ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಾಬೂನು ಕಾರ್ಖಾನೆಯಲ್ಲಿ ಭ್ರಷ್ಟತೆಯ ದುರ್ಗಂಧ

By Staff
|
Google Oneindia Kannada News

ಸಾಬೂನು ಕಾರ್ಖಾನೆಯಲ್ಲಿ ಭ್ರಷ್ಟತೆಯ ದುರ್ಗಂಧ
ಲೋಕಾಯುಕ್ತ ಬಲೆಗೆ ಕರ್ನಾಟಕ ಸಾಬೂನು ಕಾರ್ಖಾನೆಯ ಒಂದೊಂದೇ ತಿಮಿಂಗಲಗಳು ...

ಬೆಂಗಳೂರು : ಕರ್ನಾಟಕ ಸಾಬೂನು ಕಾರ್ಖಾನೆಯಲ್ಲಿನ ಭ್ರಷ್ಟಾಚಾರದ ದುರ್ಗಂಧವನ್ನು, ಲೋಕಾಯುಕ್ತ ವೆಂಕಟಾಚಲ ನೇತೃತ್ವದ ತಂಡ ಎರಡನೇ ಕಂತಿನಲ್ಲಿ ಮತ್ತಷ್ಟು ಬಹಿರಂಗಪಡಿಸಿದೆ.

ಕಾರ್ಖಾನೆಯ ಮಾರುಕಟ್ಟೆ ವಿಭಾಗದ ನಿರ್ದೇಶಕ ಕೆ.ಆಂಜಿನಪ್ಪ ಅವರ ಮನೆಯ ಮೇಲೆ ದಾಳಿ ನಡೆಸಿದ ಲೋಕಾಯುಕ್ತ ತಂಡ, 800ಗ್ರಾಂ ಬಂಗಾರ, 3ಕಿಲೋ ಗ್ರಾಂ ಬೆಳ್ಳಿ, 11,500 ರೂಪಾಯಿ ನಗದು ಮತ್ತು ಒಂದು ಓಪೆಲ್‌ ಕೋರ್ಸಾ ಕಾರನ್ನು ವಶಪಡಿಸಿಕೊಂಡಿದೆ.

ಅಂಜಿನಪ್ಪ ಇಷ್ಟು ಆಸ್ತಿ ಮಾತ್ರವಲ್ಲದೇ, ನಗರದ ವಿವಿಧೆಡೆ ನಿವೇಶನ, ಮನೆಗಳು ಮತ್ತು ಫಾರ್ಮ್‌ ಹೌಸ್‌ ಹೊಂದಿದ್ದಾನೆ ಎಂದು ಸುದ್ದಿಗಾರರಿಗೆ ತಿಳಿಸಿರುವ ವೆಂಕಟಾಚಲ, ಕಾರ್ಖಾನೆಯಲ್ಲಿ ಅಪಾರ ಭ್ರಷ್ಟಾಚಾರ ನಡೆದಿದೆ. ಅದರ ತನಿಖೆ ಮುಂದುವರಿಯಲಿದೆ ಎಂದರು.

ಬುಧವಾರವಷ್ಟೇ ಕಾರ್ಖಾನೆಯ ಹಣಕಾಸು ವಿಭಾಗದ ವ್ಯವಸ್ಥಾಪಕ ಗೌರೀಶಂಕರ ಭಟ್‌ ಮನೆ ಲೋಕಾಯುಕ್ತ ದಾಳಿ ನಡೆಸಿತ್ತು. ಆ ಸಂದರ್ಭದಲ್ಲಿ ಸುಮಾರು 2 ಕಿಲೋ ಗ್ರಾಂ ಚಿನ್ನ, 10 ಕಿಲೋ ಗ್ರಾಂಗಿಂತ ಅಧಿಕ ಬೆಳ್ಳಿ ಮತ್ತು ಬಹುಕೋಟಿ ರೂಪಾಯಿ ಮೌಲ್ಯದ ನಿವೇಶನಗಳು, ಮನೆಗಳಿಗೆ ಸಂಬಂಧಿಸಿದ ದಾಖಲೆಗಳನ್ನು ಲೋಕಾಯುಕ್ತ ತಂಡ ವಶಪಡಿಸಿಕೊಂಡಿತ್ತು.

ಕರ್ನಾಟಕ ಸಾಬೂನು ಕಾರ್ಖಾನೆ ಸುಮೂರ ನೂರು ಕೋಟಿ ರೂಪಾಯಿಗಳ ನಷ್ಟ ದಲ್ಲಿದೆ. ಅಧಿಕಾರಿಗಳ ಭ್ರಷ್ಟತೆಯೇ ನಷ್ಟಕ್ಕೆ ಮೂಲ ಕಾರಣ ಎನ್ನಲಾಗಿದೆ.

ಕೊಸರು : ಲೋಕಾಯುಕ್ತ ಬಲೆಗೆ ಬಿದ್ದಿರುವ ಅಂಜನಪ್ಪ ಅವರನ್ನು ಭ್ರಷ್ಟತೆಯ ಆರೋಪದ ಮೇಲೆ ಕಳೆದ ಹತ್ತು ತಿಂಗಳ ಹಿಂದೆ ಉದ್ಯೋಗದಿಂದ ಅಮಾನತುಗೊಳಿಸಲಾಗಿತ್ತು. ಆದರೆ ಈ ಅವಧಿಯಲ್ಲಿ ಮನೆಯಲ್ಲಿಯೇ ಕೂತು, ಆತ ತಿಂಗಳಿಗೆ 22ಸಾವಿರ ರೂ. ಸಂಬಳ ಪಡೆಯುತ್ತಿದ್ದ! ಹೇಗಿದೆ ನೋಡಿ ನಮ್ಮ ವ್ಯವಸ್ಥೆಯ ಅಣಕ?

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X