ಅಕ್ರಮ ಆಸ್ತಿ ಪ್ರಕರಣದಲ್ಲಿ ಬಂಗಾರಪ್ಪ ಖುಲಾಸೆ - ಸಿಬಿಐ ಕೋರ್ಟ್
ಅಕ್ರಮ ಆಸ್ತಿ ಪ್ರಕರಣದಲ್ಲಿ ಬಂಗಾರಪ್ಪ ಖುಲಾಸೆ - ಸಿಬಿಐ ಕೋರ್ಟ್
ಬಂಗಾರಪ್ಪ ಖುಷ್ ಹುವಾ... 280 ಸಾಕ್ಷ್ಯಗಳ ವಿಚಾರಣೆ ನಂತರ ತೀರ್ಪು
ಬಂಗಾರಪ್ಪ ಆದಾಯಕ್ಕಿಂತ ಹೆಚ್ಚಿನ ಆಸ್ತಿ ಹೊಂದಿದ್ದಾರೆಂದು 1997ರಲ್ಲಿ ಸಿಬಿಐನ ಡಿವೈಎಸ್ಪಿ ನಾನಾರಾವ್ ಪ್ರಕರಣ ದಾಖಲಿಸಿದ್ದರು. ಹೈಕೋರ್ಟ್ ಮತ್ತು ಸುಪ್ರಿಂಕೋರ್ಟ್‌ನಲ್ಲಿ ವಜಾ ಆಗಿದ್ದ ಪ್ರಕರಣ, ಸಿಬಿಐ ಕೋರ್ಟ್‌ಗೆ ವರ್ಗಾವಣೆಗೊಂಡಿತ್ತು.
ಸುಮಾರು 280 ಸಾಕ್ಷ್ಯಗಳನ್ನು ಈ ಪ್ರಕರಣದಲ್ಲಿ ನ್ಯಾಯಾಲಯ ವಿಚಾರಣೆ ನಡೆಸಿತ್ತು. ಅಂತಿಮವಾಗಿ ಈ ಪ್ರಕರಣದಲ್ಲಿ ಯಾವುದೇ ಹುರುಳಿಲ್ಲ ಎಂದು ನ್ಯಾಯಾಲಯ ತೀರ್ಪು ನೀಡಿದೆ.
ಖುಷಿ : ಈ ಪ್ರಕರಣದಲ್ಲಿ ಆರೋಪ ಮುಕ್ತರಾಗಿರುವ ಬಂಗಾರಪ್ಪ ಪ್ರತಿಕ್ರಿಯಿಸಿದ್ದು ಹೀಗೆ-‘ಮಿಸ್ಟರ್ ಇಂಡಿಯಾ ಚಿತ್ರದಲ್ಲಿ ಮೊಗ್ಯಾಂಬೊ ಖುಷ್ ಹುವಾ ಅನ್ನುವ ಅಮರೀಷ್ ಪುರಿ ಸಂಭಾಷಣೆ ನನಗೆ ಈಗ ನೆನಪಾಗುತ್ತಿದೆ. ಬಂಗಾರಪ್ಪ ಖುಷ್ ಹುವಾ...’
(ಇನ್ಫೋ ವಾರ್ತೆ)
ಮುಖಪುಟ / ವಾರ್ತೆಗಳು












Click it and Unblock the Notifications