ನಗರದಲ್ಲಿ ಸೆ.29ರಂದು ಆಟೋ ಚಾಲಕರ ಮುಷ್ಕರ

ನಗರದಲ್ಲಿ ಸೆ.29ರಂದು ಆಟೋ ಚಾಲಕರ ಮುಷ್ಕರ
ಆಟೋ ಚಾಲಕರಿಂದ ಪ್ರತ್ಯೇಕ ಕಲ್ಯಾಣ ಮಂಡಳಿಗೆ ಒತ್ತಾಯ

ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ, ಆಟೋ ರಿಕ್ಷಾ ಚಾಲಕರ ಸಂಘ ಹಾಗೂ ಟ್ಯಾಕ್ಸಿ ಚಾಲಕರ ಸಂಘವು ಜಂಟಿಯಾಗಿ ಸೆಪ್ಟೆಂಬರ್‌ 29ರಂದು ನಗರದಲ್ಲಿ ಮುಷ್ಕರ ನಡೆಸಲು ನಿರ್ಧರಿಸಿವೆ.

ನಗರದಲ್ಲಿ ಈಗಾಗಲೇ 85,000 ಆಟೋಗಳಿದ್ದು, ಈಗಿರುವ ಆಟೋ ಚಾಲಕರಿಗೆ ಉತ್ತಮ ಗಳಿಕೆ ಇಲ್ಲದ ಕಾರಣ ಹೊಸ ಆಟೋಗಳಿಗೆ ಅನುಮತಿ ನೀಡಬಾರದೆಂಬ ಬೇಡಿಕೆ ಸೇರಿದಂತೆ ಇತರ ಪ್ರಮುಖ ಬೇಡಿಕೆಗಳು ಇದರಲ್ಲಿ ಸೇರಿವೆ. ಅವುಗಳಲ್ಲಿ ಮೆಟ್ರೋ ರೈಲು ಯೋಜನೆ ಹೆಸರಿನಲ್ಲಿ ನಗರದ ಯಾವುದೇ ಪ್ರದೇಶಗಳಲ್ಲಿ ಆಟೋ ರಿಕ್ಷಾಗಳನ್ನು ನಿಷೇಧಿಸಬಾರದು. ಪ್ರತ್ಯೇಕ ಕಲ್ಯಾಣ ಮಂಡಳಿ ಸ್ಥಾಪಿಸಬೇಕು. ಆಟೋ ಚಾಲಕರ ಮಕ್ಕಳಿಗೆ ವಿದ್ಯಾರ್ಥಿವೇತನ ನೀಡಬೇಕು. ವಿಮಾ ಪರಿಹಾರ ಸೌಲಭ್ಯವನ್ನು 50ಸಾವಿರದಿಂದ 1ಲಕ್ಷ ರೂ.ಗೆ ಹೆಚ್ಚಿಸುವುದು ಪ್ರಮುಖ ಬೇಡಿಕೆಗಳಾಗಿವೆ.

ಸೆಪ್ಟೆಂಬರ್‌ 29ರಂದು ಬೆಳಿಗ್ಗೆ 6ರಿಂದ ಸಂಜೆ 6ರವರೆಗೆ ಮುಷ್ಕರ ನಡೆಸಲಿದೆ ಎಂದು ಪ್ರಕಟಣೆ ತಿಳಿಸಿದೆ.

(ಇನ್ಫೋ ವಾರ್ತೆ)

ಮುಖಪುಟ / ಬೆಂಗಳೂರು ಡೈರಿ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+