ತುಟ್ಟಿಭತ್ಯೆ ಹೆಚ್ಚಳ : ಕೇಂದ್ರ ನೌಕರರಿಗೆ ಯುಗಾದಿ ಗಿಫ್ಟ್ !
ನವದೆಹಲಿ : ಕೇಂದ್ರ ಸರ್ಕಾರಿ ನೌಕರರಿಗೆ ಯುಗಾದಿಗೆ ಭರ್ಜರಿ ಕೊಡುಗೆ ಸಿಕ್ಕಿದೆ! ಸರ್ಕಾರ ನೌಕರರ ತುಟ್ಟಿಭತ್ಯೆಯನ್ನು ಶೇ.6ರಷ್ಟು ಹೆಚ್ಚಿಸಿದೆ. ಪಿಂಚಣಿದಾರರಿಗೂ ಇದು ಅನ್ವಯವಾಗಲಿದೆ.
ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದ್ದು, ಈ ವರ್ಷದ ಜನವರಿಯಿಂದ ಹೆಚ್ಚುವರಿ ತುಟ್ಟಿಭತ್ಯೆ ಅನ್ವಯವಾಗಲಿದೆ. ಪ್ರತಿಯಾಬ್ಬ ಕೇಂದ್ರ ಸರ್ಕಾರಿ ನೌಕರನಿಗೆ ಮೂಲವೇತನದ ಶೇ. 3.5ರಷ್ಟು ತುಟ್ಟಿ ಭತ್ಯೆ ದೊರೆಯಲಿದೆ.ನೌಕರರು ಹೆಚ್ಚುವರಿ ವೇತನವನ್ನು ಮಾರ್ಚ್ ತಿಂಗಳ ವೇತನದೊಂದಿಗೆ ಪಡೆಯಲಿದ್ದು, 2 ತಿಂಗಳ ಬಾಕಿಯನ್ನೂ ವಿತರಿಸಲಾಗುತ್ತದೆ.
ಈ ನಿರ್ಣಯದಿಂದ ಕೇಂದ್ರ ಸರ್ಕಾರಕ್ಕೆ ಈ ಹಣಕಾಸು ವರ್ಷದಲ್ಲಿ 3,900 ಕೋಟಿ ರೂ. ಹೆಚ್ಚುವರಿ ಹೊರೆ ಬೀಳಲಿದೆ. ನಿವೃತ್ತರಿಗೂ ತುಟ್ಟಿಭತ್ಯೆ ಪರಿಹಾರವನ್ನು ಪ್ರಕಟಿಸಲಾಗಿದ್ದು, ಇದರ ಮೊತ್ತ ವರ್ಷಕ್ಕೆ 1,079 ಕೋಟಿ ರೂ.ಗಳಾಗಲಿದೆ.
ಮಿತಿ ಹೆಚ್ಚಳ : ಕೇಂದ್ರ ಅನುದಾನಿತ ಶಿಕ್ಷಣ ಸಂಸ್ಥೆಗಳಲ್ಲಿ ಕೆಲಸ ಮಾಡುತ್ತಿರುವ ಶಿಕ್ಷಕ ಶಿಕ್ಷಕಿಯರ ನಿವೃತ್ತಿ ವಯೋಮಿತಿಯನ್ನು ಕೇಂದ್ರ ಸರ್ಕಾರ ಹೆಚ್ಚಿಸಿದ್ದು, 62 ವರ್ಷಗಳಿಗೆ ಬದಲಾಗಿ, ಇನ್ನು ಮುಂದೆ 65 ವರ್ಷಕ್ಕೆ ನಿವೃತ್ತರಾಗಬಹುದು ಎಂದು ಕೇಂದ್ರ ವಾರ್ತಾ ಸಚಿವ ಪಿ.ಆರ್. ದಾಸ್‌ಮುನ್ಷಿ ಹೇಳಿದ್ದಾರೆ.
(ಏಜನ್ಸೀಸ್)












Click it and Unblock the Notifications