ಚಂಪಾ ಅಧ್ಯಕ್ಷತೆಯ ಕ.ಸಾ.ಪ ಸಭೆಯಲ್ಲಿ ಭಾರೀ ರಂಪ
ಚಂಪಾ ಅಧ್ಯಕ್ಷತೆಯ ಕ.ಸಾ.ಪ ಸಭೆಯಲ್ಲಿ ಭಾರೀ ರಂಪ
ಪರಿಷತ್ತಿನ ಕೇಂದ್ರ ಸಮಿತಿಯ ಅಧಿಕಾರವಧಿ ಹೆಚ್ಚಳಕ್ಕೆ ತೀವ್ರ ವಿರೋಧ
ಸಾಹಿತ್ಯಪರಿಷತ್ತಿನ ಕೇಂದ್ರ ಸಮಿತಿ ಅವಧಿಯನ್ನು 3ರಿಂದ 5ವರ್ಷಕ್ಕೆ ಹೆಚ್ಚಿಸುವ ಉದ್ದೇಶಿದ ತಿದ್ದುಪಡಿ, ಭಾನುವಾರ ನಡೆದ ಪರಿಷತ್ತಿನ ಸಭೆಯಲ್ಲಿ ಕೆಲವರನ್ನು ರೊಚ್ಚಿಗೆಬ್ಬಿಸಿತು.
ದಿಕ್ಕಾರ, ಕೂಗಾಟಗಳ ನಡುವೆ ಸಭೆ ಮೀನಿನ ಮಾರುಕಟ್ಟೆಯಂತೆ ಪರಿವರ್ತನೆಯಾದಾಗ, ಪರಿಷತ್ತಿನ ಅಧ್ಯಕ್ಷ ಚಂದ್ರಶೇಖರ ಪಾಟೀಲ, ಸಭೆಯನ್ನು ಮುಂದೂಡಿದರು.
ಪರಿಷತ್ತಿನ ಅಧ್ಯಕ್ಷರು ಸರ್ವಾಧಿಕಾರಿಯಂತೆ ವರ್ತಿಸುತ್ತಿದ್ದಾರೆ ಎಂದು ಕನ್ನಡ ಸಂಘರ್ಷ ಸಮಿತಿ. ಕೋಡಿಹೊಸಳ್ಳಿ ರಾಮಣ್ಣ, ಕನ್ನಡ ಗೆಳೆಯರ ಬಳಗದ ರಾ.ನಂ. ಚಂದ್ರಶೇಖರ್, ಬೆಂಗಳೂರು ನಗರ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಪಾರ್ಶ್ವನಾಥ ಮುಂತಾದವರು ಚಂದ್ರಶೇಖರ ಪಾಟೀಲ ಅವರನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡರು.
(ಇನ್ಫೋ ವಾರ್ತೆ)
ಮುಖಪುಟ / ವಾರ್ತೆಗಳು












Click it and Unblock the Notifications