ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಗರದಲ್ಲಿ ಜರ್ಮನಿ ವೀಸಾ ಅರ್ಜಿ ಕೇಂದ್ರ ಆರಂಭ

By Staff
|
Google Oneindia Kannada News

ಬೆಂಗಳೂರು : ಕರ್ನಾಟಕದ ವೀಸಾ ಅರ್ಜಿ ಪ್ರಕ್ರಿಯೆ ತ್ವರಿತಗೊಳಿಸುವ ನಿಟ್ಟಿನಲ್ಲಿ, ಚೆನ್ನೈನಲ್ಲಿರುವ ಕಾನ್ಸುಲೇಟ್‌ ಜನರಲ್‌ ಆಫ್‌ ಜರ್ಮನಿ ನಗರದಲ್ಲಿ ವೀಸಾ ಅರ್ಜಿ ಕೇಂದ್ರ ಆರಂಭಿಸಿದೆ.

ಜರ್ಮನ್‌ ಕಾನ್ಸುಲೇಟ್‌ ಚೆನ್ನೈನ ಕಾನ್ಸುಲೇಟ್‌ ಜನರಲ್‌ ಹೈಂಜ್‌ ಕಾಪ್‌ ಗುರುವಾರ(ನವೆಂಬರ್‌ 16) ಕಚೇರಿ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಜರ್ಮನ್‌ ವೀಸಾಗೆ ಬರುವ ಅರ್ಜಿಗಳ ಪೈಕಿ ಶೇಕಡಾ 50ರಷ್ಟು ಬೆಂಗಳೂರಿನವೇ ಆಗಿರುತ್ತವೆ ಎಂದು ಹೇಳಿದರು.

ವಿಎಫ್‌ಎಸ್‌(ಇಂಡಿಯಾ) ಪ್ರೆೃವೇಟ್‌ ಲಿಮಿಟೆಡ್‌ ಸಂಸ್ಥೆಗೆ ಈ ಜವಾಬ್ದಾರಿ ವಹಿಸಲಾಗಿದ್ದು, ನಗರದ ಸೇಂಟ್‌ ಮಾರ್ಕ್ಸ್‌ ರಸ್ತೆಯಲ್ಲಿ ಕೇಂದ್ರ ತೆರೆಯಲಾಗಿದೆ. ಜರ್ಮನ್‌ ಕಾನ್ಸುಲೇಟ್‌, ಈಗಾಗಲೇ ಇದೇ ಸಂಸ್ಥೆಯ ಸಹಯೋಗದೊಂದಿಗೆ ಹೈದರಾಬಾದ್‌ ಹಾಗೂ ಕೊಚ್ಚಿಯಲ್ಲಿ ಉಪಕೇಂದ್ರಗಳನ್ನು ತೆರೆದಿದ್ದನ್ನು ಇಲ್ಲಿ ಸ್ಮರಿಸಬಹುದು.

ವಿಎಫ್‌ಎಸ್‌ನ ಚೆನ್ನೈ ಕೇಂದ್ರ ಮುಖ್ಯ ಚಟುವಟಿಕೆ ಕೇಂದ್ರವಾಗಿ ಕಾರ್ಯ ನಿರ್ವಹಿಸಲಿದೆ. ಈ ಮೊದಲು ಅರ್ಜಿ ಸಲ್ಲಿಸ ಬಯಸುವ ಬೆಂಗಳೂರಿಗರು ಚೆನ್ನೈ ಕೇಂದ್ರವನ್ನೇ ಸಂಪರ್ಕಿಸಬೇಕಿತ್ತು. ಬೆಂಗಳೂರು ಕೇಂದ್ರದಿಂದ ವೀಸಾ ಅರ್ಜಿ ಸಲ್ಲಿಯಲು 510ರೂಪಾಯಿ ವೆಚ್ಚವಾಗಲಿದೆ.

ಹೆಚ್ಚಿನ ವಿವರಗಳಿಗೆ ಸಂಪರ್ಕಿಸಿ : www.vfs-germany.co.in

(ದಟ್ಸ್‌ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X