ಕರ್ನಾಟಕದಲ್ಲಿ ನಕ್ಸಲ್‌ವಾದಿಗಳ ನಿಷೇಧಕ್ಕೆ ಚಿಂತನೆ
ಕರ್ನಾಟಕದಲ್ಲಿ ನಕ್ಸಲ್‌ವಾದಿಗಳ ನಿಷೇಧಕ್ಕೆ ಚಿಂತನೆ
ಚಿಕ್ಕಮಗಳೂರು, ಉಡುಪಿ, ಪಾವಗಡದಲ್ಲಿ ಬಿರುಸುಕೊಂಡ ನಕ್ಸಲ್ ಬೇಟೆ
ಶುಕ್ರವಾರ ನಡೆದ ಸಂಪುಟ ಸಭೆಯಲ್ಲಿ ಈ ಬಗ್ಗೆ ಅನೌಪಚಾರಿಕ ಚರ್ಚೆ ನಡೆಯಿತು. ನಕ್ಸಲ್ ಚಟುವಟಿಕೆಗಳಿಗೆ ಸಂಬಂಧಿಸಿದಂತೆ ಸಮಗ್ರ ವರದಿ ನೀಡಲು ಗೃಹ ಇಲಾಖೆಗೆ ಸೂಚಿಸಲಾಗಿದೆ. ವರದಿಯ ನಂತರ ಸಂಪುಟ ಮುಂದಿನ ಕ್ರಮ ಅನುಸರಿಸಬಹುದು ಎನ್ನಲಾಗಿದೆ.
ಮುಖ್ಯಮಂತ್ರಿ ಎನ್.ಧರ್ಮಸಿಂಗ್ ಅವರು ಸುದ್ದಿಗಾರರಿಗೆ ನಕ್ಸಲ್ ಗುಂಪುಗಳ ನಿಷೇಧದ ಬಗ್ಗೆ ಶುಕ್ರವಾರ ಸುಳಿವು ನೀಡಿದ್ದಾರೆ. ಚಿಕ್ಕಮಗಳೂರು, ಉಡುಪಿ ಮತ್ತು ಪಾವಗಡ ಮತ್ತಿತರ ಪ್ರದೇಶಗಳಲ್ಲಿ ವಿಶೇಷ ಟಾಸ್ಕ್ ಪೋರ್ಸ್ ಬಳಸಿ, ನಕ್ಸಲ್ ನಿಗ್ರಹಕ್ಕೆ ಮುಂದಾಗಿದೆ.
ಆಂಧ್ರ ಸರ್ಕಾರದ ನಿಷೇಧದಿಂದ ನಕ್ಸಲರು ಕರ್ನಾಟಕದ ಗಡಿಪ್ರದೇಶಗಳಿಗೆ ನುಸುಳುವ ಸಾಧ್ಯತೆಗಳಿವೆ. ಈ ಹಿನ್ನೆಲೆಯಲ್ಲಿ ನಕ್ಸಲ್ ಗುಂಪುಗಳ ನಿಷೇಧಕ್ಕೆ ಸರ್ಕಾರ ಚಿಂತನೆ ನಡೆಸಿದೆ ಎಂದು ಮೂಲಗಳು ತಿಳಿಸಿವೆ.
(ಪಿಟಿಐ)
ಮುಖಪುಟ / ಧರ್ಮ-ಕಾರಣ












Click it and Unblock the Notifications