ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕರ್ನಾಟಕ ಬಜೆಟ್‌ 2007-08 : ಮುಖ್ಯಾಂಶಗಳು

By Staff
|
Google Oneindia Kannada News

ಬೆಂಗಳೂರು : ರಾಜ್ಯ ಹಣಕಾಸು ಸಚಿವ ಬಿ.ಎಸ್‌.ಯಡಿಯೂರಪ್ಪ ವಿಧಾನಮಂಡಲದಲ್ಲಿ ಬಜೆಟ್‌ ಭಾಷಣವನ್ನು ಮಧ್ಯಾಹ್ನ 12ಗಂಟೆಗೆ ಆರಂಭಿಸಿದರು.

ಸರ್ಕಾರ ನಡೆದು ಬಂದ ದಾರಿ ಬಗ್ಗೆ ವಿವರ ನೀಡಿದ ಅವರು, ಸರ್ಕಾರದ ಅನುಷ್ಠಾನಗೊಳಿಸಿದ ಕಾರ್ಯಕ್ರಮಗಳ ಮಾಹಿತಿ ಒದಗಿಸಿದರು. ಸರ್ಕಾರದ ಸಾಧನೆ ಪ್ರಸ್ತಾಪವಾದಾಗ, ಮೇಜು ತಟ್ಟಿ ಆಡಳಿತ ಪಕ್ಷದ ಸದಸ್ಯರು ಸ್ವಾಗತಿಸಿದರು.

ಅಭಿವೃದ್ಧಿಯ ವೇಗೋತ್ಕರ್ಷ, ಸಾಮಾಜಿಕ ಭದ್ರತೆ, ಉದ್ಯೋಗಾವಕಾಶ ಹೆಚ್ಚಳ, ನೆಲ-ಜಲ, ಭಾಷೆ-ಸಂಸ್ಕೃತಿ ಸಂರಕ್ಷಣೆ ಸರ್ಕಾರದ ಆಧ್ಯತೆ. ರಾಜ್ಯಸರ್ಕಾರ ಸಾಲದ ಹೊರೆಗೆ ಸಿಲುಕಿಲ್ಲ. ಸಾಲ ತೀರಿಸುವ ಸಾಮರ್ಥ್ಯವನ್ನು ಆಧರಿಸಿ, ಸಾಲ ಪಡೆಯುತ್ತಿದ್ದೇವೆ. ವ್ಯಾಟ್‌ ಅನುಷ್ಠಾನ ರಾಜ್ಯದಲ್ಲಿ ಪರಿಣಾಮಕಾರಿಯಾಗಿದೆ ಎಂದು ಯಡಿಯೂರಪ್ಪ ಹೇಳಿದರು.

ಬಜೆಟ್‌ ಮುಖ್ಯಾಂಶಗಳು :
13:00

  • ಕೆರೆ ಅಭಿವೃದ್ಧಿಗೆ 6,77 ಕೋಟಿ ರೂ.
  • ಕೋಲಾರಕ್ಕೆ ಕುಡಿಯುವ ನೀರು ಒದಗಿಸಲು ವಿಶೇಷ ಅನುದಾನ.
  • ಬೆಳಗಾವಿ, ಹಾಸನ, ಚಿಕ್ಕಮಗಳೂರು ಹಾಗೂ ಶಿವಮೊಗ್ಗದಲ್ಲಿ ನಬಾರ್ಡ್‌ ನೆರವಿನಿಂದ 458.08 ಕೋಟಿ ವೆಚ್ಚದಲ್ಲಿ ಕೆರೆ ಪುನರುಜ್ಜೀವನ ಕಾರ್ಯ. ಈ ಯೋಜನೆ ನಂತರ ಇತರ ಜಿಲ್ಲೆಗಳಿಗೂ ವಿಸ್ತರಣೆ
  • ಸಣ್ಣ ನೀರಾವರಿ ವಲಯಕ್ಕೆ 767 ಕೋಟಿ ಅನುದಾನ.
  • ನಿಬಂಧನೆಗಳಿಗೆ ಪೂರಕವಾಗಿರುವ ಅಲ್ಪಾವಧಿ ಸಾಲಗಳಿಗೆ ಬಡ್ಡಿ ಮನ್ನಾ.
  • ಶೇ. 4 ರ ದರದಲ್ಲಿ ಕೃಷಿ ಸಾಲ ನೀಡಿಕೆ. 160 ಕೋಟಿ. ರೂ. ಮೀಸಲು.
  • 2007-08 ನೇ ಸಾಲಿನಲ್ಲಿ 19 ಭಾರಿ ಹಾಗೂ ಮಧ್ಯಮ ನೀರಾವರಿ ಯೋಜನೆಗಳ ಅನುಷ್ಠಾನ.
  • ಕೆರೆ ಅಭಿವೃದ್ಧಿ, ಆಧುನೀಕರಣ ಸೌಲಭ್ಯಗಳ ಬಳಕೆ. ಕೃಷ್ಣ ರಾಜ ಸಾಗರದ ಅಧಿಕಾರಿಗಳಿಗೆ ತರಬೇತಿ.
  • ದಾವಣಗೆರೆಗೆ ನೀರು ಒದಗಿಸಲು 3 ಕೋಟಿ ರೂ. ನೀಡಿಕೆ.
  • ಬಿಜಾಪುರ , ಬಾಗಲ ಕೋಟೆಗೆ ಕೃಷ್ಣಾ ನದಿ ಮೂಲಕ ನೀರು ಒದಗಿಸಲು 80.5 ಕೋಟಿ ರೂ. ಅನುದಾನ.
  • ಕಳಸಾ- ಬಂಡೂರಿ ಪೂರ್ಣಗೊಳಿಸುವ ಭರವಸೆ.
  • ಬಾಗಲಕೋಟೆ ಸಂತ್ರಸ್ತರಿಗೆ ಪುನರ್ವಸತಿಗಾಗಿ 50 ಕೋಟಿ.ರೂ ನೀಡಿಕೆ.
  • ದಂಡಾವತಿ ನದಿ ಅಣೆಕಟ್ಟು ನಿರ್ಮಾಣಕ್ಕೆ 200 ಕೋಟಿ.ರೂ. ನೀಡಿಕೆ.
12:30
  • ಪ್ರಾದೇಶಿಕ ಅಸಮತೋಲನ ನಿವಾರಣೆಗೆ 1571ಕೋಟಿ ರೂ. ಹೆಚ್ಚುವರಿ ಅನುದಾನ
  • ರೈತರ 25 ಸಾವಿರ ಕೋಟಿ ರೂ. ಅಲ್ಪಾವಧಿ ಸಾಲ ಮನ್ನ
  • ವಿಧವೆಯರು ಮತ್ತು ಅಂಗವಿಕಲರ ವೇತನ 200ರಿಂದ 400 ರೂ. ಹೆಚ್ಚಳ
  • ಸ್ವಾತಂತ್ರ್ಯಯೋಧರ ವೇತನ 1500ರಿಂದ 3000 ರೂ.ವರೆಗೆ ಹೆಚ್ಚಳ
  • ಗೋವಾ ವಿಮೋಚನಕಾರರಿಗೆ 2000 ರೂ. ಗೌರವಧನ
  • ರಾಜ್ಯದಲ್ಲಿ 6ಮಿನಿ ವಿಮಾನ ನಿಲ್ದಾಣ ಸ್ಥಾಪನೆ
  • ಯಕ್ಷಗಾನ ಅಕಾಡೆಮಿ ಸ್ಥಾಪನೆ
  • ಹಿರಿಯ ಪತ್ರಕರ್ತರ ಕ್ಷೇಮಾವೃದ್ಧಿ ನಿಧಿ ಸ್ಧಾಪನೆ.
  • ಬಾಗಲಕೋಟೆಯಲ್ಲಿ ಕೃಷಿ ವಿಶ್ವವಿದ್ಯಾಲಯ ಸ್ಥಾಪನೆ
  • ಮೈಸೂರಲ್ಲಿ ಸಂಗೀತ ವಿಶ್ವವಿದ್ಯಾಲಯ ಸ್ಥಾಪನೆ
  • ಗಂಗೂಬಾಯಿ ಹಾನಗಲ್‌ ಮನೆಯನ್ನು ವಸ್ತು ಸಂಗ್ರಹಾಲಯವಾಗಿ ಮಾರ್ಪಡು
  • ಅಂಬೇಡ್ಕರ್‌ ಕೃತಿಗಳ ಮರುಮುದ್ರಣಕ್ಕಾಗಿ 50ಲಕ್ಷ ರೂ.
  • ಕನ್ನಡ ವಿಶ್ವಕೋಶದ 14 ಸಂಪುಟ ಮರು ಮುದ್ರಣಕ್ಕಾಗಿ 1ಕೋಟಿ
  • ಗುಲ್ಬರ್ಗದಲ್ಲಿ ಹೈನು ವಿಶ್ವವಿದ್ಯಾಲಯ ಸ್ಥಾಪನೆ
  • ಚಾಮರಾಜನಗರ ಮತ್ತು ಬಳ್ಳಾರಿ ಪಾಲಿಟೆಕ್ನಿಕ್‌, ಇಂಜಿನಿಯರ್‌ ಕಾಲೇಜುಗಳಾಗಿ ಪರಿವರ್ತನೆ
  • ತುಮಕೂರಿನ ಸಿದ್ಧಗಂಗಾ ಶ್ರೀಗಳ ಜನ್ಮಶತಮಾನೋತ್ಸವ -ಸರ್ಕಾರದಿಂದ ಆಚರಣೆ
  • ರಾಜ್‌ ಸ್ಮಾರಕ ರಚನೆಗೆ 3ಕೋಟಿ ರೂಪಾಯಿ.
(ದಟ್ಸ್‌ ಕನ್ನಡ ವಾರ್ತೆ)
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X