ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಾಂಗ್ರೆಸ್‌ ಅಧಿನಾಯಕಿ ಸೋನಿಯಾ ಪುನರಾಯ್ಕೆ

By Staff
|
Google Oneindia Kannada News

ಕಾಂಗ್ರೆಸ್‌ ಅಧಿನಾಯಕಿ ಸೋನಿಯಾ ಪುನರಾಯ್ಕೆ
ಶುಕ್ರವಾರ, ಸೋನಿಯಾರನ್ನು ಹೊರತುಪಡಿಸಿ ಮತ್ಯಾರೂ ನಾಮಪತ್ರ ಸಲ್ಲಿಸಿರಲಿಲ್ಲ

ನವದೆಹಲಿ : ಸ್ಪರ್ಧಿಗಳಿಲ್ಲದ ಕಾರಣ ಕಾಂಗ್ರೆಸ್‌ ಪಕ್ಷ(ಎಐಸಿಸಿ)ದ ಅಧ್ಯಕ್ಷೆಯಾಗಿ ಸೋನಿಯಾ ಗಾಂಧಿ ಅವಿರೋಧವಾಗಿ ಶನಿವಾರ ಅಧಿಕೃತವಾಗಿ ಪುನರಾಯ್ಕೆಯಾಗಿದ್ದಾರೆ.

ಎಐಸಿಸಿ ಕೇಂದ್ರ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಪಕ್ಷದ ಕೇಂದ್ರ ಚುನಾವಣಾಧಿಕಾರಿ ಆಸ್ಕರ್‌ ಫರ್ನಾಂಡಿಸ್‌ ಈ ಸಂಗತಿಯನ್ನು ಪ್ರಕಟಿಸಿದರು. ಸೋನಿಯಾ ಗಾಂಧಿ ಸೇರಿದಂತೆ ಪಕ್ಷದ ವಿವಿಧ ಗಣ್ಯರು ಈ ಸಂದರ್ಭದಲ್ಲಿ ಹಾಜರಿದ್ದರು.

ಪಕ್ಷದ ಅಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸುವ ಕಡೆಯ ದಿನವಾದ ಶುಕ್ರವಾರ, ಸೋನಿಯಾರನ್ನು ಹೊರತುಪಡಿಸಿ ಮತ್ಯಾರೂ ನಾಮಪತ್ರ ಸಲ್ಲಿಸಿರಲಿಲ್ಲ. ಹೀಗಾಗಿ ಅವರ ಅವಿರೋಧ ಆಯ್ಕೆ ಸುಲಭವಾಯಿತು. ಪ್ರಧಾನಿ ಮನಮೋಹನ್‌ ಸಿಂಗ್‌ ಸೇರಿದಂತೆ ಪಕ್ಷದ ನೂರಕ್ಕೂ ಅಧಿಕ ಮಂದಿ ಸೋನಿಯಾ ಆಯ್ಕೆಯನ್ನು ಬೆಂಬಲಿಸಿ ನಾಮಪತ್ರ ಸಲ್ಲಿಸಿದ್ದರು.

ಹದಿನಾಲ್ಕನೇ ಲೋಕಸಭೆಯಲ್ಲಿ ಕಾಂಗ್ರೆಸ್‌ಗೆ ಗೆಲುವು ತಂದುಕೊಟ್ಟಿದ್ದ ಸೋನಿಯಾ, ಪ್ರಧಾನಿ ಹುದ್ದೆಯನ್ನು ತ್ಯಜಿಸಿದ್ದರು. ಕಳೆದ ಎಐಸಿಸಿ ಚುನಾವಣೆಯಲ್ಲಿ ಪಕ್ಷದ ಹಿರಿಯ ಮುಖಂಡ ಜಿತೇಂದ್ರ ಪ್ರಸಾದ್‌ ಸ್ಪರ್ಧೆವೊಡ್ಡಿದ್ದರಿಂದ ಸೋನಿಯಾ ಚುನಾವಣೆ ಎದುರಿಸುವುದು ಅನಿವಾರ್ಯವಾಗಿತ್ತು.

ಸೀತಾರಾಂ ಕೇಸರಿ ನಂತರ ಅಂದರೆ 1998ರಿಂದ ಪಕ್ಷವನ್ನು ಪ್ರಶ್ನಾತೀತ ನಾಯಕಿಯಾಗಿ ಸೋನಿಯಾ ಮುನ್ನಡೆಸುತ್ತಿದ್ದಾರೆ.

(ಏಜನ್ಸೀಸ್‌)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X