Get Updates
Get notified of breaking news, exclusive insights, and must-see stories!

ಮಡಿಕೇರಿ ಬಳಿ ಭಾರೀ ಭೂಕುಸಿತ : ಆರು ಮಂದಿ ಬಲಿ

ಮಡಿಕೇರಿ ಬಳಿ ಭಾರೀ ಭೂಕುಸಿತ : ಆರು ಮಂದಿ ಬಲಿ
ಬಾಲಕಿಯಾಬ್ಬಳು ಪಾರು, ಮಡಿಕೇರಿ ಆಸ್ಪತ್ರೆಯಲ್ಲಿ ಚಿಕಿತ್ಸೆ

ಬೆಂಗಳೂರು : ಭಾರೀ ಭೂಕುಸಿತ ಉಂಟಾದ ಪರಿಣಾಮ, ನಾಲ್ವರು ಮಹಿಳೆಯರು ಸೇರಿದಂತೆ ಒಟ್ಟು ಆರು ಮಂದಿ ಮೃತಪಟ್ಟ ಘಟನೆ ಕೊಡಗು ಜಿಲ್ಲೆ ಮಡಿಕೇರಿಯಲ್ಲಿ ನಡೆದಿದೆ.

ಜಿಲ್ಲಾ ಪೊಲೀಸ್‌ ವರಿಷ್ಠ ಡಾ.ರಾಮಚಂದ್ರರಾವ್‌ ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡುತ್ತ, ಮಡಿಕೇರಿ ಪಟ್ಟಣದ ಹೊರವಲಯದಲ್ಲಿ, ಮಂಗಳವಾರ(ಜುಲೈ 4) ನಸುಕಿನ 1 ಗಂಟೆ ಸುಮಾರು ಈ ಘಟನೆ ನಡೆದಿದ್ದು, ಎರಡು ಮನೆಗಳು ನೆಲಸಮಗೊಂಡಿವೆ ಎಂದರು.

ದಿಣ್ಣೆಯಾಂದು ಕುಸಿದದ್ದರಿಂದ ಘಟನೆ ಸಂಭವಿಸಿದ್ದು, ಎರಡೂ ಮನೆಗಳು ಮಣ್ಣಿನಿಂದ ಆವೃತವಾಗಿವೆ. ಆರು ಜನರ ದೇಹಗಳು ಮಣ್ಣಿನ ಅಡಿಯಲ್ಲಿ ಹೂತು ಹೋಗಿದ್ದವು. ಎಲ್ಲ ಮೃತ ದೇಹಗಳನ್ನು ಹೊರ ತೆಗೆಯಲಾಗಿದೆ. ಈ ದುರಂತದಿಂದ ಪಲ್ಲವಿ(17) ಎಂಬ ಹುಡುಗಿಯನ್ನು ರಕ್ಷಿಸಲಾಗಿದೆ. ಮಡಿಕೇರಿಯ ಆಸ್ಪತ್ರೆಯಾಂದರಲ್ಲಿ ಆಕೆ ಚೇತರಿಸಿಕೊಳ್ಳುತ್ತಿದ್ದಾಳೆ ಎಂದು ರಾಮಚಂದ್ರರಾವ್‌ ವಿವರಿಸಿದರು.

(ಯುಎನ್‌ಐ)

ಮುಖಪುಟ / ವಾರ್ತೆಗಳು

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+