ಇಲ್ಲಿಕೆಫೆ ಹೊಸಹೆಜ್ಜೆ : ಕಾಫಿಗೂ ಒಂದು ಯೂನಿವರ್ಸಿಟಿ!
ಬೆಂಗಳೂರು : ನಗರದಲ್ಲಿ ಕಾಫಿ ವಿಶ್ವವಿದ್ಯಾಲಯ(ಯೂನಿವರ್ಸಿಟಾ ಡೆಲ್ ಕಫೆ) ಆರಂಭಿಸುವುದಾಗಿ ಎಸ್‌ಪ್ರೆಸ್ಸೋ ಕಾಫಿಯಲ್ಲಿ ಮುಂಚೂಣಿಯಲ್ಲಿರುವ ಇಟಲಿ ಮೂಲದ ‘ಇಲ್ಲಿಕೆಫೆ ಎಸ್.ಪಿ.ಎ’, ಘೋಷಿಸಿದೆ.
ಸಂಸ್ಥೆ ಭಾರತೀಯ ಕಾಫಿ ಮಂಡಳಿ ಸಹಯೋಗದೊಂದಿಗೆ ವಿವಿ ಆರಂಭಿಸುತ್ತಿದೆ. ಕಾಫಿ ಬೆಳೆಗಾರರಿಗೆ, ವೃತ್ತಿಪರರಿಗೆ(ಕಾಫೀ ಬಾರ್ ಉದ್ಯೋಗಿಗಳು ಹಾಗೂ ಉದ್ಯಮದ ವೃತ್ತಿಪರರು) ಹಾಗೂ ಕಾಫಿ ಗ್ರಾಹಕರಿಗೆ ತರಬೇತಿ ನೀಡುವ ಗುರಿ ಇರಿಸಿಕೊಂಡಿರುವ ಸಂಸ್ಥೆ, ಪ್ರಸ್ತುತ ವರ್ಷಾಂತ್ಯದೊಳಗೆ ವಿವಿ ಆರಂಭಿಸಲಿದೆ.
ವಿವಿಯ ಬೆಂಗಳೂರು ಕ್ಯಾಂಪಸ್‌ನಲ್ಲಿ ನಾಲ್ಕು ಕೋರ್ಸುಗಳನ್ನು ಪ್ರಾರಂಭಿಸಲಾಗುವುದು. ಇತರ ಆರು ಕೋರ್ಸುಗಳನ್ನು ದೇಶದ ವಿವಿಧೆಡೆ ಇರುವ ಕಾಫಿ ತೋಟಗಳಲ್ಲಿ, ಕಾಫಿ ಬೆಳೆಗಾರರ ಭಾಗವಹಿಸುವಿಕೆಯಾಂದಿಗೆ ನಡೆಸಲಾಗುವುದು ಎಂದು ಸಂಸ್ಥೆ ಹೇಳಿದೆ.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications