ಖಾಸಗಿ ವಲಯಗಳಲ್ಲೂ ಮೀಸಲಾತಿ ಅಗತ್ಯವಾಗಿದೆ -ಸಿದ್ಧರಾಮಯ್ಯ

ಖಾಸಗಿ ವಲಯಗಳಲ್ಲೂ ಮೀಸಲಾತಿ ಅಗತ್ಯವಾಗಿದೆ -ಸಿದ್ಧರಾಮಯ್ಯ
ದುರ್ಬಲ ಸಮುದಾಯಗಳ ಆಂತರಿಕ ಸಂಘಟನೆಗೆ ಕರೆ

ಮೈಸೂರು : ಖಾಸಗಿ ವಲಯದಲ್ಲೂ ಮೀಸಲಾತಿಯ ಅಗತ್ಯವಿದೆ ಎಂದು ಉಪ ಮುಖ್ಯಮಂತ್ರಿ ಸಿದ್ಧರಾಮಯ್ಯ ಅಭಿಪ್ರಾಯಪಟ್ಟಿದ್ದಾರೆ.

ದುರ್ಬಲ ವರ್ಗದವರ ಹಿತಾಸಕ್ತಿ ರಕ್ಷಣೆಗಾಗಿ ಖಾಸಗಿ ವಲಯದಲ್ಲೂ ಮೀಸಲಾತಿ ಅಗತ್ಯವಿದೆ. ಸಾಮಾಜಿಕ ಸಮಾನತೆ ಮತ್ತು ಅಭಿವೃದ್ಧಿ ಕಾರ್ಯಕ್ರಮಗಳು ಪ್ರಾಮಾಣಿಕವಾಗಿ ನಡೆಯಬೇಕೇ ಹೊರತು ಓಟುಬ್ಯಾಂಕ್‌ ಮೇಲೆ ಆಧಾರಿತವಾಗಬಾರದು ಎಂದು ಸಿದ್ಧರಾಮಯ್ಯ ಹೇಳಿದರು. ಮೈಸೂರಿನಲ್ಲಿ ನಡೆದ ಬಹುಜನ್‌ ವಿದ್ಯಾರ್ಥಿಗಳ ಸಮಾವೇಶವನ್ನು ಉದ್ಘಾಟಿಸಿ ಸಿದ್ಧರಾಮಯ್ಯ ಮಾತನಾಡುತ್ತಿದ್ದರು.

ದೇಶದಲ್ಲಿ ಸಾಮಾಜಿಕ ನ್ಯಾಯ ಸ್ಥಾಪನೆಗಾಗಿ ಅಂಬೇಡ್ಕರ್‌ ಹೋರಾಟ ನಡೆಸಿದರು. ಇದೇ ಸಂದರ್ಭದಲ್ಲಿ ದಲಿತರ ಮುಖಂಡ ಹಾಗೂ ತತ್ವಜ್ಞಾನಿ ಕನಕದಾಸರನ್ನೂ ನಾವು ನೆನೆಯಬೇಕಿದೆ. ಇಬ್ಬರೂ ತಂತಮ್ಮ ಆದರ್ಶಗಳಿಗಾಗಿ ಹೋರಾಡಿದವರು ಹಾಗೂ ಅವಮಾನಕ್ಕೆ ತುತ್ತಾದವರು ಎಂದು ಸಿದ್ಧರಾಮಯ್ಯಬಣ್ಣಿಸಿದರು.

ಸಮಾಜದಲ್ಲಿನ ಕೆಲವು ವರ್ಗಗಳು ದುರ್ಬಲ ಸಮುದಾಯವನ್ನು ತುಳಿಯುತ್ತಿರುವ ಕುರಿತು ಸಿದ್ಧರಾಮಯ್ಯ ವಿಷಾದ ವ್ಯಕ್ತಪಡಿಸಿದರು. ಸಮಾಜದ ಕೆಳವರ್ಗದ ಜನತೆ ತಂತಮ್ಮಲ್ಲೇ ಸಂಘಟಿತರಾಗಬೇಕು ಎಂದು ಸಿದ್ಧರಾಮಯ್ಯ ಕರೆ ನೀಡಿದರು.

(ಇನ್ಫೋ ವಾರ್ತೆ)

ಮುಖಪುಟ / ವಾರ್ತೆಗಳು

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+