ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಸ್ತೆ ನಿಯಮ ಮುರಿದರೆ, ವಾಹನ ಪರವಾನಗಿ ರದ್ದು

By Staff
|
Google Oneindia Kannada News

ರಸ್ತೆ ನಿಯಮ ಮುರಿದರೆ, ವಾಹನ ಪರವಾನಗಿ ರದ್ದು
ವಾಹನ ಚಾಲಕರೇ, ಸ್ವಲ್ಪ ಎಚ್ಚರದಿಂದಿರಿ... ಸದ್ಯದಲ್ಲಿಯೇ ಹೊಸ ಕಾನೂನು ಜಾರಿಗೆ ಬರಲಿದೆ.

ಬೆಂಗಳೂರು : ರಸ್ತೆ ಸಂಚಾರ ನಿಯಮಗಳನ್ನು ವಾಹನ ಚಾಲಕರು ಉಲ್ಲಂಘಿಸಿದರೆ, ಅವರ ಲೈಸನ್ಸ್‌ ಮತ್ತು ವಾಹನ ಪರವಾನಗಿಯನ್ನು ರದ್ದುಗೊಳಿಸುವ ಕಾನೂನು ರಾಜಧಾನಿ ನಗರದಲ್ಲಿ ಜಾರಿಗೆ ಬರಲಿದೆ.

ನಗರದ ಮೂಲಸೌಕರ್ಯಗಳ ಬಗ್ಗೆ ಬಿಸಿಐಸಿ ಏರ್ಪಡಿಸಿದ್ದ ಸಂವಾದ ಸಭೆಯಲ್ಲಿ ಮಾತನಾಡುತ್ತಿದ್ದ, ಪೊಲೀಸ್‌ ಹೆಚ್ಚುವರಿ ಆಯುಕ್ತ(ಸಂಚಾರ) ಎಂ.ಎನ್‌.ರೆಡ್ಡಿ, ಈ ಬಗ್ಗೆ ಮಾಹಿತಿ ನೀಡಿದರು.

ಆಟೋ ರಿಕ್ಷಾ, ಟ್ರಕ್‌, ಕಾರು ಸೇರಿದಂತೆ ಯಾವುದೇ ವಾಹನಗಳು ಇನ್ನು ಮುಂದೆ ಕಾನೂನು ಉಲ್ಲಂಘಿಸುವಂತಿಲ್ಲ. ಸುಗಮ ರಸ್ತೆ ಸಂಚಾರಕ್ಕಾಗಿ ಈ ಕ್ರಮ ಅನುಸರಿಸಲು ನಿರ್ಧರಿಸಲಾಗಿದೆ. ಈ ಬಗ್ಗೆ ಸದ್ಯದಲ್ಲಿಯೇ ಅಧಿಸೂಚನೆ ಹೊರಬೀಳಲಿದೆ. ದೇಶದಲ್ಲಿಯೇ ಮೊದಲ ಬಾರಿಗೆ ಇಂತಹ ಕಠಿಣ ಕ್ರಮವನ್ನು ಬೆಂಗಳೂರಿನಲ್ಲಿ ಅನುಸರಿಸಲಾಗುತ್ತದೆ ಎಂದು ಹೇಳಿದರು.

(ದಟ್ಸ್‌ ಕನ್ನಡ ವಾರ್ತೆ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X