ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಸ್ವಾತಂತ್ರ್ಯಯೋಧರು 10ಸಾವಿರ ರೂ. ಎಣಿಸಲಿದ್ದಾರೆ!
ನವದೆಹಲಿ : ಸ್ವಾತಂತ್ರ್ಯಯೋಧರ ಮಾಸಿಕ ಪಿಂಚಣಿಯನ್ನು 10,000ರೂಪಾಯಿಗೆ ಹೆಚ್ಚಿಸಲಾಗಿದ್ದು, ಅಕ್ಟೋಬರ್ 2ರಿಂದ ಪೂರ್ವಾನ್ವಯಗೊಂಡು ಈ ನಿಯಮ ಜಾರಿಯಾಗಲಿದೆ.
ಗುರುವಾರ ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಸಭೆಯ ನಂತರ ಹಣಕಾಸು ಸಚಿವ ಪಿ.ಚಿದಂಬರಂ ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದರು.
ಮೂಲಪಿಂಚಣಿಯಲ್ಲಿ 2,330 ರೂಪಾಯಿ ಹೆಚ್ಚಿಸಲಾಗಿದೆ. ಶೇಕಡಾ 58ರಷ್ಟು ತುಟ್ಟಿ ಭತ್ಯೆ ಸೇರಿ ಅವರ ಮಾಸಿಕ ಪಿಂಚಣಿ 10,000ರೂಪಾಯಿ ಆಗಲಿದೆ. ಸ್ವಾತಂತ್ರ್ಯಯೋಧರನ್ನು ಮೂರು ವರ್ಗಗಳಲ್ಲಿ ವಿಂಗಡಿಸಲಾಗಿದ್ದು, ಎಲ್ಲ ವರ್ಗಗಳ ಮೂಲಪಿಂಚಣಿ ಏರಿಕೆ ಮಾಡಲಾಗಿದೆ. ಸ್ವಾತಂತ್ರ್ಯಯೋಧರು ಅಥವಾ ಅವರ ಮರಣಾನಂತರ ಅವರ ಪತ್ನಿಯರು ಈ ಸೌಲಭ್ಯ ಪಡೆಯಲಿದ್ದಾರೆ ಎಂದು ವಿವರಿಸಿದರು.
ಕರ್ನಾಟಕದಲ್ಲೇನು...? : ರಾಜ್ಯದಲ್ಲೂ ಸ್ವಾತಂತ್ರ್ಯ ಹೋರಾಟಗಾರರ ಮಾಸಿಕ ಪಿಂಚಣಿಯನ್ನು 3,000ರೂಪಾಯಿಗಳಿಗೆ ಹೆಚ್ಚಿಸಲಾಗುವುದೆಂದು ಉಪಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಪ್ರಕಟಿಸಿದ್ದಾರೆ.
(ಏಜನ್ಸೀಸ್)