ಬೆಂಗಳೂರು ಬಂದ್‌ಗೆ ಚುರುಕು ಪ್ರತಿಕ್ರಿಯೆ : ಬಸ್ಸುಗಳ ಮೇಲೆ ಕಲ್ಲು

ಬೆಂಗಳೂರು ಬಂದ್‌ಗೆ ಚುರುಕು ಪ್ರತಿಕ್ರಿಯೆ : ಬಸ್ಸುಗಳ ಮೇಲೆ ಕಲ್ಲು
ಬೆನ್ನಿ ಸಭೆ ಯಶಸ್ಸಿಗೆ ಟೊಂಕ ಕಟ್ಟಿ ನಿಂತಿರುವ ಧರ್ಮ ಸರ್ಕಾರ

ಬೆಂಗಳೂರು : ಬೆನ್ನಿ ಹಿನ್‌ ಪ್ರಾರ್ಥನಾ ಸಭೆ ಹಿನ್ನೆಲೆಯಲ್ಲಿ ರಾಜ್ಯ ಬಿಜೆಪಿ ಸೇರಿದಂತೆ ವಿವಿಧ ಸಂಘಟನೆಗಳು ಕರೆ ನೀಡಿರುವ ಒಂದು ದಿನದ ಬೆಂಗಳೂರು ಬಂದ್‌ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಬೆನ್ನಿ ಕಾರ್ಯಕ್ರಮದ ಯಶಸ್ಸಿಗೆ ಧರ್ಮಸಿಂಗ್‌ ನೇತೃತ್ವದ ಆಡಳಿತ ಯಂತ್ರ ಟೊಂಕ ಕಟ್ಟಿ ನಿಂತಿರುವ ನಡುವೆಯೂ ಬೆಂಗಳೂರು ಬಂದ್‌ಗೆ (ಜ. 21ರ ಶುಕ್ರವಾರ) ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ನಗರದ ಅನೇಕ ಭಾಗಗಳಲ್ಲಿ ಅಂಗಡಿ ಮುಂಗಟ್ಟುಗಳು ಶುಕ್ರವಾರ ಬೆಳಗ್ಗೆ ಬಾಗಿಲು ತೆರೆದಿರಲಿಲ್ಲ . ಬಾಗಿಲು ತೆರೆದ ಅಂಗಡಿ ಮುಂಗಟ್ಟುಗಳನ್ನು ಕೆಲವು ಗುಂಪುಗಳು ಮುಚ್ಚಿಸುತ್ತಿದ್ದ ದೃಶ್ಯಗಳೂ ಸಾಮಾನ್ಯವಾಗಿದ್ದವು. ರಸ್ತೆಗಳಲ್ಲಿ ಶಸ್ತ್ರಧಾರಿ ಪೊಲೀಸರು ಠಳಾಯಿಸುತ್ತಿರುವ ದೃಶ್ಯಗಳೂ ಸಾಮಾನ್ಯವಾಗಿವೆ.

ಸರ್ಕಾರಿ ಕಚೇರಿ ಹಾಗೂ ಶಾಲಾ ಕಾಲೇಜುಗಳಿಗೆ ಬಕ್ರೀದ್‌ ಪ್ರಯುಕ್ತ ರಜೆಯಿರುವುದರಿಂದ ವಾಹನ ಸಂಚಾರ ವಿರಳವಾಗಿದೆ. ಉಳಿದಂತೆ ಖಾಸಗಿ ಕಚೇರಿಗಳಲ್ಲೂ ಹಾಜರಾತಿ ಸಂಖ್ಯೆ ಕುಸಿದಿದೆ.

ಕಲ್ಲು ತೂರಾಟ : ನಗರದ ಅನೇಕ ಕಡೆಗಳಲ್ಲಿ ಕಲ್ಲು ತೂರಾಟದ ಘಟನೆಗಳು ನಡೆದಿವೆ ಎಂದು ನಗರ ಪೊಲೀಸ್‌ ಕಮೀಷನರ್‌ ಮರಿಸ್ವಾಮಿ ತಿಳಿಸಿದ್ದಾರೆ. ಪರಿಸ್ಥಿತಿ ನಿಯಂತ್ರಣದಲ್ಲಿ , ಜನಜೀವನಕ್ಕೆ ಯಾವುದೇ ತೊಂದರೆಯಾಗಿಲ್ಲ ಎಂದು ಮರಿಸ್ವಾಮಿ ಹೇಳಿದ್ದಾರೆ.

ಕಲ್ಲು ತೂರಾಟದಲ್ಲಿ ಅನೇಕ ಬಸ್ಸುಗಳು ಜಖಂಗೊಂಡಿವೆ. ಗಾಜು ಛಿದ್ರಗೊಂಡ ಬಸ್ಸುಗಳು ರಸ್ತೆ ಬದಿಗಳಲ್ಲಿ ನಿಂತಿರುವ ದೃಶ್ಯಗಳು ಅಲ್ಲಲ್ಲಿ ಕಂಡುಬರುತ್ತಿವೆ. ಜಯನಗರ, ಹೊಸೂರು ರಸ್ತೆ , ಚಾಮರಾಜಪೇಟೆ, ಹೆಬ್ಬಾಳ, ರಾಜಾಜಿನಗರ, ಜೆ.ಪಿ.ನಗರ ಮುಂತಾದೆಡೆಗಳಲ್ಲಿ ಕಲ್ಲು ತೂರಾಟದ ಘಟನೆಗಳು ನಡೆದಿವೆ.

ಇದು ಬ್ಯಾನರ್‌-ಫಲಕಗಳ ಕಾಲ : ಯುಗಾದಿಯ ಕನಸಲ್ಲಿ ಚಿಗುರು ಹೊತ್ತ ಮರಗಳಿಂದ ಸಂಭ್ರಮಿಸುತ್ತಿರುವ ಬೆಂಗಳೂರಿಗೆ ಬೆನ್ನಿ ಹಿನ್‌ ಪರ ವಿರೋಧದ ಫಲಕಗಳು-ಬ್ಯಾನರ್‌ಗಳ ಸಿಂಗಾರವೂ ಈಗ ಒದಗಿದೆ. Hindus don’t tolerate conversion, Arrest false prophet Benny Hinn, Come and be blessed ಎನ್ನುವ ಘೋಷಣೆಗಳೊಂದಿಗೆ Pray for india, Bangolore’s festival of blessings begins today ಎನ್ನುವ ಘೋಷಣೆಗಳೂ ಎಲ್ಲೆಡೆ ಕಾಣಿಸುತ್ತಿವೆ.

(ಇನ್ಫೋ ವಾರ್ತೆ)

Post your views

ವಾರ್ತಾ ಸಂಚಯ
ಕ್ರಿಸ್ತನನ್ನು 2 ಸಲ ನೋಡಿದ್ದೇನೆ, ನಾನು ಆತನ ದೂತ- ಬೆಂಗಳೂರಲ್ಲಿ ಬೆನ್ನಿ
ಬೆನ್ನಿ ಸಮ್ಮೋಹಿನಿಗೆ ಸರ್ಪಗಾವಲು ; ಭದ್ರತೆಗಾಗಿ 10000 ಪೊಲೀಸರು

ಮುಖಪುಟ / ವಾರ್ತೆಗಳು

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+