ವಿಶ್ವಕಪ್ : ಭಾರತ ಕ್ರಿಕೆಟ್ ತಂಡದಲ್ಲಿ ಯಾರಿಗೆ ಮಣೆ?
ಬನವದೆಹಲಿ : ಮುಂದಿನ ವಿಶ್ವಕಪ್ ಕ್ರಿಕೆಟ್ ಪಂದ್ಯಾವಳಿಗಾಗಿ ಅಯ್ಕೆ ಮಾಡಲಾಗಿರುವ 30 ಮಂದಿ ಸಂಭವನೀಯ ಅಟಗಾರರ ಪಟ್ಟಿಯಲ್ಲಿ, ಕರ್ನಾಟಕದ ಅರಂಭಿಕ ಅಟಗಾರ ರಾಬಿನ್ ಉತ್ತಪ್ಪ ಸ್ಥಾನ ಗಳಿಸಿದ್ದಾರೆ.
ಮುಂದಿನ ತಿಂಗಳು ವೆಸ್ಟ್ ಇಂಡೀಸ್ ತಂಡದ ವಿರುದ್ಧ ನಡೆಯುವ ಮೊದಲೆರಡು ಏಕದಿನ ಪಂದ್ಯಗಳಿಗೆ ಹಾಗೂ 2007ರ ಮಾರ್ಚ್‌ನಲ್ಲಿ ವೆಸ್ಟ್ ಇಂಡೀಸ್‌ನಲ್ಲಿ ನಡೆಯುವ ವಿಶ್ವಕಪ್‌ಗಾಗಿ 30 ಜನ ಸಂಭಾವನೀಯರ ಪಟ್ಟಿಯನ್ನು ರಾಜ್‌ಕೋಟ್‌ನಲ್ಲಿ ಶುಕ್ರವಾರ ಪ್ರಕಟಿಸಲಾಯಿತು.
ದಕ್ಷಿಣ ಅಫ್ರಿಕಾ ಪ್ರವಾಸದಲ್ಲಿ ತೋರಿದ ಉತ್ತಮ ಪ್ರದರ್ಶನದಿಂದ ಸೌರವ್ ಗಂಗೂಲಿ, ಏಕದಿನ ಪಂದ್ಯಗಳಲ್ಲಿ ಸ್ಥಾನಗಿಟ್ಟಿಸಿಕೊಂಡಿದ್ದಾರೆ. ವೇಗದ ಬೌಲರ್ ಜೋಗಿಂದರ್ ಶರ್ಮ, ಪ್ರಥಮ ಬಾರಿಗೆ ಭಾರತ ತಂಡಕ್ಕೆ ಅಯ್ಕೆ ಅಗಿದ್ದಾರೆ. ಟೆಸ್ಟ್ ತಂಡದಲ್ಲಿದ್ದ ಉಪನಾಯಕ ವಿರೇಂದರ್ ಷೆಹ್ವಾಗ್ ಹಾಗೂ ಇರ್ಫಾನ್ ಪಠಾಣ್ ಅವರನ್ನು ತಂಡದಿಂದ ಕೈಬಿಡಲಾಗಿದೆ.
ರಾಹುಲ್ ದ್ರಾವಿಡ್ ನಾಯಕ ಸ್ಥಾನವನ್ನು ಕಾಯ್ದುಕೊಂಡಿದ್ದಾರೆ. ಸಚಿನ್ ತೆಂಡೂಲ್ಕರ್‌ಗೆ ಹೊಸ ಉಪನಾಯಕ ಸ್ಥಾನ ನೀಡಲಾಗಿದೆ. ಉಳಿದಂತೆ ವಿ.ವಿ.ಎಸ್ ಲಕ್ಷ್ಮಣ್, ಅನಿಲ್ ಕುಂಬ್ಳೆ ಹಾಗೂ ಗಾಯಾಳು ಯುವರಾಜ್ ಸಿಂಗ್ ಏಕದಿನ ಪಂದ್ಯಕ್ಕೆ ಅಯ್ಕೆ ಅಗಿಲ್ಲ. ಯುವರಾಜ್ ಸಿಂಗ್ ಮಾತ್ರ ವಿಶ್ವಕಪ್ ಪಟ್ಟಿಯಲ್ಲಿ ಅಯ್ಕೆ ಅಗಿದ್ದಾರೆ.
ವಿಶ್ವಕಪ್‌ಗೆ ಅಂತಿಮ 15 ಜನರ ತಂಡವನ್ನು ಫೆಬ್ರವರಿ 13ರಂದು ಹೆಸರಿಸುವ ಸಾಧ್ಯತೆಯಿದೆ.
ವೆಸ್ಟ್ ಇಂಡೀಸ್ ಏಕದಿನ ಪಂದ್ಯ ಸರಣಿಯಲ್ಲಿ ಪಾಲ್ಗೊಳ್ಳುವ ಭಾರತ ತಂಡದ ಪಟ್ಟಿ : ರಾಹುಲ್ ದ್ರಾವಿಡ್(ನಾಯಕ), ಸಚಿನ್ ತೆಂಡೂಲ್ಕರ್ (ಉಪನಾಯಕ), ರಾಬಿನ್ ಉತ್ತಪ್ಪ , ಸೌರವ್ ಗಂಗೂಲಿ, ಮಹೇದರ್ ಸಿಂಗ್ ಧೋನಿ, ದಿನೇಶ್ ಕಾರ್ತಿಕ್, ಗೌತಂ ಗಂಭೀರ್‌ಮ ಸುರೇಶ್ ರೈನಾ, ಅಜಿತ್ ಅಗರ್ಕರ್, ಶ್ರೀಸಾಂತ್, ರಮೇಶ್ ಪವಾರ್, ಹರ್ಭಜನ್ ಸಿಂಗ್, ಅರ್‌ಪಿ ಸಿಂಗ್, ಜಹೀರ್ ಖಾನ್, ಜೋಗಿಂದರ್ ಶರ್ಮ.
ವಿಶ್ವಕಪ್ ಕ್ರಿಕೆಟ್ -ಭಾರತ ತಂಡದ 30 ಜನ ಸಂಭವನೀಯರ ಪಟ್ಟಿ : ರಾಹುಲ್ ದ್ರಾವಿಡ್(ನಾಯಕ), ಸಚಿನ್ ತೆಂಡೂಲ್ಕರ್ (ಉಪನಾಯಕ), ರಾಬಿನ್ ಉತ್ತಪ್ಪ , ವಿರೇಂದರ್ ಸೆಹ್ವಾಗ್, ವಿವಿಎಸ್ ಲಕ್ಷ್ಮಣ್, ಸೌರವ್ ಗಂಗೂಲಿ, ಮಹಮದ್ ಕೈಫ್, ಮಹೇಂದರ್ ಸಿಂಗ್ ಧೋನಿ, ದಿನೇಶ್ ಕಾರ್ತಿಕ್, ಯುವರಾಜ್ ಸಿಂಗ್, ವಾಸಿಂ ಜಾಫರ್, ದಿನೇಶ್ ಮೊಂಗಿಯಾ, ರೋಹಿತ್ ಶರ್ಮ, ಅಜಿತ್ ಅಗರ್ಕರ್, ಶ್ರೀಸಾಂತ್, ರಮೇಶ್ ಪವಾರ್, ಹರ್ಭಜನ್ ಸಿಂಗ್, ಅರ್‌ಪಿ ಸಿಂಗ್, ಜಹೀರ್ ಖಾನ್, ಜೋಗಿಂದರ್ ಶರ್ಮ, ಎಸ್. ಬದರಿನಾಥ್, ಚೇತೇಶ್ವರ್ ಪೂಜಾರ, ಅನಿಲ್ ಕುಂಬ್ಳೆ, ಗೌತಂ ಗಂಭೀರ್, ಇರ್ಫಾನ್ ಪಠಾಣ್, ಸುರೇಶ್ ರೈನಾ, ವಿಅರ್‌ವಿ ಸಿಂಗ್, ಮುನಾಫ್ ಪಟೇಲ್, ಪಾರ್ಥೀವ್ ಪಟೇಲ್, ರಾಜೇಶ್ ಪವಾರ್.
(ಯುಎನ್‌ಐ)












Click it and Unblock the Notifications