ಹೃದಯತಜ್ಞ ಡಾ.ದೇವಿಪ್ರಸಾದ್‌ ಶೆಟ್ಟಿಗೆ ಬಿ.ಸಿ. ರಾಯ್‌ ಪ್ರಶಸ್ತಿ ಗರಿ

ಹೃದಯತಜ್ಞ ಡಾ.ದೇವಿಪ್ರಸಾದ್‌ ಶೆಟ್ಟಿಗೆ ಬಿ.ಸಿ. ರಾಯ್‌ ಪ್ರಶಸ್ತಿ ಗರಿ
ಮೂವರು ಖ್ಯಾತ ವೈದ್ಯರಿಗೆ ರಾಯ್‌ ಪ್ರಶಸ್ತಿ ಪ್ರಕಟ

Dr. Devi Shettyಬೆಂಗಳೂರು : ದೇಶದ ಅತ್ಯುತ್ತಮ ಹೃದ್ರೋಗ ತಜ್ಞರಲ್ಲೊಬ್ಬರಾದ ಡಾ. ದೇವಿ ಪ್ರಸಾದ್‌ ಶೆಟ್ಟಿ ಪ್ರತಿಷ್ಠಿತ ಬಿ.ಸಿ.ರಾಯ್‌ ಪ್ರಶಸ್ತಿ ಗೆ ಆಯ್ಕೆಯಾಗಿದ್ದಾರೆ.

ಡಾ. ಬಿ. ಸಿ.ರಾಯ್‌ ರಾಷ್ಟ್ರೀಯ ಪ್ರಶಸ್ತಿ ನಿಧಿಯ ಆಡಳಿತ ಮಂಡಳಿ ಸಮಿತಿ 2003ರ ಸಾಲಿನ ಪ್ರಶಸ್ತಿಗಳನ್ನು ಜನವರಿ 20ರಂದು ಪ್ರಕಟಿಸಿದೆ. ಡಾ. ದೇವಿ ಶೆಟ್ಟಿ ಅವರೊಂದಿಗೆ ಖ್ಯಾತ ದಂತ ವೈದ್ಯ ಡಾ. ಅನಿಲ್‌ ಕೋಹ್ಲಿ , ಮೆಟ್ರೋ ಸಮೂಹದ ಆಸ್ಪತ್ರೆಯ ಅಧ್ಯಕ್ಷ ಡಾ.ಪುರುಷೋತ್ತಮ ಲಾಲ್‌, ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆಯ ಡಾ. ಮನೋಜ್‌ಕುಮಾರ್‌ ಸಿಂಗ್‌, ಡಾ. ಅನುಪಮ ಸಚ್‌ದೇವ್‌ ಹಾಗೂ ಡಾ. ರವಿ ಕಸ್ಲಿವಾಸ್‌ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.

ಬೆಂಗಳೂರಿನ ಹೊಸೂರು ರಸ್ತೆಯಲ್ಲಿ ಡಾ. ದೇವಿಶೆಟ್ಟಿ ನೇತೃತ್ವದಲ್ಲಿ ನಡೆಯುತ್ತಿರುವ ನಾರಾಯಣ ಹೃದಯಾಲಯ ಅಂತರರಾಷ್ಟ್ರೀಯ ಖ್ಯಾತಿ ಗಳಿಸಿದೆ. ಮಣಿಪಾಲ್‌ ಹೃದ್ರೋಗ ಪ್ರತಿಷ್ಠಾನದ ಸ್ಥಾಪನೆಯಲ್ಲೂ ದೇವಿಶೆಟ್ಟಿ ಮಹತ್ವದ ಪಾತ್ರ ವಹಿಸಿದ್ದರು.

(ಇನ್ಫೋ ವಾರ್ತೆ)

ಮುಖಪುಟ / ವಾರ್ತೆಗಳು

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+