15 ಕೋಟಿ ವೆಚ್ಚದ ವಿಶ್ವಕನ್ನಡ ಸಮ್ಮೇಳನಕ್ಕೆ ಭರದ ಸಿದ್ಧತೆ
ಬೆಂಗಳೂರು : ಯಾವುದೇ ಕಾರಣಕ್ಕೂ ಬೆಳಗಾವಿಯಲ್ಲಿನ ವಿಶ್ವಕನ್ನಡ ಸಮ್ಮೇಳನವನ್ನು ಮುಂದೂಡುವುದಿಲ್ಲ. ಸುಮಾರು 15ಕೋಟಿ ವೆಚ್ಚದಲ್ಲಿ ಸಮ್ಮೇಳನವನ್ನು ಅದ್ದೂರಿಯನಾಗಿ ನಡೆಸಲಾಗುವುದು ಎಂದು ಉಪಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ.
ಮುಖ್ಯಮಂತ್ರಿ ಅಧ್ಯಕ್ಷತೆಯಲ್ಲಿ ನಡೆದ ಸಮ್ಮೇಳದ ಸಿದ್ಧತಾ ಸಭೆ ಬಗ್ಗೆ ವಿವರ ನೀಡಿರುವ ಅವರು, ಸಮ್ಮೇಳನದ ಹಿನ್ನೆಲೆಯಲ್ಲಿ ಬೆಳಗಾವಿಯಲ್ಲಿ ಅಭಿವೃದ್ಧಿ ಕಾಮಗಾರಿ ಕೈಗೊಳ್ಳಲು 10 ಕೋಟಿ ರೂ.ಗಳನ್ನು ಸರ್ಕಾರ ಬಿಡುಗಡೆ ಮಾಡಲಿದೆ. ಫೆ.23ದಿನಗಳಿಂದ ಮೂರು ದಿನಗಳ ಸಮ್ಮೇಳನ ಆರಂಭಗೊಳ್ಳಲಿದೆ ಎಂದರು.
ಸಮ್ಮೇಳನ ಸಿದ್ಧತಾ ಸಭೆಯಲ್ಲಿ ಮೂಡಿದ ತೀರ್ಮಾನಗಳು :
- ಸಮ್ಮೇಳನದ ಉದ್ಘಾಟನೆಗೆ ರಾಷ್ಟ್ರಪತಿಗಳಿಗೆ ಆಹ್ವಾನ.
- ಮಹಾರಾಷ್ಟ್ರಕ್ಕೆ ಸೇರಿದ ಕೇಂದ್ರ ಕೃಷಿ ಸಚಿವ ಶರದ್ ಪವಾರ್ ಆಹ್ವಾನಕ್ಕೆ ರಾಜ್ಯ ಶಾಸಕರ ವಿರೋಧ.
- ಸಮ್ಮೇಳನದ ಹಿನ್ನೆಲೆಯಲ್ಲಿ ಬೆಳಗಾವಿಯಲ್ಲಿ ಬಂಡವಾಳ ಹೂಡಿಕೆದಾರರ ಸಮಾವೇಶ.
- ಸಮ್ಮೇಳನದಲ್ಲಿ ಸಾಹಿತ್ಯ, ವಿವಿಧ ಕಲೆ ಮತ್ತು ಜಾನಪದ ಕಲಾವಿದರಿಗೆ ಆದ್ಯತೆ. ಸಿನಿಮಾ ಕಲಾವಿದರು , ಕ್ರೀಡಾಪಟುಗಳಿಗೆ ಆಹ್ವಾನ.
- ಎನ್‌ಆರ್‌ಐ ಕನ್ನಡಿಗರಿಗೆ ಆಹ್ವಾನ.












Click it and Unblock the Notifications