ಆರ್‌ಎಸ್‌ಎಸ್‌ನ ಮೋಹನ್ ಕುಮಾರ್‌ಗೆ ಹೃದಯಾಘಾತ
ಬೆಂಗಳೂರು : ರಾಷ್ಟ್ರೀಯ ಸ್ವಯಂಸೇವಕ ಸಂಘ(ಆರ್‌ಎಸ್‌ಎಸ್)ದ ಹಿರಿಯ ನಾಯಕ ಎಚ್.ಕೆ.ಮೋಹನ್ ಕುಮಾರ್, ಹೃದಯಾಘಾತದಿಂದ ಶುಕ್ರವಾರ ನಿಧನರಾದರು.
ನಗರದ ಆರ್‌ಎಸ್‌ಎಸ್ ಸಭೆಯಲ್ಲಿ ಪಾಲ್ಗೊಂಡಿದ್ದ ಮೋಹನ್ ಕುಮಾರ್, ದಿಢೀರನೇ ಕುಸಿದರು. ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗ ಮಧ್ಯೆ ಅವರು ಕೊನೆ ಉಸಿರೆಳೆದರು. ಆರ್‌ಎಸ್‌ಎಸ್‌ನ ಸ್ಥಳೀಯ ಸಮಿತಿಯಲ್ಲಿ ಅವರು ಸದಸ್ಯರಾಗಿ ಕಾರ್ಯನಿರ್ವಹಿಸಿದ್ದರು.
ಈ ಅಕಾಲಿಕ ನಿಧನಕ್ಕೆ ಕರ್ನಾಟಕದ ಆರ್‌ಎಸ್‌ಎಸ್ ಮುಖ್ಯಸ್ಥರಾದ ಎಂ.ವೆಂಕಟರಾಮು, ಕೆ.ನರಹರಿ, ಎಂ.ಸಿ.ಜಯದೇವ್ ಕಂಬನಿಮಿಡಿದಿದ್ದಾರೆ.
(ಯುಎನ್‌ಐ)











Click it and Unblock the Notifications