ವಿಶ್ವೇಶ್ವರಭಟ್‌ಗೆ ಪ್ರೆಸ್‌ಕ್ಲಬ್ ಸಮ್ಮಾನ
ವಿಶ್ವೇಶ್ವರಭಟ್‌ಗೆ ಪ್ರೆಸ್‌ಕ್ಲಬ್ ಸಮ್ಮಾನ
ನ್ಯಾಯಮೂರ್ತಿ ವೆಂಕಟಾಚಲ, ಕುಂಬ್ಳೆಗೆ ವರ್ಷದ ವ್ಯಕ್ತಿ ಪುರಸ್ಕಾರ ಪ್ರದಾನ
ಪ್ರಸಕ್ತ ವರ್ಷದಿಂದ ಆರಂಭಿಸಿರುವ ಪ್ರೆಸ್‌ಕ್ಲಬ್ ಪತ್ರಕರ್ತ ಪ್ರಶಸ್ತಿಯನ್ನು ವಿಶ್ವೇಶ್ವರ ಭಟ್, ಪ್ರಜಾವಾಣಿ ವ್ಯಂಗ್ಯಚಿತ್ರ ಕಲಾವಿದ ಚಂದ್ರನಾಥ ಆಚಾರ್ಯರಿಗೆ ಜನವರಿ 20ರ ಗುರುವಾರ ನೀಡಲಾಯಿತು. ಇದೇ ಸಂದರ್ಭದಲ್ಲಿ ಪ್ರೆಸ್‌ಕ್ಲಬ್ ವರ್ಷದ ವ್ಯಕ್ತಿ ಪುರಸ್ಕಾರವನ್ನು ಲೋಕಾಯುಕ್ತ ವೆಂಕಟಾಚಲ ಮತ್ತು ಕ್ರಿಕೆಟ್‌ಪಟು ಅನಿಲ್ ಕುಂಬ್ಳೆ ್ಫಅವರಿಗೆ ನೀಡವಾಯಿತು. ಮುಖ್ಯಮಂತ್ರಿ ಎನ್.ಧರ್ಮಸಿಂಗ್ ಪ್ರಶಸ್ತಿಗಳನ್ನು ವಿತರಿಸಿದರು.
ಲೋಕಾಯುಕ್ತ ವೆಂಕಟಾಚಲ ಮಾತನಾಡಿ, ಕೆಲಸವನ್ನು ಮಾಡದೆ ಕಚೇರಿ ಅವಧಿಯಲ್ಲಿ ಸಚಿವಾಲಯದ ಅನೇಕ ಅಧಿಕಾರಿಗಳು ಹೊರಗಡೆ ಸುತ್ತಾಡುತ್ತಾರೆ. ಸರಕಾರದ ಧೋರಣೆ ವಿರುದ್ಧ ವಿರೋಧ ಪಕ್ಷಗಳು ದನಿ ಎತ್ತದ ಕಾರಣ, ಭ್ರಷ್ಟಾಚಾರ ಹೆಚ್ಚಿದೆ. ಸರಕಾರ ಲೋಕಾಯುಕ್ತಕ್ಕೆ ಹೆಚ್ಚಿನ ಅಧಿಕಾರ ನೀಡಬೇಕು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜ್ಞಾನಪೀಠ ಪುರಸ್ಕೃತ ಯು.ಆರ್. ಅನಂತಮೂರ್ತಿ ಮಾತನಾಡಿ, ಮತೀಯ ಪ್ರಾರ್ಥನಾ ಸಭೆಗಳನ್ನು ಏರ್ಪಡಿಸದಿರುವಂತೆ ಸರ್ಕಾರವನ್ನು ಒತ್ತಾಯಿಸಿದರು.
ಪ್ರೆಸ್‌ಕ್ಲಬ್‌ಗೆ ಕಬ್ಬನ್ ಪಾರ್ಕ್‌ನಲ್ಲಿ 1.2 ಎಕರೆ ಜಾಗ ನೀಡುವಂತೆ ಮುಖ್ಯಮಂತ್ರಿಗಳಿಗೆ ಪ್ರಸ್ತಾವನೆ ಸಲ್ಲಿಸಲಾಯಿತು. ಪ್ರೆಸ್‌ಕ್ಲಬ್ ಅಧ್ಯಕ್ಷ ಅರಕೆರೆ ಜಯರಾಮ್, ಪ್ರಧಾನ ಕಾರ್ಯದರ್ಶಿ ಸದಾಶಿವ ಶೆಣೈ ಮತ್ತಿತರರು ಹಾಜರಿದ್ದರು.
(ಇನ್ಫೋ ವಾರ್ತೆ)
ಮುಖಪುಟ / ವಾರ್ತೆಗಳು












Click it and Unblock the Notifications