನುಗಾರಿಕೆಗೆ...
  • ಅಡಿಕೆ-ದಾಳಿಂಬೆ ಕೀಟ ನಿಯಂತ್ರಣಕ್ಕೆ 3ಕೋಟಿ ರೂಪಾಯಿ
  • ಕೃಷಿ ಸಂಶೋಧನೆ ಮತ್ತು ಅಭಿವೃದ್ಧಿ ನಿಟ್ಟಿನಲ್ಲಿ ಬಾಗಲಕೋಟೆಯಲ್ಲಿ ಕೃಷಿ ವಿಶ್ವವಿದ್ಯಾಲಯ ಸ್ಥಾಪನೆ. ಇದಕ್ಕಾಗಿ 20ಕೋಟಿ ರೂಪಾಯಿ ಮೀಸಲು
  • ಹೈನುಗಾರಿಕೆ ಉತ್ತೇಜಿಸಲು ಬಾಗಲಕೋಟೆ ಹಾಗೂ ಗುಲ್ಬರ್ಗಾದಲ್ಲಿ ಡೈರಿ ವಿಜ್ಞಾನ ಕಾಲೇಜುಗಳ ಸ್ಥಾಪನೆ.
ಸಂಗೀತ ಹಾಗೂ ಸಾಹಿತ್ಯ ಕ್ಷೇತ್ರಕ್ಕೆ...
  • ಮೈಸೂರಿನಲ್ಲಿ ಸಂಗೀತ ವಿಶ್ವವಿದ್ಯಾಲಯ ಸ್ಥಾಪನೆ, ಇದಕ್ಕಾಗಿ 5ಕೋಟಿ ರೂಪಾಯಿ ಮೀಸಲು
  • ಧಾರವಾಡದಲ್ಲಿ ಹಿಂದೂಸ್ತಾನಿ ಸಂಗೀತ ಕೇಂದ್ರ ಸ್ಥಾಪನೆ, ಇದಕ್ಕೂ 5ಕೋಟಿ ರೂಪಾಯಿ ಮೀಸಲು
  • ಹಿಂದೂಸ್ತಾನಿ ಗಾಯಕಿ ಗಂಗೂಬಾಯಿ ಹಾನಗಲ್‌ ಅವರ ಮನೆಯನ್ನು ವಸ್ತು ಸಂಗ್ರಹಾಲಯ ಮಾಡಲು 20 ಲಕ್ಷ ರೂಪಾಯಿ
  • ಕಾಳಿಂಗರಾವ್‌ ಮತ್ತು ಮೈಸೂರು ಅನಂತಸ್ವಾಮಿ ಅವರ ಹೆಸರಿನಲ್ಲಿ ಸಂಗೀತ ಕಚೇರಿ ನಡೆಸಲು ತಲಾ 50ಲಕ್ಷ ರೂಪಾಯಿ ಮೀಸಲು
  • ಅನಕೃಷ್ಣರಾಯ(ಅನಕೃ)ರ ಮನೆಯನ್ನು ಸ್ಮಾರಕವಾಗಿ ಪರಿವರ್ತಿಸಲು 1ಕೋಟಿ ರೂಪಾಯಿ ಮೀಸಲು
ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಅಲ್ಪಸಂಖ್ಯಾತರಿಗೆ...
  • ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗಾಗಿ 23 ಮೊರಾರ್ಜಿ ದೇಸಾಯಿ ವಸತಿ ಶಾಲೆಗಳ ಸ್ಥಾಪನೆ
  • ಗದಗಿನಲ್ಲಿ 1ಕೋಟಿ ರೂಪಾಯಿ ವೆಚ್ಚದಲ್ಲಿ ಅಂಬೇಡ್ಕರ್‌ ಭವನ ನಿರ್ಮಾಣ
  • ಅಲ್ಪಸಂಖ್ಯಾತರಿಗೆ 7ಮೊರಾರ್ಜಿ ದೇಸಾಯಿ ವಸತಿ ಶಾಲೆ ಹಾಗೂ 3ವಸತಿ ನಿಲಯಗಳ ಸ್ಥಾಪನೆ.
  • ಶಾದಿ ಮಹಲುಗಳ ನಿರ್ಮಾಣಕ್ಕೆ 6ಕೋಟಿ ರೂಪಾಯಿ ಮೀಸಲು
  • ಅಲ್ಪಸಂಖ್ಯಾತರ ಅಭಿವೃದ್ಧಿಗೆ 100ಕೋಟಿ ರೂಪಾಯಿ
ಮಕ್ಕಳು ಮಹಿಳಾಭಿವೃದ್ಧಿಗೆ...
  • ಅಮೃತಾ ಯೋಜನೆ ಅಡಿಯಲ್ಲಿ 10,000ರೂಪಾಯಿ ಸಾಲ ಹಾಗೂ 10,000ರೂಪಾಯಿ ಸಹಾಯಧನ
  • ಸ್ತ್ರೀಶಕ್ತಿ ಗುಂಪುಗಳಿಗೆ 20ಕೋಟಿ ರೂಪಾಯಿ ಮೀಸಲು
  • ಮಹಿಳೆ ಮತ್ತು ಮಕ್ಕಳ ಅಭಿವೃದ್ಧಿಗೆ ಹಾಗೂ ದೇವದಾಸಿಯರ ಪುನರ್ವಸತಿಗೆ ಆದ್ಯತೆ
ಇನ್ನಿತರ ವೈಶಿಷ್ಟ್ಯಗಳು...
  • ಬೆಳಗಾವಿಯಲ್ಲಿ ವ್ಯಾಕ್ಸಿನ್‌ಗಳ ಅಧ್ಯಯನ ಕೇಂದ್ರ ಸ್ಥಾಪನೆ
  • ಮಡಿಕೇರಿಯಲ್ಲಿ ವನ್ಯಜೀವಿಗಳ ಅಧ್ಯಯನ ಕೇಂದ್ರ
  • ಕುರಿ ಅಭಿವೃದ್ಧಿಗೆ 10ಕೋಟಿ ರೂಪಾಯಿ
  • ವಿಶೇಷ ಅಭಿವೃದ್ಧಿ ಯೋಜನೆಗೆ 1571ಕೋಟಿ ರೂಪಾಯಿ
  • ಪ್ರಾದೇಶಿಕ ಅಸಮತೋಲನ ನಿವಾರಣೆಗೆ 1300ಕೋಟಿ ರೂಪಾಯಿ
  • ಹೈದರಾಬಾದ್‌-ಕರ್ನಾಟಕ ಅಭಿವೃದ್ಧಿ ಮಂಡಳಿಗೆ 53ಕೋಟಿ ಮೀಸಲು
  • ಮಲೆನಾಡು ಅಭಿವೃದ್ಧಿಗೆ 36ಕೋಟಿ
  • ಬಯಲುಸೀಮೆ ಅಭಿವೃದ್ಧಿಗೆ 21ಕೋಟಿ
  • 60ವರ್ಷ ಮೇಲ್ಪಟ್ಟವರ ಸಾಮಾಜಿಕ ಭದ್ರತೆಗಾಗಿ ಸಂಧ್ಯಾ ಸುರಕ್ಷಾ ಯೋಜನೆ. ಕೃಷಿ ಕಾರ್ಮಿಕರು, ಅಸಂಘಟಿತ ಕಾರ್ಮಿಕರು ಮೊದಲಾದವರಿಗೆ ಯೋಜನೆ ಅಡಿಯಲ್ಲಿ ಮಾಸಿಕ 600ರೂಪಾಯಿ ಮಾಸಾಶನ. ಯೋಜನೆಗೆ 250ಕೋಟಿ ರೂಪಾಯಿಗಳ ಮೀಸಲು.
  • ಆರಾಧನಾ ಯೋಜನೆಯಲ್ಲಿ ಪ್ರತಿ ಜಿಲ್ಲೆಗೆ ಸಿಗುತ್ತಿರುವ 5ಲಕ್ಷರೂಪಾಯಿ ಅನುದಾನ 10ಲಕ್ಷ ರೂಪಾಯಿಗೆ ಏರಿಕೆ
  • ಪ್ರತಿ ತಾಲ್ಲೂಕಿನಲ್ಲಿರುವ ಸರ್ಕಾರಿ ಆಸ್ಪತ್ರೆಗಳು 100ಹಾಸಿಗೆ ಆಸ್ಪತ್ರೆಗಳಾಗಿ ಮೇಲ್ದರ್ಜೆಗೆ. ಇದಕ್ಕಾಗಿ 45ಕೋಟಿ ರೂಪಾಯಿಗಳ ಮೀಸಲು
  • ತಾಲ್ಲೂಕು ಸರ್ಕಾರಿ ಅಸ್ಪತ್ರೆಗಳಲ್ಲಿ ಸಂಜೆ ಹೊರರೋಗಿ ಸೇವೆ ಆರಂಭಿಸಲಾಗುವುದು. ಈ ವಿಭಾಗದಲ್ಲಿ ಸರ್ಕಾರಿ ವೈದ್ಯರು ಸೇವೆ ಸಲ್ಲಿಸಲು ಬಯಸದಿದ್ದಲ್ಲಿ, ಖಾಸಗಿಯವರ ನೆರವು ಪಡೆಯಲು ತಯಾರು. ಯೋಜನೆಗೆ 107ಕೋಟಿ ರೂಪಾಯಿ ಮೀಸಲು
  • 3ಕೋಟಿ ರೂಪಾಯಿ ವೆಚ್ಚದಲ್ಲಿ ಹುಬ್ಬಳ್ಳಿಯ ಕಿಮ್ಸ್‌ ಆಸ್ಪತ್ರೆ ಮೇಲ್ದರ್ಜೆಗೆ
  • ಆಧಾರ ಯೋಜನೆ ಅಡಿಯಲ್ಲಿ ಅಂಗವಿಕಲರಿಗೆ 35ಸಾವಿರ ರೂಪಾಯಿಗಳ ನೆರವು
  • ಅಂಗವಿಕಲರಿಗೆ ಬೇಕಾಗುವ ಊರುಗೋಲು, ಕಿವುಡರ ಶ್ರವಣ ಸಾಧನ ಮೊದಲಾದ ಉಪಕರಣಳಿಗೆ 10ಕೋಟಿ ರೂಪಾಯಿ ಮೀಸಲು
  • ಹೆಚ್ಚು ಪ್ರಮಾಣದಲ್ಲಿ ಮೊರಾರ್ಜಿ ದೇಸಾಯಿ ವಸತಿ ಶಾಲೆಗಳ ಸ್ಥಾಪನೆ. ಶೇಕಡಾ 50ರಷ್ಟು ಹೆಣ್ಣು ಮಕ್ಕಳಿಗೆ ಮೀಸಲು
  • ಆದರ್ಶ ವಿವಾಹ ಯೋಜನೆ ಅಡಿಯಲ್ಲಿ, ಸಾಮೂಹಿಕ ವಿವಾಹವಾಗುವವರಿಗೆ 10ರೂಪಾಯಿ ಪ್ರೋತ್ಸಾಹಧನ. ಸಾಮೂಹಿಕ ವಿವಾಹದಲ್ಲಿ ಕನಿಷ್ಠ 20ಜೋಡಿಗಳು ಪಾಲ್ಗೊಂಡಿರಬೇಕು. ಯೋಜನೆಗಾಗಿ 10ಕೋಟಿ ರೂಪಾಯಿ ಮೀಸಲು
ಜವಳಿ:
  • ಖಾದಿ ಉದ್ಯಮಕ್ಕೆ ಶೇಕಡಾ 5 ಹಾಗೂ ವಿಶೇಷ ಸಂದರ್ಭಗಳಲ್ಲಿ ಶೇಕಡಾ 10ರ ಅನುದಾನ.
  • ಪ್ರಮುಖ ಜಿಲ್ಲಾ ಕೇಂದ್ರಗಳಲ್ಲಿ ಜವಳಿ ಪಾರ್ಕ್‌ ಸ್ಥಾಪನೆ
  • ನೂತನ ಸಿದ್ಧ ಉಡುಪು ನೀತಿ ಸ್ಥಾಪನೆಯ ಇಂಗಿತ. ಮುಂದಿನ 5 ವರ್ಷಗಳಿಗೆ ಸಿದ್ಧ ಉಡುಪು ನೀತಿ ಅಳವಡಿಕೆಗೆ ಹಾಗೂ ಅಭಿವೃದ್ಧಿಗೆ 500 ಕೋಟಿ
  • ನೇಕಾರರಿಗೆ 60 ಕೋಟಿ ರೂಪಾಯಿ ವಿಶೇಷ ಪ್ಯಾಕೇಜ್‌.
  • 25,000 ರೂಪಾಯಿ ಸಾಲ ಪಡೆದ ನೇಕಾರರು ಮಾರ್ಚ್‌ 2007ರ ಒಳಗೆ ಅಸಲು ನೀಡಿದರೆ ಬಡ್ಡಿ ಮನ್ನಾ
ನಗರಗಳ ಮೂಲಸೌಕರ್ಯ
  • ಮಂಗಳೂರು, ಶಿವಮೊಗ್ಗ ನಗರಗಳ ರಸ್ತೆ ಅಭಿವೃದ್ಧಿಗೆ 20 ಕೋಟಿ ರೂಪಾಯಿ ಮೀಸಲು
  • ರಾಜ್ಯದ ನಗರಗಳ ನೀರು ಹಾಗೂ ಒಳ ಚರಂಡಿ ವ್ಯವಸ್ಥೆ ಸುಸ್ಥಿತಿಗೊಳಿಸಲು 369 ಕೋಟಿ ರೂಪಾಯಿ ಅನುದಾನ
  • ಉತ್ತರ ಕರ್ನಾಟಕದ ನಗರಗಳ ಮೂಲಭೂತ ಸೌಕರ್ಯ ಅಭಿವೃದ್ಧಿಗೆ 220 ಕೋಟಿ ರೂಪಾಯಿ
ನಗರ ನೀರು ಸರಬರಾಜು
  • ಗುಲ್ಬರ್ಗಾ, ಧಾರವಾಡ ನಗರ ನೀರು ಸರಬರಾಜಿಗೆ 57.3 ಕೋಟಿ ರೂಪಾಯಿ
  • ಕಾವೇರಿ 4ನೇ ಹಂತದ ಯೋಜನೆ ಹಾಗೂ ಬೆಂಗಳೂರು ನಗರ ಕುಡಿಯುವ ನೀರು ಸರಬರಾಜಿಗೆ 415 ಕೋಟಿ ರೂಪಾಯಿ
  • ಕೋಲಾರ ನಗರ ಒಳಚರಂಡಿ ವ್ಯವಸ್ಥೆಗಾಗಿ 6.24 ಕೋಟಿ ಅನುದಾನ
ನಗರಾಭಿವೃದ್ದಿ
  • ಮೆಟ್ರೊ ಯೋಜನೆಯನ್ನು 2009ರಲ್ಲಿ ಪೂರ್ಣಗೊಳಿಸುವ ಭರವಸೆ. ರಾಜ್ಯದ ಕಡೆಯಿಂದ 177 ಕೋಟಿ ರೂ. ಮೀಸಲು.
  • ಮಳೆ ನೀರು ಶೇಖರಣೆ, ಮಳೆ ಕೊಯ್ಲು ಪ್ರಚಾರ ಹಾಗೂ ಅಳವಡಿಕೆಗಾಗಿ 640 ಕೋಟಿ ರೂಪಾಯಿ ಅನುದಾನ
  • ಬೆಂಗಳೂರಿನ ಮಹಾತ್ಮಾಗಾಂಧಿ ರಸ್ತೆ, ಕೋರಮಂಗಲದ ಪ್ರಮುಖ ರಸ್ತೆಗಳ ಅಭಿವೃದ್ಧಿಗೆ 99 ಕೋಟಿ ರೂಪಾಯಿ
  • ಪ್ರಮುಖ ಸ್ಥಳಗಳಲ್ಲಿ ಚಿಕ್ಕ ವಿಮಾನ ನಿಲ್ಡಾಣ ಸ್ಥಾಪನೆಗೆ 50 ಕೋಟಿ ರೂಪಾಯಿ ಮೀಸಲು
  • ರೈಲು ನಿಲ್ದಾಣದ ಮೂಲಭೂತ ಸೌಕರ್ಯ ಹಾಗೂ ಅಭಿವೃದ್ಧಿಗೆ 158 ಕೋಟಿ ರೂಪಾಯಿ
  • ಹುಬ್ಬಳ್ಳಿ-ಧಾರವಾಡ ಅವಳಿ ನಗರಗಳಲ್ಲಿ ಐಟಿ ಉದ್ಯಮ ಅಭಿವೃದ್ಧಿಗೆ 1ಕೋಟಿ ರೂಪಾಯಿ
  • ವಿಜ್ಞಾನ ಮತ್ತು ತಂತ್ರಜ್ಞಾನ ಅಭಿವೃದ್ಧಿಗೆ 5ಕೋಟಿ ರೂಪಾಯಿ
  • ಹೊಸ ತಂತ್ರಜ್ಞಾನ ಹಾಗೂ ಉದ್ಯಮ ಸ್ಥಾಪನೆಗೆ ಆರಂಭಿಕ ಬಂಡವಾಳವಾಗಿ 5ಕೋಟಿ ರೂಪಾಯಿ ಮೀಸಲು
ಕರ್ನಾಟಕ ಬಜೆಟ್‌ 2007-08 : ಮುಖ್ಯಾಂಶಗಳು
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X