ಚಾಮುಂಡೇಶ್ವರಿ ಕ್ಷೇತ್ರ : ಸಿದ್ದು ಪರ ಶ್ರೀನಿವಾಸಪ್ರಸಾದ್ ಪ್ರಚಾರ
ಮೈಸೂರು,
ಅ. 23 : ಮಾಜಿ ಕೇಂದ್ರ ಸಚಿವ-ಜೆಡಿಎಸ್ ತಟಸ್ಥ ನಾಯಕ ವಿ.ಶ್ರೀನಿವಾಸಪ್ರಸಾದ್ ಚಾಮುಂಡೇಶ್ವರಿ ಉಪಚುನಾವಣೆಯಲ್ಲಿ ಸಿದ್ಧರಾಮಯ್ಯಪರ ಪ್ರಚಾರ ಮಾಡಲು ನಿರ್ಧರಿಸಿದ್ದಾರೆ. id="toptextpromo">ಶನಿವಾರ
ನಗರದ ಹೋಟೆಲೊಂದರಲ್ಲಿ ಇಬ್ಬರೂ ನಾಯಕರು ಸುದೀರ್ಘ ಮಾತುಕತೆ ನಡೆಸಿದರು. ಆನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಉಭಯ ನಾಯಕರು, ಇದು ಸೌಜನ್ಯದ ಭೇಟಿಯಾಗಿತ್ತಷ್ಟೆ. ಆದರೆ ಈ ಸಂದರ್ಭದಲ್ಲಿ ಚುನಾವಣೆ ಕುರಿತೂ ಮಾತನಾಡಲಾಯಿತು ಎಂದು ಹೇಳಿದರು. id='are-slot-1' class='oiad oi-axt oiadv'> id='top-searched-articles'>ಪ್ರಸ್ತುತ
ರಾಜಕೀಯ ಸನ್ನಿವೇಶದಲ್ಲಿ ಸಿದ್ಧರಾಮಯ್ಯ ಅವರಂತಹ ನಾಯಕರು ವಿಧಾನಸಭೆಯಲ್ಲಿರಬೇಕು. ಹಾಗಾಗಿ ನಾನು ಅವರ ಪರವಾಗಿ ಪ್ರಚಾರ ಮಾಡಲಿದ್ದೇನೆ. ಸಕ್ರಿಯ ರಾಜಕಾರಣದಿಂದ ದೂರ ಇರುವುದಾಗಿ ಘೋಷಿಸಿದ್ದೆ. ಆದರೆ ಸಕ್ರಿಯ ರಾಜಕಾರಣಕ್ಕೆ ಮರಳಲು ಇದು ಸಕಾಲ ಎನಿಸುತ್ತಿದೆ ಎಂದ ಅವರು, ತಾವೂ ಕಾಂಗ್ರೆಸ್ ಸೇರಲಿರುವ ಸುಳಿವು ನೀಡಿದರು.











Click it and Unblock the Notifications