ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅತಿವೃಷ್ಟಿ : ಶೇ.50ರ ರಿಯಾಯತಿಯಲ್ಲಿ ಬೀಜ ವಿತರಣೆ

By Staff
|
Google Oneindia Kannada News

ಅತಿವೃಷ್ಟಿ : ಶೇ.50ರ ರಿಯಾಯತಿಯಲ್ಲಿ ಬೀಜ ವಿತರಣೆ
ರಾಗಿ, ಭತ್ತ, ಸೂರ್ಯಕಾಂತಿ, ಅಲಸಂದೆ ಮುಂತಾದ ಬೀಜಗಳ ವಿತರಣೆ

ಬೆಂಗಳೂರು : ಅತಿವೃಷ್ಟಿಯಿಂದ ಬೆಳೆಹಾನಿಗೊಳಗಾಗಿರುವ ರೈತರಿಗೆ ಪರ್ಯಾಯ ಬೆಳೆ ಬೆಳೆಯಲು ಸರ್ಕಾರ ಸರ್ಕಾರ ಶೇ.50ರ ರಿಯಾಯತಿಯಲ್ಲಿ ಬಿತ್ತನೆ ಬೀಜ ವಿತರಿಸಲಿದೆ.

ಈ ಕುರಿತು ಕೃಷಿ ಸಚಿವ ಕೆ.ಶ್ರೀನಿವಾಸಗೌಡ ಶುಕ್ರವಾರ ಪ್ರಕಟಿಸಿದ್ದಾರೆ. ರಿಯಾಯತಿ ದರದಲ್ಲಿ ಈಗಾಗಲೇ ಬೀಜ ಪಡೆದು ಬಿತ್ತನೆ ಮಾಡಿ, ಬೆಳೆ ಹಾನಿಗೊಳಗಾಗಿರುವ ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ಮಾತ್ರ ಈ ಸೌಲಭ್ಯ ಅನ್ವಯವಾಗುತ್ತದೆ ಎಂದು ಅವರು ತಿಳಿಸಿದರು.

ಯೋಜನೆಯಲ್ಲಿ ಅಳವಡಿಸಿರುವ 13ಬೆಳೆಗಳ ಪೈಕಿ, ಭತ್ತ, ರಾಗಿ, ಸೂರ್ಯಕಾಂತಿ, ಅಲಸಂದೆ ಸೇರಿದಂತೆ ತಡವಾಗಿ ಬಿತ್ತನೆ ಮಾಡಬಹುದಾದ ಬೆಳೆಗಳ ಬೀಜವನ್ನು ರೈತರಿಗೆ ವಿತರಿಸಲಾಗುವುದು. ಈ ಹಿಂದೆ ರಿಯಾಯತಿ ದರದಲ್ಲಿ ಬೀಜ ಪಡೆದವರೂ ಈ ಸೌಲಭ್ಯಕ್ಕೆ ಅರ್ಹರು. ಹಾನಿಗೊಳಗಾದ ಪ್ರದೇಶ, ರೈತರ ಸಂಖ್ಯೆ, ಬೇಡಿಕೆ ಪ್ರಮಾಣಕ್ಕನುಗುಣವಾಗಿ ಬೀಜ ವಿತರಿಸಲಾಗುವುದು ಎಂದು ಅವರು ವಿವರಿಸಿದರು.

(ಇನ್ಫೋ ವಾರ್ತೆ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X