ಹಂಪಿ ವಿವಿಗೆ ಕೇಂದ್ರೀಯ ಸ್ಥಾನಮಾನ ನೀಡಲು ವಿವೇಕ್‌ರೈ ಆಗ್ರಹ

ಹಂಪಿ ವಿವಿಗೆ ಕೇಂದ್ರೀಯ ಸ್ಥಾನಮಾನ ನೀಡಲು ವಿವೇಕ್‌ರೈ ಆಗ್ರಹ
ವಿಶ್ವವಿದ್ಯಾಲಯದ ಕನ್ನಡಪರ ಕಾರ್ಯಕ್ರಮಗಳಿಗೆ ಹಣದ ಕೊರತೆ

ಬೀದರ್‌ : ಹೈದರಾಬಾದ್‌ನ ಉರ್ದು ವಿಶ್ವವಿದ್ಯಾಲಯದ ಮಾದರಿಯಲ್ಲಿ ಕನ್ನಡ ವಿಶ್ವವಿದ್ಯಾಲಯಕ್ಕೆ ಕೇಂದ್ರೀಯ ವಿಶ್ವವಿದ್ಯಾಲಯ ಸ್ಥಾನಮಾನ ನೀಡುವಂತೆ ಹಂಪಿ ವಿವಿ ಒತ್ತಾಯಿಸಿದೆ.

ಕನ್ನಡ ಭಾಷೆ ಹಾಗೂ ಸಂಸ್ಕೃತಿಯ ಅಭಿವೃದ್ಧಿಗಾಗಿ ವಿಶ್ವವಿದ್ಯಾಲಯ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಆದರೆ ವಿಶ್ವವಿದ್ಯಾಲಯದ ಸಂಪನ್ಮೂಲಗಳು ಕಡಿಮೆ ಸಂಖ್ಯೆಯಲ್ಲಿದ್ದು , ಹೆಚ್ಚಿನ ಕಾರ್ಯಕ್ರಮಗಳನ್ನು ನಡೆಸಲು ಅಡ್ಡಿಯಾಗಿದೆ. ಆದುದರಿಂದ ಕನ್ನಡ ವಿವಿಗೆ ಕೇಂದ್ರೀಯ ವಿವಿ ಸ್ಥಾನಮಾನ ನೀಡುವ ಮೂಲಕ ಅನುದಾನ ನೀಡಬೇಕೆಂದು ನಾವು ಕೇಂದ್ರಸರ್ಕಾರವನ್ನು ಕೋರಿದ್ದೇವೆ ಎಂದು ವಿವಿ ಉಪ ಕುಲಪತಿ ವಿವೇಕ್‌ ರೈ ಜನವರಿ 30ರಂದು ಸುದ್ದಿಗಾರರಿಗೆ ತಿಳಿಸಿದರು.

ಯಾವುದೇ ಹಣಕಾಸು ಕೋರ್ಸುಗಳು ಅಥವಾ ಪೇಮೆಂಟ್‌ ಸೀಟುಗಳು ಈ ರೀತಿಯ ವಿಶ್ವವಿದ್ಯಾಲಯದಲ್ಲಿ ಇರುವುದಿಲ್ಲ . ಹಣಕಾಸಿನ ಸ್ವಂತ ಮೂಲಗಳು ಕೂಡ ಕಡಿಮೆ ಇರುತ್ತವೆ. ಆ ಕಾರಣದಿಂದಾಗಿ ಸರ್ಕಾರದ ನೆರವು ಅತ್ಯಗತ್ಯವಾಗಿದೆ ಎಂದು ವಿವೇಕ್‌ ರೈ ಹೇಳಿದರು.

ಗುಡ್ಡಗಾಡು ಸಮುದಾಯಗಳು ಹಾಗೂ ಜಾನಪದ ಕಲಾವಿದರ ಕುರಿತು ವಿವಿ ಹೆಚ್ಚಿನ ಆಸ್ಥೆ ವಹಿಸುತ್ತಿದೆ. ರಾಜ್ಯದ ಎಲ್ಲ ಜಿಲ್ಲೆಗಳಲ್ಲಿನ ಗುಡ್ಡಗಾಡು ಜನಾಂಗವನ್ನು ವಿಶ್ವವಿದ್ಯಾಲಯ ಗುರ್ತಿಸುವ ಕಾರ್ಯ ನಡೆಸುತ್ತಿದೆ ಎಂದು ವಿವೇಕ್‌ ರೈ ಹೇಳಿದರು.

(ಇನ್ಫೋ ವಾರ್ತೆ)

ಮುಖಪುಟ / ವಾರ್ತೆಗಳು

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+