ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸುನಾಮಿ-ಭಾರತದ 7,400 ಮಂದಿ ಸೇರಿದಂತೆ 25,000 ಮಂದಿ ಸಾವು

By Staff
|
Google Oneindia Kannada News

ಸುನಾಮಿ-ಭಾರತದ 7,400 ಮಂದಿ ಸೇರಿದಂತೆ 25,000 ಮಂದಿ ಸಾವು
ಅಮೇರಿಕಾದಿಂದ ಹದಿನೈದು ದಶಲಕ್ಷ ಡಾಲರ್‌ ನೆರವು, ಸಂತ್ರಸ್ಥ ಸ್ಥಳಗಳಿಗೆ ಆಡ್ವಾಣಿ, ಸೋನಿಯಾ ಭೇಟಿ

ಚೆನ್ನೈ: ಭಾನುವಾರದ ಸುನಾಮಿ ಜಲಪ್ರಳಯದ ಪರಿಣಾಮ ಸತ್ತವರ ಸಂಖ್ಯೆ ಹೆಚ್ಚುತ್ತಲೇ ಇದೆ. ಮಂಗಳವಾರದ ಅಧಿಕೃತ ವರದಿಗಳ ಪ್ರಕಾರ ಭಾರತದ 7,400 ಮಂದಿ ಸೇರಿದಂತೆ ದಕ್ಷಿಣ ಏಷ್ಯಾದಲ್ಲಿ 25,000 ಮಂದಿ ಸಾವನ್ನಪ್ಪಿದ್ದಾರೆ.

ತಮಿಳುನಾಡಿನಲ್ಲಿ 4,500, ಅಂಡಮಾನ್‌ನಲ್ಲಿ 3000, ಶ್ರೀಲಂಕಾದಲ್ಲಿ 12, 000 ಮಂದಿ ಬಲಿಯಾಗಿದ್ದು, ಸಾಮೂಹಿಕ ಸಂಸ್ಕಾರ ಕಾರ್ಯ ನಡೆಯುತ್ತಿದೆ. ವೇಲಾಂಕಣ್ಣಿನಲ್ಲಿ 500 ಶವಗಳು ಸಿಕ್ಕಿವೆ. ಕಾಣೆಯಾದವರನ್ನು ಹೆಲಿಕಾಪ್ಟರ್‌ ಮೂಲಕ ಹುಡುಕಲಾಗುತ್ತಿದೆ.

ಸಂತ್ರಸ್ಥರಿಗಾಗಿ ಬಿಹಾರ್‌ ಮುಖ್ಯಮಂತ್ರಿ ರಾಬ್ರಿದೇವಿ ಹತ್ತು ಕೋಟಿ ರೂ.ಗಳ ನೆರವನ್ನು ಮಂಗಳವಾರ ಪ್ರಕಟಿಸಿದ್ದಾರೆ. ಬಿಹಾರ್‌ ಸರಕಾರ ಪ್ರಧಾನಿಗಳ ಸಂತ್ರಸ್ಥರ ಪರಿಹಾರ ನಿಧಿಗೆ ಹಣವನ್ನು ನೀಡಲಿದೆ ಎಂದು ಸುದ್ದಿಗಾರರಿಗೆ ತಿಳಿಸಿದರು.

ಕೇಂದ್ರರೈಲ್ವೆ ಸಚಿವ ಲಾಲೂಪ್ರಸಾದ್‌ ಯಾಧವ್‌, ರೈಲ್ವೆ ಪರಿಹಾರ ನಿಧಿಯಿಂದ ಸಂತ್ರಸ್ಥರಿಗಾಗಿ 30ಲಕ್ಷರೂಗಳ ನೆರವನ್ನು ಘೋಷಿಸಿದ್ದಾರೆ.

ಭೇಟಿ: ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾಗಾಂಧಿ, ರಕ್ಷಣಾ ಸಚಿವ ಪ್ರಣಬ್‌ ಮುಖರ್ಜಿರೊಂದಿಗೆ ಚೆನ್ನೈ ಮತ್ತು ನಾಗಪಟ್ಟನಂಗೆ ಭೇಟಿ ನೀಡಿ ಪರಿಸ್ಥಿತಿ ವೀಕ್ಷಿಸಿದರು.

ಬಿಜೆಪಿ ಅಧ್ಯಕ್ಷ ಎಲ್‌.ಕೆ.ಆಡ್ವಾಣಿ ಮಂಗಳವಾರ, ತಮಿಳುನಾಡು ಮತ್ತು ಕೇರಳಕ್ಕೆ ಭೇಟಿ ನೀಡಿ ನೊಂದವರಿಗೆ ಸಾಂತ್ವನ ಹೇಳಿದರು.

ನೆರವು: ಸಂತ್ರಸ್ಥ ಪ್ರದೇಶಗಳಿಗೆ ನೆರವಾಗಲು ಅಮೇರಿಕಾ 15 ದಶಲಕ್ಷ ಡಾಲರ್‌ ನೆರವನ್ನು ಪ್ರಕಟಿಸಿದ್ದು, ಅದರಲ್ಲಿ 4ದಶಲಕ್ಷ ಡಾಲರ್‌ ಹಣವನ್ನು ಬಿಡುಗಡೆ ಮಾಡಿದೆ ಎಂದು ಮೂಲಗಳು ತಿಳಿಸಿವೆ.

(ಏಜನ್ಸೀಸ್‌)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X