ದಸರಾ ಉದ್ಘಾಟನೆಗೆ ಬರಗೂರು ರಾಮಚಂದ್ರಪ್ಪ

ದಸರಾ ಉದ್ಘಾಟನೆಗೆ ಬರಗೂರು ರಾಮಚಂದ್ರಪ್ಪ
ವಿಜೃಂಭನೆಯಿಂದ ದಸರಾ ಆಚರಿಸಲು 4ಕೋಟಿ ಬಿಡುಗಡೆ - ಧರ್ಮಸಿಂಗ್‌

ಬೆಂಗಳೂರು : ವರುಣನ ಕೃಪೆಯಿಂದ ರಾಜ್ಯದಲ್ಲಿ ಸಮೃದ್ಧಿಯ ಲಕ್ಷಣಗಳು ಕಾಣಿಸುತ್ತಿವೆ. ಈ ಹಿನ್ನೆಲೆಯಲ್ಲಿ ಪ್ರಸಕ್ತ ವರ್ಷದ ದಸರಾ ಮಹೋತ್ಸವವನ್ನು ವಿಜೃಂಭನೆಯಿಂದ ಆಚರಿಸಲು ರಾಜ್ಯಸರ್ಕಾರ ನಾಲ್ಕು ಕೋಟಿ ರೂ.ಗಳನ್ನು ಬಿಡುಗಡೆ ಮಾಡಿದೆ.

ವಿಧಾನಸೌಧದಲ್ಲಿ ನಡೆದ ಉನ್ನತ ಮಟ್ಟದ ಸಭೆಯಲ್ಲಿ ದಸರಾ ಸಿದ್ಧತೆಗಳ ಬಗ್ಗೆ ಮುಖ್ಯಮಂತ್ರಿ ಎನ್‌.ಧರ್ಮಸಿಂಗ್‌ ಚರ್ಚಿಸಿದರು. ಬಜೆಟ್‌ನಲ್ಲಿ ದಸರಾ ಆಚರಣೆಗೆ 74.8ಲಕ್ಷ ಮೀಸಲಿಡಲಾಗಿದೆ. ಆ ಹಣ ಸಾಲದ ಕಾರಣ, ಎರಡು ಕೋಟಿ ಬಿಡುಗಡೆ ಮಾಡುವಂತೆ ಸಮಿತಿ ಬೇಡಿಕೆ ಮುಂದಿಟ್ಟಾಗ, ಮುಖ್ಯಮಂತ್ರಿಗಳು 4ಕೋಟಿ ನೀಡುವ ಉದಾರತೆ ಪ್ರದರ್ಶಿಸಿದರು.

ದಸರಾ ಉದ್ಘಾಟಸಲು ಬಂಡಾಯ ಸಾಹಿತಿ ಪ್ರೊ.ಬರಗೂರು ರಾಮಚಂದ್ರಪ್ಪ ಅವರಿಗೆ ಅವಕಾಶ ನೀಡುವಂತೆ ಸೂಚಿಸಿರುವ ಧರ್ಮಸಿಂಗ್‌, ವಿಶೇಷ ಆಹ್ವಾನಿತರಾಗಿ ಕೇಂದ್ರ ಹಣಕಾಸು ಸಚಿವ ಪಿ. ಚಿದಂಬರಂ ಅಥವಾ ಪ್ರವಾಸೋದ್ಯಮ ಸಚಿವೆ ರೇಣುಕಾಚೌಧರಿ ಅವರನ್ನು ಆಹ್ವಾನಿಸಬೇಕೆಂದು ಹೇಳಿದರು.

ಅವಕಾಶ : ದಸರಾ ಉತ್ಸವದ ಉದ್ಘಾಟನೆಗೆ ಗಾಯಕ ಪಿ.ಬಿ.ಶ್ರೀನಿವಾಸ್‌, ಡಾ.ಯು.ಆರ್‌. ರಾವ್‌ ಮತ್ತು ಸಾಹಿತಿ ಪ್ರೊ.ಎಲ್‌. ಎಸ್‌.ಶೇಷಗಿರಿರಾವ್‌ ಅವರ ಹೆಸರುಗಳು ಪಟ್ಟಿಯಲ್ಲಿದ್ದವು. ಮುಖ್ಯಮಂತ್ರಿಗಳ ಸಲಹೆಯ ಮೇರೆಗೆ ಬರಗೂರು ರಾಮಚಂದ್ರಪ್ಪ ಅವರಿಗೆ ದಸರಾ ಉದ್ಘಾಟಿಸುವ ಅವಕಾಶ ಲಭ್ಯವಾಗಿದೆ.

(ಇನ್ಫೋ ವಾರ್ತೆ)

ಮುಖಪುಟ / ಧರ್ಮ-ಕಾರಣ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+