ಕಳೆದ 2 ವರ್ಷಗಳಲ್ಲಿ ತಪ್ಪಿಸಿಕೊಂಡವರ ಸಂಖ್ಯೆ 16 ಸಾವಿರ

ಬೆಂಗಳೂರು : ಕಳೆದ ಎರಡು ವರ್ಷಗಲ್ಲಿ ರಾಜ್ಯದಲ್ಲಿ 16,778ಮಂದಿ ತಪ್ಪಿಸಿಕೊಂಡಿದ್ದಾರೆ ಎಂದು ಗೃಹಸಚಿವ ಎಂ.ಪಿ.ಪ್ರಕಾಶ್‌ ಹೇಳಿದ್ದಾರೆ.

ವಿಧಾನಪರಿಷತ್ತಿನಲ್ಲಿ ಕಾಂಗ್ರೆಸ್‌ ಸದಸ್ಯ ಹೆಚ್‌.ಎಸ್‌. ಶಿವಶಂಕರ್‌ ಪ್ರಶ್ನೆಗೆ ಉತ್ತರಿಸುತ್ತಿದ್ದ ಅವರು, 6,896 ಮಕ್ಕಳು, 4,941ಮಹಿಳೆಯರು ಮತ್ತು 4,942ಪುರುಷರು ತಪ್ಪಿಸಿಕೊಂಡವರ ಪಟ್ಟಿಯಲ್ಲಿದ್ದಾರೆ ಎಂದರು.

ಬೆಂಗಳೂರು ನಗರ ಜಿಲ್ಲೆಯಲ್ಲಿ ತಪ್ಪಿಸಿಕೊಂಡವರ ಸಂಖ್ಯೆ ದೊಡ್ಡದು. 4,524ಮಕ್ಕಳು, 2717ಮಹಿಳೆಯರು ಮತ್ತು 2,643ಪುರುಷರು ತಪ್ಪಿಸಿಕೊಂಡಿದ್ದಾರೆ ಎಂದು ಎಂ.ಪಿ.ಪ್ರಕಾಶ್‌ ಮಾಹಿತಿ ನೀಡಿದ್ದಾರೆ.

ಮತ್ತೊಂದು ಪ್ರಶ್ನೆಗೆ ಉತ್ತರಿಸಿದ ಸಚಿವರು, ಕಳೆದ ಮೂರುವರ್ಷಗಳಲ್ಲಿ ರಾಜ್ಯದಲ್ಲಿ 14,993 ಮಹಿಳಾ ಶೋಷಣೆ ಪ್ರಕರಣಗಳು ವರದಿಯಾಗಿವೆ. ಅದರಲ್ಲೂ ಬೆಂಗಳೂರಿನಲ್ಲಿ 133 ಸಾವು ಸೇರಿದಂತೆ 3,686ವರದಕ್ಷಿಣೆ ಪ್ರಕರಣಗಳು ವರದಿಯಾಗಿವೆ. ಇದೇ ಅವಧಿಯಲ್ಲಿ ರಾಜ್ಯದ ವಿವಿಧೆಡೆ 1998ಮಹಿಳೆಯರ ಅಸಹಜ ಸಾವುಗಳು ಸಂಭವಿಸಿವೆ ಎಂದು ಮಾಹಿತಿ ನೀಡಿದರು.

(ಯುಎನ್‌ಐ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+