ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸುನಾಮಿ ಸಂತ್ರಸ್ತರ ಹಸಿವು ನೀಗಿಸಲು ಬೆಂಗಳೂರಿನಲ್ಲಿ ಚಪಾತಿ ಮೇಳ

By Staff
|
Google Oneindia Kannada News

ಸುನಾಮಿ ಸಂತ್ರಸ್ತರ ಹಸಿವು ನೀಗಿಸಲು ಬೆಂಗಳೂರಿನಲ್ಲಿ ಚಪಾತಿ ಮೇಳ
ಅಂಜ ಬೇಡಿ, ನಿಮ್ಮೊಂದಿಗೆ ನಾವಿದ್ದೇವೆ; ಸಾರ್ವಜನಿಕರ ಸ್ಪಂದನ-1.25 ಲಕ್ಷ ಚಪಾತಿಗಳು

ಬೆಂಗಳೂರು : ಮನಸೊಂದಿದ್ದರೆ ಮಾರ್ಗವು ಉಂಟು ಎಂಬಂತೆ, ಸುನಾಮಿ ಸಂತ್ರಸ್ತರಿಗೆ ಸ್ಪಂದಿಸಲು ಸಾರ್ವಜನಿಕರು ನಾನಾ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಆಹಾರ ಪದಾರ್ಥಗಳು, ಹಳೆಯ ಬಟ್ಟೆಬರೆಗಳು, ಔಷಧಿಗಳು,ಚಾಪೆ-ಹೊದಿಗೆಗಳು, ನಗದು ಸೇರಿದಂತೆ ನೆರವಿನ ಮಹಾಪೂರವೇ ಹರಿದು ಬರುತ್ತಿದೆ.

ಸಂತ್ರಸ್ತರ ಹಸಿವು ನೀಗಿಸಲು ನಗರದಲ್ಲಿ ಚಪಾತಿ ಮೇಳ ಆರಂಭಗೊಂಡಿದೆ. ಆದಿಜಗದ್ಗುರು ಶ್ರೀಶಿವರಾತ್ರೇಶ್ವರ ಭಗವತ ಮಹೋತ್ಸವ ಸಮಿತಿ 1.5 ಲಕ್ಷ ಚಪಾತಿಗಳನ್ನು ಸುನಾಮಿ ಪೀಡಿತ ಪ್ರದೇಶಗಳ ಸಂತ್ರಸ್ತರಿಗೆ ತಲುಪಿಸಲು ಸಜ್ಜಾಗಿದೆ.

ನಗರದ ರಾಧಾ ವೇಣುಗೋಪಾಲ್‌ ಎನ್ನುವ ಮಹಿಳೆ, ತಮ್ಮ ನೆರೆಹೊರೆ ಹಾಗೂ ಕಾಲೇಜು ವಿದ್ಯಾರ್ಥಿನಿಯರ ಸಹಕಾರದಿಂದ 5000 ಚಪಾತಿಗಳನ್ನು ತಯಾರಿಸಿದ್ದಾರೆ. ಅವುಗಳನ್ನು ಸಕ್ಕರೆ ಮತ್ತು ಉಪ್ಪಿನಕಾಯಿಯಾಂದಿಗೆ ಚೆನ್ನೈಗೆ ಬಸ್‌ ಮೂಲಕ ತಲುಪಿಸಿದ್ದಾರೆ.

ಕಿತ್ತೂರು ರಾಣಿ ಚೆನ್ನಮ್ಮ ಕ್ಷೇಮಾಭಿವೃದ್ಧಿ ಸಂಘದ 500 ಮಹಿಳೆಯರು, 25,000 ಚಪಾತಿಗಳನ್ನು ತಯಾರಿಸಿದ್ದಾರೆ. ಬೆಳಿಗ್ಗೆ 8.30ರಿಂದ ರಾತ್ರಿ 8 ಗಂಟೆಯ ತನಕ ನಿರಂತರವಾಗಿ ಉತ್ಸಾಹದಿಂದ ಸಂಘ ಶ್ರಮಿಸಿದೆ. ಅಲ್ಲದೇ ಐದೈದು ಚಪಾತಿಗಳನ್ನು ಸಕ್ಕರೆ ಮತ್ತು ಉಪ್ಪಿನಕಾಯಿಯಾಂದಿಗೆ ಪ್ರತ್ಯೇಕವಾಗಿ ಪ್ಯಾಕ್‌ ಮಾಡಿದೆ.

ಸುನಾಮಿ ಸಂತ್ರಸ್ತರ ಬಗ್ಗೆ ಕೇವಲ ಅನುಕಂಪ ವ್ಯಕ್ತಪಡಿಸುವುದಕ್ಕಿಂತಲೂ, ಅವರ ನೋವಿಗೆ ಸ್ಪಂದಿಸಲು ಪ್ರಜ್ಞಾವಂತ ಸಮಾಜ ಮುಂದಾಗ ಬೇಕಾಗಿದೆ.

(ಇನ್ಫೋ ವಾರ್ತೆ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X