ಮೈಸೂರು ವಿಶ್ವವಿದ್ಯಾಲಯದಿಂದ ಮತ್ತೆ ದೂರಶಿಕ್ಷಣ
ಮೈಸೂರು ವಿಶ್ವವಿದ್ಯಾಲಯದಿಂದ ಮತ್ತೆ ದೂರಶಿಕ್ಷಣ
ಐದು ವರ್ಷಗಳ ಸ್ನಾತಕೋತ್ತರ ಸಮಗ್ರ ಶಿಕ್ಷಣಕ್ಕೆ ಉತ್ತಮ ಪ್ರತಿಕ್ರಿಯೆ -ಡಾ.ಶಶಿಧರ ಪ್ರಸಾದ್
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶೈಕ್ಷಣಿಕ ಮಂಡಳಿ ಸಭೆಯಲ್ಲಿ ಈ ಬಗ್ಗೆ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗಿದೆ. ಸರ್ಕಾರ ಸಹಾ ಸಮ್ಮತಿಸಿದೆ ಎಂದರು.
ವಿವಿ ಆವರಣದಲ್ಲಿಯೇ ಕರ್ನಾಟಕ ರಾಜ್ಯ ಮುಕ್ತ ವಿವಿಯನ್ನು ದೂರಶಿಕ್ಷಣದ ಸಲುವಾಗಿಯೇ ಆರಂಭಿಸಲಾಗಿದೆ. ಆದರೆ ಇತರ ವಿವಿಗಳೂ ದೂರ ಶಿಕ್ಷಣ ನೀಡುತ್ತಿರುವ ಹಿನ್ನೆಲೆಯಲ್ಲಿ ಮೈಸೂರು ವಿವಿಯೂ ಕಾರ್ಯಪ್ರವೃತ್ತವಾಗಿದೆ. ವಿಶ್ವವಿದ್ಯಾಲಯ ಆರಂಭಿಸಿರುವ ಐದು ವರ್ಷಗಳ ಸ್ನಾತಕೋತ್ತರ ಸಮಗ್ರ ಶಿಕ್ಷಣಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ ಎಂದು ಶಶಿಧರ ಪ್ರಸಾದ್ ತಿಳಿಸಿದರು.
(ಇನ್ಫೋ ವಾರ್ತೆ)
ಮುಖಪುಟ / ವಾರ್ತೆಗಳು












Click it and Unblock the Notifications