ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಮ್ಮ ಜೊತೆ ಕೈಜೋಡಿಸಿ : ಜೆಡಿಎಸ್‌ಗೆ ಬಿಜೆಪಿ ಆಹ್ವಾನ

By Staff
|
Google Oneindia Kannada News

ನಮ್ಮ ಜೊತೆ ಕೈಜೋಡಿಸಿ : ಜೆಡಿಎಸ್‌ಗೆ ಬಿಜೆಪಿ ಆಹ್ವಾನ
ಭೂಹಗರಣದಲ್ಲಿ ಕಾಂಗ್ರೆಸ್‌ ಮತ್ತು ಜೆಡಿಎಸ್‌ ನಾಯಕರು ಸಮಾನ ಕಳ್ಳರು -ಬಿ.ಎಸ್‌.ಯಡಿಯೂರಪ್ಪ

ದಾವಣಗೆರೆ : ಭೂಗಳ್ಳತನಕ್ಕೆ ಸಂಬಂಧಿಸಿದಂತೆ ದೇವೇಗೌಡರು ಕಾಂಗ್ರೆಸ್‌ ಜೊತೆ ನಿತ್ಯ ಜಗಳವಾಡುವ ಬದಲು ಬಿಜೆಪಿಗೆ ಬಾಹ್ಯ ಬೆಂಬಲ ನೀಡಿದರೆ, ಭೂಹಗರಣ ಸೇರಿದಂತೆ ಇತರ ಪ್ರಕರಣಗಳ ಸತ್ಯವನ್ನು ಹೊರತೆಗೆಯುವುದಾಗಿ ಪ್ರತಿಪಕ್ಷದ ನಾಯಕ ಹಾಗೂ ಬಿಜೆಪಿ ಮುಖಂಡ ಬಿ.ಎಸ್‌.ಯಡಿಯೂರಪ್ಪ ಸಲಹೆ ನೀಡಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಮ್ಮಿಶ್ರ ಸರ್ಕಾರದಿಂದ ಹೊರಬಂದು ಜೆಡಿಎಸ್‌ ಬಿಜೆಪಿ ಜೊತೆ ಸರ್ಕಾರ ರಚಿಸಲಿ. ಇಲ್ಲವಾದರೇ ಷರತ್ತು ಬದ್ಧ ಬೆಂಬಲವನ್ನಾದರೂ ನೀಡಲಿ. ಕೇವಲ ಮೂರು ತಿಂಗಳಲ್ಲಿ ಎಲ್ಲ ಪ್ರಕರಣಗಳನ್ನು ಇತ್ಯರ್ಥಗೊಳಿಸುವುದಾಗಿ ಹೇಳಿದರು.

ಮಾಜಿ ಮುಖ್ಯಮಂತ್ರಿ ದಿ.ರಾಮಕೃಷ್ಣ ಹೆಗಡೆ ಸರ್ಕಾರಕ್ಕೆ ಹಿಂದೆ ಬಿಜೆಪಿ ಬೆಂಬಲ ನೀಡಿತ್ತು. ಅದೇ ಮಾದರಿಯಲ್ಲಿ ಜೆಡಿಎಸ್‌ಗೆ ಬಡವರ ಬಗ್ಗೆ ಪ್ರಾಮಾಣಿಕ ಕಾಳಜಿಯಿದ್ದರೆ, ಬಿಜೆಪಿಯನ್ನು ಬೆಂಬಲಿಸಲಿ. ಭೂಹಗರಣದಲ್ಲಿ ಕಾಂಗ್ರೆಸ್‌ ಮತ್ತು ಜೆಡಿಎಸ್‌ ನಾಯಕರು ಸಮಾನ ಕಳ್ಳರು. ಅಧಿಕಾರಕ್ಕಾಗಿ ಕೀಳು ರಾಜಕಾರಣ ನಡೆಸುತ್ತಿದ್ದಾರೆ ಎಂದು ಯಡಿಯೂರಪ್ಪ ಅಭಿಪ್ರಾಯಪಟ್ಟರು.

ದೂರವೇ ಇರಲಿ ಬಿಜೆಪಿ : ಯಡಿಯೂರಪ್ಪ ಅವರ ಆಹ್ವಾನವನ್ನು ತಿರಸ್ಕರಿಸಿರುವ ಮಾಜಿ ಪ್ರಧಾನಿ ದೇವೇಗೌಡ, ಬಿಜೆಪಿ ಮೊದಲು ಪ್ರತಿಪಕ್ಷವಾಗಿ ಕೆಲಸಮಾಡುವುದನ್ನು ಕಲಿಯಲಿ, ಆಮೇಲೆ ಅಧಿಕಾರದ ಕನಸು ಕಾಣಲಿ ಎಂದಿದ್ದಾರೆ.

ಭೂಹಗರಣದ ಬಗ್ಗೆ ಈವರೆಗೆ ಮೌನವಹಿಸಿದ್ದ ಬಿಐಪಿ, ಅಧಿಕಾರಕ್ಕಾಗಿ ನಮ್ಮನ್ನು ಒಲಿಸಲು ಯತ್ನಿಸುತ್ತಿದೆ. ಅತಂತ್ರ ವಿಧಾನಸಭೆಯಿಂದ ನಿರ್ಮಾಣವಾಗುವ ರಾಷ್ಟ್ರಪತಿ ಆಡಳಿತವನ್ನು ತಪ್ಪಿಸಲು ಕಾಂಗ್ರೆಸ್‌ ಜೊತೆ ಕೈಜೋಡಿಸಲಾಗಿದೆ ಎಂದು ದೇವೇಗೌಡ ತಿಳಿಸಿದ್ದಾರೆ.
(ಇನ್ಫೋ ವಾರ್ತೆ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X