ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಂಕುತಿಮ್ಮನ ಕಗ್ಗ : ನಿಮ್ಮ ವಿಮರ್ಶೆಗೆ, ನಮ್ಮ ಬಹುಮಾನ!

By Staff
|
Google Oneindia Kannada News

ಮಂಕುತಿಮ್ಮನ ಕಗ್ಗ : ನಿಮ್ಮ ವಿಮರ್ಶೆಗೆ, ನಮ್ಮ ಬಹುಮಾನ!
ಮಾ.17ರಂದು ಡಿ.ವಿ.ಜಿ. ಹುಟ್ಟುಹಬ್ಬ, ಆ ಪ್ರಯುಕ್ತ ವಿಮರ್ಶಾ ಸ್ಪರ್ಧೆ

ಬೆಂಗಳೂರು : ‘ಮಂಕುತಿಮ್ಮನ ಕಗ್ಗ’ ಕನ್ನಡ ಸಾಹಿತ್ಯ ಸಂದರ್ಭದಲ್ಲಿನ ಬಹುಮುಖ್ಯ ಕೃತಿ. ಈ ಕೃತಿಯ ಮೂಲಕ ಕನ್ನಡಿಗರಿಗೆ ಅಮೂಲ್ಯ ಜೀವನ ಸಂದೇಶ ಕೊಟ್ಟ ಡಾ।।ಡಿ.ವಿ.ಜಿ ಅವರ ಹುಟ್ಟು ಹಬ್ಬ ಮಾರ್ಚ್‌ 17ರಂದು ನಡೆಯಲಿದೆ.

ಆ ನಿಮಿತ್ತ ಸಮಾಜ ಸೇವಕರ ಸಮಿತಿ ಕಗ್ಗದ ಕುರಿತು ವಿಮರ್ಶಾ ಸ್ಪರ್ಧೆಯನ್ನು ಏರ್ಪಡಿಸಿದೆ. ಆಸಕ್ತರು, ಮಂಕುತಿಮ್ಮನ ಕಗ್ಗ ಕೃತಿಯ ಕುರಿತು ವಿಮರ್ಶೆ ಬರೆದು ಕಳುಹಿಸಬಹುದು.

ಈ ವಿಮರ್ಶೆಗಳನ್ನು ಕನ್ನಡದ ಖ್ಯಾತ ಕವಿಗಳು-ಲೇಖಕರು ಮತ್ತು ವಿಮರ್ಶಕರು ಕೂಲಂಕಷವಾಗಿ ಮೌಲ್ಯಮಾಪನ ಮಾಡಿ ವಿಜೇತರನ್ನು ಆಯ್ಕೆ ಮಾಡಲಿದ್ದಾರೆ. ಈ ಸ್ಪರ್ಧೆಗೆ ಮೈಸೂರಿನ ‘ಕಾವ್ಯಾಲಯ ಪ್ರಕಾಶನ’ ನೆರವು ನೀಡುತ್ತಿದ್ದು, ಮಾರ್ಚ್‌ ತಿಂಗಳಲ್ಲಿ ಕಾವ್ಯಾಲಯ ಪ್ರಕಾಶನ ಡಿವಿಜಿ ಪುಸ್ತಕಗಳನ್ನು ರಿಯಾಯತಿ ದರದಲ್ಲಿ ಮಾರಾಟ ಮಾಡಲಿದೆ. ಕನ್ನಡಾಭಿಮಾನಿಗಳು ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಬೇಕೆಂದು ಕೋರಲಾಗಿದೆ.

ಸ್ಪರ್ಧೆಗೆ ವಯಸ್ಸು, ವಿದ್ಯಾರ್ಹತೆ - ಯಾವುದೇ ನಿಬಂಧನೆಗಳಿಲ್ಲ. ಉಚಿತ ಪ್ರವೇಶ. ವಿಮರ್ಶೆ 20 ಪುಟಗಳನ್ನು ಮೀರಬಾರದು. ಪ್ರಥಮ ಬಹುಮಾನ ರೂ. 3000, ದ್ವಿತೀಯ ಬಹುಮಾನ ರೂ. 2000, ತೃತೀಯ ಬಹುಮಾನ ರೂ. 1000, ಸಮಾಧಾನಕರ ಬಹುಮಾನ ರೂ. 500ನ್ನು ವಿಜೇತರಿಗೆ ನೀಡಲಾಗುವುದು.

ವಿಮರ್ಶೆ ಕಳುಹಿಸಲು ಕಡೆಯ ದಿನಾಂಕ : 28.02.2006.

ವಿಮರ್ಶೆಗಳನ್ನು ಕಳುಹಿಸಬೇಕಾದ ವಿಳಾಸ :

ಸಮಾಜ ಸೇವಕರ ಸಮಿತಿ(ನೋಂದಾಯಿತ)
994/ಬಿ, 4ನೇ ಅಡ್ಡರಸ್ತೆ, ಅಶೋಕನಗರ
ಬನಶಂಕರಿ 1ನೇ ಹಂತ
ಬೆಂಗಳೂರು - 560 050.
ದೂರವಾಣಿ : ರಾಜ್‌ಕುಮಾರ್‌ - 9448171069, ರಾಜೇಶ್‌ - 9886159315

(ದಟ್ಸ್‌ ಕನ್ನಡ ವಾರ್ತೆ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X