ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕನ್ನಡ ‘ಟೈಮ್ಸ್‌ ಆಫ್‌ ಇಂಡಿಯಾ’ವನ್ನು ನೋಡಿದಿರಾ?!

By Staff
|
Google Oneindia Kannada News

The Time of Indias Kannada Versionಬೆಂಗಳೂರು : ‘ ದಿ ಟೈಮ್ಸ್‌ ಆಫ್‌ ಇಂಡಿಯಾ’ ಪತ್ರಿಕೆಯ ಕನ್ನಡ ಆವೃತ್ತಿ ಬುಧವಾರ ಮಾರುಕಟ್ಟೆಗೆ ಬಂದಿದೆ. ಆ ಮೂಲಕ ಕನ್ನಡ ದೈನಿಕಗಳ ಸಾಲಿಗೆ ಹೊಸ ಪತ್ರಿಕೆ ಸೇರ್ಪಡೆಗೊಂಡಿದೆ.

ವಿಜಯ ಕರ್ನಾಟಕ ಸೇರಿದಂತೆ ವಿಪಿಎಲ್‌ ಬಳಗವನ್ನು ಮಡಿಲಿಗೆ ಹಾಕಿಕೊಂಡ ‘ಬೆನೆಟ್‌, ಕೋಲ್‌ಮನ್‌ ಮತ್ತು ಕಂಪನಿ ಲಿಮಿಟೆಡ್‌’, ಉಷಾಕಿರಣ ಪತ್ರಿಕೆಯನ್ನು ಸ್ಥಗಿತಗೊಳಿಸಿ, ಹೊಸ ಕನ್ನಡ ಪತ್ರಿಕೆಗೆ ಚಾಲನೆ ನೀಡಿದೆ.

ಜಗತ್ತಿನ ನಂ.1 ಆಂಗ್ಲ ದಿನಪತ್ರಿಕೆ ಎನ್ನುವ ಖ್ಯಾತಿಗೆ ‘ಟೈಮ್ಸ್‌ ಆಫ್‌ ಇಂಡಿಯಾ’ ಪಾತ್ರವಾಗಿದೆ. ಈ ಪತ್ರಿಕೆಯ ಕನ್ನಡ ಆವೃತ್ತಿ ಇದೀಗ ಬೆಂಗಳೂರು ನಗರದಲ್ಲಿ ಆರಂಭಗೊಂಡಿದೆ. ಇಡೀ ವಿಶ್ವವನ್ನೇ ತಮ್ಮ ತೋಳ್‌ತೆಕ್ಕೆಯಲ್ಲಿ ಅಪ್ಪಿಕೊಳ್ಳುವ ರೀತಿಯಲ್ಲಿ ಯುವಕರನ್ನು ಸಶಕ್ತರನ್ನಾಗಿಸುವ ಗುರಿಯನ್ನು ನಾವು ಹೊಂದಿದ್ದೇವೆ ಎಂದು ಪತ್ರಿಕೆ ಹೇಳಿಕೊಂಡಿದೆ.

ಮತ್ತೊಮ್ಮೆ ದರ ಸಮರ? :

ಹದಿನಾರು ಪುಟಗಳ ಹೊಸ ಕನ್ನಡ ‘ಟೈಮ್ಸ್‌ ಆಫ್‌ ಇಂಡಿಯಾ’ದ ಮುಖ ಬೆಲೆ ರೂ. 1.50. ಪತ್ರಿಕೆಯ ಎಲ್ಲಾ ಪುಟಗಳು ವರ್ಣಮಯ. ಹೊಸ ಪತ್ರಿಕೆ ಮೂಲಕ ಮತ್ತೊಂದು ದರ ಸಮರಕ್ಕೆ ರಾಜ್ಯದಲ್ಲಿ ವೇದಿಕೆ ಸಜ್ಜಾಗಬಹುದೇ ಎನ್ನುವ ಆತಂಕ ಪತ್ರಿಕೋದ್ಯಮದಲ್ಲಿದೆ.

ಕನ್ನಡ ‘ಟೈಮ್ಸ್‌ ಆಫ್‌ ಇಂಡಿಯಾ’ ಬಗ್ಗೆ ನೀವೇನಂತೀರಾ?

(ದಟ್ಸ್‌ ಕನ್ನಡ ವಾರ್ತೆ)

ಹಳೇ ಸುದ್ದಿ!!! -
ಕನ್ನಡ ದೈನಿಕಗಳ ಸಾಲಿಗೆ ‘ಉಷಾಕಿರಣ’ ಸೇರ್ಪಡೆ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X