ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸುನಾಮಿ ರುದ್ರ ನರ್ತನಕ್ಕೆ ಬಲಿಯಾದವರ ಸಂಖ್ಯೆ 70,000 !

By Staff
|
Google Oneindia Kannada News

ಸುನಾಮಿ ರುದ್ರ ನರ್ತನಕ್ಕೆ ಬಲಿಯಾದವರ ಸಂಖ್ಯೆ 70,000 !
ಹೊಸ ವರ್ಷದ ಸಂತಸ ಸಂಭ್ರಮ ಈಗ ಕಣ್ಮರೆ. ದಕ್ಷಿಣ ಏಷ್ಯಾ ರಾಷ್ಟ್ರಗಳಲ್ಲಿ ಸುನಾಮಿ ಮಾಡಿರುವ ಅನಾಹುತದ ಕರಿನೆರಳು ವಿಶ್ವದಲ್ಲಿ ಸ್ಮಶಾನ ಮೌನವನ್ನು ಸೃಷ್ಟಿಸಿದೆ. ನೋವಿನ ಮನೆಯಲ್ಲಿ ಉಳಿದ ಜೀವಗಳಿಗೆ ತುಸು ನೆಮ್ಮದಿ ನೀಡಲು ಜಗತ್ತು ಕೈಚಾಚಿದೆ.

  • ದಟ್ಸ್‌ ಕನ್ನಡ ಬ್ಯೂರೋ
Tsunami beforeTsunami after

ಬೆಂಗಳೂರು : ದಕ್ಷಿಣ ಏಷ್ಯಾರಾಷ್ಟ್ರಗಳಲ್ಲಿ ಸುನಾಮಿ ಅಬ್ಬರಕ್ಕೆ ಸತ್ತವರ ಸಂಖ್ಯೆ 10,000 ದಿಂದ 25,000, ಈಗ 70,000ಕ್ಕೆ ಹೆಚ್ಚಳವಾಗಿದೆ. ಸತ್ತವರ ಸಂಖ್ಯೆ ಕ್ಷಣ ಕ್ಷಣಕ್ಕೂಬೆಳೆಯುತ್ತಲೆ ಇದೆ.

ಬುಧವಾರದ ವರದಿಗಳ ಪ್ರಕಾರ ಸುನಾಮಿಗೆ 10,000ಕ್ಕಿಂತಲೂ ಹೆಚ್ಚು ಭಾರತೀಯರು ಬಲಿಯಾಗಿದ್ದಾರೆ. ತಮಿಳುನಾಡಿನಲ್ಲಿ 4,500, ಪುದುಚೇರಿಯಲ್ಲಿ 487, ಕೇರಳದಲ್ಲಿ 180, ಆಂಧ್ರಪ್ರದೇಶದಲ್ಲಿ 104, ಅಂಡಮಾನ್‌ ನಿಕೋಬಾರ್‌ನಲ್ಲಿ 6,000 ಮಂದಿ ಬಲಿಯಾಗಿದ್ದಾರೆ. ಇಂಡೋನೇಷ್ಯಾದಲ್ಲಿ 28,000, ಶ್ರೀಲಂಕಾದಲ್ಲಿ 18,000 ಥಾಯ್ಲೆಂಡ್‌ನಲ್ಲಿ 1,516, ಸೊಮಾಲಿಯಾದಲ್ಲಿ 100 ಮಂದಿ ಸಾವನ್ನಪ್ಪಿದ್ದಾರೆ.

ಸಮುದ್ರದ ಅಲೆಗೆ ಸಿಕ್ಕಿ ತತ್ತರಿಸಿದ ಈ ಪ್ರದೇಶಗಳಲ್ಲಿ ನರಕ ಸೃಷ್ಟಿಯಾಗಿದೆ. ಎಲ್ಲೆಡೆ ಚೆಲ್ಲಾಪಿಲ್ಲಿಯಾದ ಮನೆಯ ಅವಶೇಷಗಳು, ಹೆಣಗಳ ರಾಶಿ, ಬಂಧುಮಿತ್ರರ ರೋಧನ ಕೇಳಿ ಬರುತ್ತಿದೆ. ತಂದೆ-ತಾಯಿ ಕಳೆದುಕೊಂಡ ಅನಾಥ ಮಕ್ಕಳು ಒಂದೆಡೆಯಾದರೆ, ಮಕ್ಕಳನ್ನು ಕಳೆದುಕೊಂಡ ಹೆತ್ತವರು ಮತ್ತೊಂದೆಡೆ ಶೋಕಿಸುತ್ತಿದ್ದಾರೆ.

ಭಯ, ದುಃಖ, ಹಸಿವೆಯ ನಡುವೆ ಮತ್ತೆ ಸಮುದ್ರ ತೀರದಲ್ಲಿಯೇ ಇರಬೇಕಾದ ಆತಂಕ ನಿರಾಶ್ರಿತರ ಕಾಡುತ್ತಿದೆ. ರಾಷ್ಟ್ರದಲ್ಲಿ ಸುನಾಮಿ ಹಾವಳಿಗೆ ತತ್ತರಿಸಿದ ತಮಿಳುನಾಡು, ಪಾಂಡಿಚೇರಿ ಕರಾವಳಿ ಮತ್ತು ಅಂಡಮಾನ್‌-ನಿಕೋಬಾರ್‌ ದ್ವೀಪ ಸಮೂಹದಲ್ಲಿ ಈಗ ಸ್ಮಶಾನ ಮೌನ.

ವ್ಯಾಪಕ ಪರಿಹಾರ ಕಾರ್ಯಗಳು:

  • ಪ್ರಧಾನಿ ಮನಮೋಹನ್‌ ಸಿಂಗ್‌ ಸಂತ್ರಸ್ತರಿಗೆ 200ಕೋಟಿ ರೂ. ಬಿಡುಗಡೆ ಮಾಡುವುದಾಗಿ ಪ್ರಕಟಿಸಿದ್ದಾರೆ. ಸರಕಾರ ಸಂತ್ರಸ್ತರಿಗೆ ಸಾಲ ನೀತಿಯಲ್ಲಿ ರಿಯಾಯಿತಿ ತೋರಬೇಕೆಂದು ಬ್ಯಾಂಕ್‌ಗಳಿಗೆ ಆದೇಶ ಹೊರಡಿಸಿದೆ.
  • ಸೇನೆ ಜತೆ ಸ್ವಯಂಸೇವಾ ಸಂಸ್ಥೆಗಳು ಮತ್ತು ಸಾರ್ವಜನಿಕರು ಕೈಸೇರಿಸಿದ್ದಾರೆ. ಸಹಾಯ ಹಸ್ತದ ಮಹಾಪೂರ ಹರಿದು ಬರುತ್ತಿದೆ.
  • ಸಂತ್ರಸ್ತರಿಗೆ ವೈದಕೀಯ ನೆರವು ನೀಡಲು ಕರ್ನಾಟಕ ಸರ್ಕಾರ ಅಪಾರ ವೈದ್ಯರನ್ನು ಹಾಗೂ ಅಪಾರ ಪ್ರಮಾಣದ ಔಷಧ ಸಾಮಾಗ್ರಿಗಳನ್ನು ರವಾನಿಸಿದೆ.
  • ಸಮುದ್ರದಲ್ಲಿ ಸುನಾಮಿ ಅಲೆಗಳು ಎದ್ದಾಗ ಅದನ್ನು ಗುರುತಿಸಲು ಐಆರ್‌ಎಸ್‌-1ಸಿ, 1ಡಿ(ದೂರ ಸಂವೇದಿ ಉಪಗ್ರಹ ) ಕಲ್ಪನಾ-1(ಸಂಪನ್ಮೂಲ ಉಪಗ್ರಹ ಹಾಗೂ ಹವಾಮಾನ ವೀಕ್ಷಣಾ ಉಪಗ್ರಹ)ಗಳನ್ನು, 5. 6 ಮೀಟರ್‌ ವ್ಯಾಸದ ಕ್ಯಾಮೆರಾಗಳನ್ನು ಆಂಧ್ರಪ್ರದೇಶ, ತಮಿಳುನಾಡು, ಕೇರಳ, ಪಾಂಡಿಚೇರಿ ರಾಜ್ಯಗಳ ಮೇಲೆ ಅಳವಡಿಸಲಾಗಿದೆ.
ನೀವು ನೆರವು ನೀಡಿ : ಸುನಾಮಿ ಸಂತ್ರಸ್ತರಿಗೆ ನೆರವು ನೀಡಲು ಇಚ್ಛಿಸುವ ಸಾರ್ವಜನಿಕರು, ಈ ಕೆಳಗಿನ ವಿಳಾಸಗಳನ್ನು ಬಳಸಿಕೊಳ್ಳಬಹುದು. ನಗದು ಅಥವಾ ಚೆಕ್‌ ರೂಪದಲ್ಲಿ ದೇಣಿಗೆ ನೀಡಬಹುದು.

ವಿಧಾನಸೌಧದ ಸ್ಟೇಟ್‌ ಬ್ಯಾಂಕ್‌ ಆಫ್‌ ಮೈಸೂರು ಶಾಖೆಯಲ್ಲಿ ಮುಖ್ಯಮಂತ್ರಿಗಳ ಪರಿಹಾರ ನಿಧಿ(ಸುನಾಮಿ ಭೂಕಂಪ)ಹೆಸರಲ್ಲಿ ತೆರೆಯಲಾಗಿರುವ ಉಳಿತಾಯ ಖಾತೆ(ಸಂ. 01100050110)ಗೆ ಜಮೆ ಮಾಡಬಹುದು. ಅಲ್ಲದೇ ಎಲ್ಲಾ ಜಿಲ್ಲೆಗಳಲ್ಲಿ ಜಿಲ್ಲಾಧಿಕಾರಿಗಳ ಕಜೇರಿಯಲ್ಲಿ ನಗದು ಮತ್ತಿತರ ನೆರವನ್ನು ನೀಡಬಹುದು.

(ಇನ್ಫೋ ವಾರ್ತೆ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X