ದೇವೇಗೌಡ ವಿರುದ್ಧ ದನಿ ಎತ್ತಿದ ಭಿನ್ನರಿಗೆ ಜೆಡಿ(ಯು) ತೆರೆದ ಬಾಗಿಲು
ದೇವೇಗೌಡ ವಿರುದ್ಧ ದನಿ ಎತ್ತಿದ ಭಿನ್ನರಿಗೆ ಜೆಡಿ(ಯು) ತೆರೆದ ಬಾಗಿಲು
ಜೆಡಿಯು ತತ್ವ-ಸಿದ್ಧಾಂತ ಒಪ್ಪುವ ಮಂದಿಗೆ ಪಕ್ಷಕ್ಕೆ ಸ್ವಾಗತ -ಎಸ್.ಆರ್.ಬೊಮ್ಮಾಯಿ
ಪಕ್ಷದ ಸದಸ್ಯತ್ವ ನೊಂದಣಿ ಕಾರ್ಯಕ್ರಮದಲ್ಲಿ ಮಾತನಾಡಿದ ಜೆಡಿ(ಯು) ಮುಖಂಡ ಎಸ್.ಆರ್.ಬೊಮ್ಮಾಯಿ, ನಮ್ಮ ಪಕ್ಷದ ಸಿದ್ಧಾಂತ ಒಪ್ಪುವ ಎಲ್ಲರಿಗೂ ಪಕ್ಷದ ಬಾಗಿಲು ತೆರೆದಿದೆ. ಜೆಡಿಎಸ್‌ನಲ್ಲಿ ಅಸಮಧಾನವಾಗಿದ್ದರೆ ನಮ್ಮ ಪಕ್ಷಕ್ಕೆ ಬರಬಹುದು. ಆದರೆ ಅವಕಾಶವಾದಿಗಳಿಗೆ ನಮ್ಮಲ್ಲಿ ಅವಕಾಶ ಇಲ್ಲ ಎಂದರು.
ದೇವೇಗೌಡರನ್ನು ಜೆಡಿಎಸ್‌ನ ಪ್ರಶ್ನಾತೀತ ಹಾಗೂ ಸರ್ವೋಚ್ಛ ನಾಯಕ ಎಂದು ಸಚಿವ ಪಿಜಿಆರ್ ಸಿಂಧ್ಯ ಬಣ್ಣಿಸಿರುವುದು ನನಗೆ ಅಚ್ಚರಿ ತಂದಿಲ್ಲ. ಮುಂದೆ ಇದೇ ರೀತಿ ಅವರು ಅಧಿಕಾರಕ್ಕಾಗಿ ಧರ್ಮಸಿಂಗ್ ಅಥವಾ ಸೋನಿಯಾ ಗಾಂಧಿಯನ್ನು ಸರ್ವೋಚ್ಛ ನಾಯಕರೆಂದು ಕರೆದರೂ ಕರೆಯಬಹುದು ಎಂದು ಬೊಮ್ಮಾಯಿ ಅಭಿಪ್ರಾಯಪಟ್ಟರು.
ಪಕ್ಷದ ರಾಷ್ಟ್ರೀಯ ಕಾರ್ಯದರ್ಶಿ ಶ್ರೀಪತಿರಾವ್ ಮಾತನಾಡಿ, ದೇವೇಗೌಡರನ್ನು ಬೆನ್ನಿಹಿನ್‌ಗೆ ಹೋಲಿಸಿದರು. ಪಕ್ಷದ ಮೇಲಿನ ಹಿಡಿತ, ಪಕ್ಷದ ನಾಯಕರಿಗೆ ಮಾಡಿದ ವಂಚನೆ ಮಾಜಿ ಪ್ರಧಾನಿಯ ಇತಿಹಾಸದಲ್ಲಿ ಸೇರ್ಪಡೆಯಾಗುತ್ತಿರುವುದು ವಿಪರ್ಯಾಸಕರ ಎಂದು ಶ್ರೀಪತಿರಾವ್ ಹೇಳಿದರು.
(ಇನ್ಫೋ ವಾರ್ತೆ)
ಮುಖಪುಟ / ವಾರ್ತೆಗಳು












Click it and Unblock the Notifications