ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇಡಗುಂಜಿ ಯಕ್ಷಗಾನ ಮೇಳ -70

By Staff
|
Google Oneindia Kannada News

ಇಡಗುಂಜಿ ಯಕ್ಷಗಾನ ಮೇಳ -70
ಜನವರಿ 2ರಂದು ಶ್ರೀ ಇಡಗುಂಜಿ ಮಹಾಗಣಪತಿ ಯಕ್ಷಗಾನ ಮೇಳದಿಂದ 70ರ ಸಂಭ್ರಮದ ಆಚರಣೆ

ಬೆಂಗಳೂರು : ಕೆರೆಮನೆಯ ಶ್ರೀ ಇಡಗುಂಜಿ ಮಹಾಗಣಪತಿ ಯಕ್ಷಗಾನ ಮಂಡಳಿಯು ಜನವರಿ 2ರಂದು ರವೀಂದ್ರ ಕಲಾಕ್ಷೇತ್ರದಲ್ಲಿ ತನ್ನ 70 ವರ್ಷದ ಸಂಭ್ರಮವನ್ನು ಆಚರಿಸಿಕೊಳ್ಳುತ್ತಿದೆ.

1934ರಲ್ಲಿ ಕೆರೆಮನೆ ಶಿವರಾಮ ಹೆಗಡೆ ಅವರಿಂದ ಉತ್ತರ ಕನ್ನಡ ಜಿಲ್ಲೆಯ ಕೆರೆಮನೆಯಲ್ಲಿ ಯಕ್ಷಗಾನ ಮೇಳ ಆರಂಭವಾಯಿತು. ಪ್ರಸ್ತುತ ಕೆರೆಮನೆ ಶಂಭು ಹೆಗಡೆ ಹಾಗೂ ಕೆರೆಮನೆ ಶಿವಾನಂದ ಹೆಗಡೆ ಮೇಳದ ನೇತೃತ್ವ ವಹಿಸಿದ್ದಾರೆ.

ಮೂರು ತಲೆಮಾರಿನಿಂದ ಯಕ್ಷಗಾನವನ್ನು ಬೆಳೆಸಿಕೊಂಡು ಬಂದ ಶ್ರೀ ಇಡಗುಂಜಿ ಮಹಾ ಗಣಪತಿ ಯಕ್ಷಗಾನ ಮೇಳವು ಐವತ್ತಕ್ಕೂ ಹೆಚ್ಚು ಪ್ರಸಂಗಗಳ ಮೂಲಕ ದೇಶ ವಿದೇಶಗಳಲ್ಲಿ ಒಟ್ಟು ಏಳು ಸಾವಿರ ಪ್ರದರ್ಶನವನ್ನು ನೀಡಿದೆ. ಯಕ್ಷಗಾನ ಮೇಳದ ಅಭಿವೃದ್ಧಿಗಾಗಿ ಕೆರೆಮನೆ ಕುಟುಂಬ ತನ್ನ ತರ್ವಸ್ವವನ್ನೇ ಧಾರೆ ಎರೆದಿದೆ. ಹಲವಾರು ಯಕ್ಷಗಾನ ಕಲಾವಿದರನ್ನೂ ಸೃಷ್ಟಿಸಿದ ಕೀರ್ತಿ ಈ ಕುಟುಂಬಕ್ಕೆ ಸೇರುತ್ತದೆ.

ಈ ಸಾಧನೆಗೈದ ಇಡಗುಂಜಿ ಮಹಾಗಣಪತಿ ಯಕ್ಷಗಾನ ಮೇಳಕ್ಕೆ 70ರ ಸಂಭ್ರಮದಲ್ಲಿ ಇಡೀ ದಿನ ವಿಚಾರ ಸಂಕಿರಣ ಹಾಗೂ ಯಕ್ಷಗಾನ ಪ್ರದರ್ಶನ ಹಮ್ಮಿಕೊಳ್ಳಲಾಗಿದೆ. ಬೆಂಗಳೂರು ವಿಶ್ವವಿದ್ಯಾಲಯ ಕುಲಪತಿ ಡಾ. ಎಂ. ಎಸ್‌. ತಿಮ್ಮಪ್ಪ ವಿಚಾರ ಸಂಕಿರಣ ಉದ್ಘಾಟಿಸಲಿದ್ದಾರೆ. ಶಿವಮೊಗ್ಗ ಕುವೆಂಪು ವಿಶ್ವವಿದ್ಯಾಲಯ ಕುಲಪತಿ ಡಾ. ಚಿದಾನಂದ ಗೌಡ ಅಧ್ಯಕ್ಷತೆ ವಹಿಸಲಿದ್ದಾರೆ.

ಇದೇ ಸಂದರ್ಭದಲ್ಲಿ ನೆಬ್ಬೂರು ನಾರಾಯಣ ಭಾಗವತರಿಗೆ ಕೆರೆಮನೆ ಶಿವರಾಮ ಹೆಗಡೆ ಪ್ರಶಸ್ತಿ ನೀಡಿ ಗೌರವಿಸಲಾಗುವುದು.

ಕಂದಾಯ ಸಚಿವ ಎಂ.ಪಿ.ಪ್ರಕಾಶ್‌, ಕೆರಮನೆ ಶಂಭು ಹೆಗಡೆ, ವಿಧಾನ ಪರಿಷತ್‌ ಮಾಜಿ ಸಭಾಪತಿ ಬಿ. ಎಲ್‌. ಶಂಕರ್‌, ಹಿರಿಯ ಅಧಿಕಾರಿ ಚಿರಂಜೀವಿ ಸಿಂಗ್‌, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕ ಮುದ್ದುಮೋಹನ್‌, ವಿಜಯ ಕರ್ನಾಟಕ ಪತ್ರಿಕೆಯ ಸಂಪಾದಕ ವಿಶ್ವೇಶ್ವರ ಭಟ್‌, ನ್ಯಾಯಮೂರ್ತಿ ಎ.ಜೆ. ಸದಾಶಿವ ಮುಂತಾದವರು ಇಡಗುಂಜಿ ಯಕ್ಷಗಾನ ಮೇಳ -70ರ ಸಂಭ್ರಮದಲ್ಲಿ ಭಾಗವಹಿಸುವರು.

(ಇನ್ಫೋ ವಾರ್ತೆ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X