ಟೆನಿಸ್ ಜ್ವರ ಶುರು, ನಗರದ ತುಂಬಾ ಸಾನಿಯಾ ಜಪ!
ಟೆನಿಸ್ ಜ್ವರ ಶುರು, ನಗರದ ತುಂಬಾ ಸಾನಿಯಾ ಜಪ!
ಮಂಗಳವಾರ ಮಾರ್ಟಿನಾ ಮುಲ್ಲರ್-ಸಾನಿಯಾ ಸೆಣಸಾಟ
1.75 ಲಕ್ಷ ಅಮೆರಿಕನ್ ಡಾಲರ್ ಬಹುಮಾನ ಮೊತ್ತದ ಈ ಚಾಂಪಿಯನ್‌ಶಿಪ್‌ನಲ್ಲಿ ಸಾನಿಯಾ(ವಿಶ್ವದ 32ನೇ ಶ್ರೇಯಾಂಕಿತೆ), ಮಂಗಳವಾರ ಕಬ್ಬನ್‌ಪಾರ್ಕ್‌ನ ಲಾನ್ ಟೆನಿಸ್ ಸಂಸ್ಥೆಯ ಕೋರ್ಟ್‌ನಲ್ಲಿ ತಮ್ಮ ಕೌಶಲ್ಯ ಪ್ರದರ್ಶಿಸುವರು. ಜರ್ಮನಿಯ ಮಾರ್ಟಿನಾ ಮುಲ್ಲರ್(104ನೇ ಶ್ರೇಯಾಂಕಿತೆ) ಅವರೊಂದಿಗೆ ಸಾನಿಯಾ ಸೆಣಸಲಿದ್ದಾರೆ.
ಈ ಪಂದ್ಯಾವಳಿಯಲ್ಲಿ ಪಾಲ್ಗೊಳ್ಳುತ್ತಿರುವ ಸ್ಪರ್ಧಿಗಳಲ್ಲಿ ಸಾನಿಯಾ ಮಿರ್ಜಾ ಅತಿ ಹೆಚ್ಚು ಶ್ರೇಯಾಂಕ ಪಡೆದ ಆಟಗಾರ್ತಿ. ಹೀಗಾಗಿ ಹೈದರಾಬಾದ್‌ನ 19ವರ್ಷದ ಸಾನಿಯಾ ಮಿರ್ಜಾ ಪ್ರಶಸ್ತಿ ಗೆಲ್ಲುವುದು ಖಚಿತ ಎಂದು ಆಕೆಯ ಅಭಿಮಾನಿಗಳು ವಿಶ್ವಾಸವಿಟ್ಟಿದ್ದಾರೆ.
ಹದಿನಾರು ರಾಷ್ಟ್ರಗಳ ಟೆನಿಸ್ ಸ್ಪರ್ಧಿಗಳು ಪಂದ್ಯಾವಳಿಯಲ್ಲಿ ಪಾಲ್ಗೊಳ್ಳಲಿದ್ದಾರೆ.
(ದಟ್ಸ್ ಕನ್ನಡ ವಾರ್ತೆ)
ಮುಖಪುಟ / ಬೆಂಗಳೂರು ಡೈರಿ












Click it and Unblock the Notifications