ಬೆನ್ನಿ ಹಿನ್ ಕಾರ್ಯಕ್ರಮದ ವಿರುದ್ಧ ಒಂದಾದ ಹಿಂದೂ ಸ್ವಾಮೀಜಿಗಳು
ಬೆನ್ನಿ ಹಿನ್ ಕಾರ್ಯಕ್ರಮದ ವಿರುದ್ಧ ಒಂದಾದ ಹಿಂದೂ ಸ್ವಾಮೀಜಿಗಳು
ಪ್ರಾರ್ಥನಾ ಸಭೆಯಲ್ಲಿ ದೇವೇಗೌಡ, ಧರ್ಮಸಿಂಗ್, ಅರ್ಜುನಸಿಂಗ್, ಸಾಲ್ಡಾನಾ, ಸಾಂಗ್ಲಿಯಾನ !
ಪೇಜಾವರ ವಿಶ್ವೇಶ್ವರ ತೀರ್ಥ ಸ್ವಾಮೀಜಿ, ಶ್ರೀ ಬಾಲಗಂಗಾಧರ ಸ್ವಾಮೀಜಿ, ರಾಮಕೃಷ್ಣ ಮಠದ ಶ್ರೀ ಹರ್ಷಾನಂದಜೀ, ಶ್ರೀ ಕುಮಾರ ಚಂದ್ರಶೇಖರನಾಥ ಸ್ವಾಮೀಜಿ, ಶ್ರೀ ಶಿವಪುರಿ ಸ್ವಾಮಿ, ಶ್ರೀವೀರೇಶಾನಂದ ಸರಸ್ವತಿ ಸೇರಿದಂತೆ ವಿವಿಧ ಮಠಾಧೀಶರು ಸಭೆ ನಡೆಸಿ, ಈ ನಿರ್ಣಯ ಕೈಗೊಂಡಿದ್ದಾರೆ.
ಹಿಂದುಗಳು ಎಚ್ಚೆತ್ತುಕೊಳ್ಳಬೇಕು. ಸಮ್ಮೋಹನ ಮತ್ತು ಮೋಡಿ ಮಾಡಿ ವಂಚಿಸುವ ಪ್ರಯತ್ನ ಇದಾಗಿದೆ. ಮತಾಂತರವೇ ಮೂಲ ಉದ್ದೇಶವಾಗಿರುವ ಈ ಸಭೆಯಲ್ಲಿ ಹಿಂದುಗಳು ಪಾಲ್ಗೊಳ್ಳದಂತೆ ಸ್ವಾಮೀಜಿಗಳು ಕರೆ ನೀಡಿದ್ದಾರೆ.
ರಾಷ್ಟ್ರದ ಹಿತಕ್ಕಾಗಿ ಪ್ರಾರ್ಥನೆ : ಬೆನ್ನಿಹಿನ್ ಭೇಟಿಯಲ್ಲಿ ಯಾವುದೇ ದುರುದ್ದೇಶ ಇಲ್ಲ ಎಂದು ಕಾರ್ಯಕ್ರಮದ ಸಂಘಟಕರಾದ ನಿವೃತ್ತ ಪೋಲೀಸ್ ಮಹಾನಿರ್ದೇಶಕರಾದ ರೇವಣ್ಣ ಸಿದ್ಧಯ್ಯ, ಎಫ್.ಟಿ.ಆರ್.ಕೊಲಾಸೋ, ಟಿ.ಶ್ರೀನಿವಾಸಲು ಸುದ್ದಿಗಾರರಿಗೆ ತಿಳಿಸಿದ್ದಾರೆ.
ಗಣ್ಯರ ದಂಡು : ವಿವಾದಕ್ಕೆ ಕಾರಣವಾಗಿರುವ ಬೆನ್ನಿಹಿನ್ ಸಭೆಯಲ್ಲಿ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ, ಮುಖ್ಯಮಂತ್ರಿ ಎನ್.ಧರ್ಮಸಿಂಗ್, ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವ ಅರ್ಜುನ ಸಿಂಗ್, ಕೇಂದ್ರ ಸಚಿವ ಆಸ್ಕರ್ ಫರ್ನಾಂಡಿಸ್, ಎಂ.ವಿ.ರಾಜಶೇಖರನ್, ಸಂಸದ ಎಚ್.ಟಿ.ಸಾಂಗ್ಲಿಯಾನ, ನಿವೃತ್ತ ನ್ಯಾಯಮೂರ್ತಿ ಎಂ.ಎಫ್ ಸಾಲ್ಡಾನಾ, ಮಾಜಿ ಸಚಿವ ಟಿ.ಜಾನ್ ಸೇರಿದಂತೆ ವಿವಿಧ ಗಣ್ಯರು ಪಾಲ್ಗೊಳ್ಳುತ್ತಿದ್ದಾರೆಂದು ಮೂಲಗಳು ತಿಳಿಸಿವೆ.
ಕೋರ್ಟ್ ಸೂಚನೆ : ಸಾರ್ವಜನಿಕ ಹಿತಾಸಕ್ತಿ ಅರ್ಜಿಗೆ ಸಂಬಂಧಿಸಿದಂತೆ ಬೆಂಗಳೂರಿನ ಎಂಟನೇ ಎಸಿಎಂಎಂ ನ್ಯಾಯಾಲಯ ಬೆನ್ನಿಹಿನ್‌ವಿರುದ್ಧ ಪ್ರಕರಣ ದಾಖಲಿಸಲು ಪೋಲೀಸರಿಗೆ ನಿರ್ದೇಶನ ನೀಡಿದೆ.
ಕೋಮು ಸಂಘರ್ಷಕ್ಕೆ ಆಸ್ಪದ ನೀಡುವ ಕರಪತ್ರ ಹಂಚಿದ ವ್ಯಕ್ತಿಗಳ ಮೇಲೆ ಕ್ರಮ ಜರುಗಿಸಲು ನ್ಯಾಯಾಲಯ ಸೂಚಿಸಿದೆ.
(ಇನ್ಫೋ ವಾರ್ತೆ)
ಮುಖಪುಟ / ವಾರ್ತೆಗಳು












Click it and Unblock the Notifications